ಬುದ್ಧಿವಂತರ ಆಟದಲ್ಲಿ ಸ್ನೇಹಿತರೇ ದೂರ-ದೂರ: ಬಿಗ್ ಬಾಸ್ ಕೊಟ್ಟ ಟಾಸ್ಕ್ʼನಿಂದ ಕುಚಿಕುಗಳಲ್ಲಿ ಮುನಿಸು!

ನವೆಂಬರ್ 5, 2024 - 20:14
 0  27
ಬುದ್ಧಿವಂತರ ಆಟದಲ್ಲಿ ಸ್ನೇಹಿತರೇ ದೂರ-ದೂರ: ಬಿಗ್ ಬಾಸ್ ಕೊಟ್ಟ ಟಾಸ್ಕ್ʼನಿಂದ ಕುಚಿಕುಗಳಲ್ಲಿ ಮುನಿಸು!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಐದನೇ ವಾರಕ್ಕೆ ಕಾಲಿಟ್ಟಿದೆ.

ಇದೀಗ ಬಿಗ್​ಬಾಸ್​ ಮನೆಯಲ್ಲಿ ತುಂಬಾ ಕ್ಲೋಸ್​ ಆಗಿದ್ದ ಗೌತಮಿ, ಮೋಕ್ಷಿತಾ ಹಾಗೂ ಉ್ರಗಂ ಮಂಜು ಅವರ ನಡುವೆ ಬಿರುಕು ಮೂಡಿಬಿಡ್ತಾ ಅಂತ ಅನುಮಾನ ಶುರುವಾಗಿದೆ.

ಬಿಗ್​ಬಾಸ್​ ಶುರುವಾದಾಗಿನಿಂದ ಈ ಮೂವರು ಸ್ನೇಹಿತರಾಗಿದ್ದರು. ಏನೇ ಆದರೂ ಈ ಇಬ್ಬರು ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಆದರೆ ಇದೀಗ ಬಿಗ್​ಬಾಸ್​ ಕೊಟ್ಟ ಒಂದೇ ಒಂದು ಟಾಸ್ಕ್​ನಿಂದ ಈ ಮೂವರು ದಿಕ್ಕಾಪಾಲು ಆಗಿದ್ದಾರೆ. ಬಿಗ್​ಬಾಸ್​ ಕೊಟ್ಟಿದ್ದ ಬುದ್ಧಿವಂತರ ಆಟದಿಂದ ಫ್ರೆಂಡ್‌ಶಿಪ್‌ಗೆ ಪೂರ್ಣವಿರಾಮ ಬಿತ್ತಾ ಅಂತ ವೀಕ್ಷಕರಲ್ಲಿ ಗೊಂದಲ ಮನೆ ಮಾಡಿದೆ.

ಟಾಸ್ಕ್​ ಆಡುತ್ತಿದ್ದ ಉಗ್ರಂ ಮಂಜು ಅವರು ಬುದ್ಧಿವಂತಿಕೆಯಿಂದ ಆಡಿದ್ದರು. ಆಗ ಗೌತಮಿ ಹಾಗೂ ಮೋಕ್ಷಿತಾ ಅವರ ಆಟವನ್ನು ನೋಡಿ ಬೇಸರ ಹೊರ ಹಾಕಿದ್ದಾರೆ. ಈ ಮೂವರ ಜಗಳ ಶುರುವಾಗಿದ್ದು ಹೇಗೆ? ಈ ಜಗಳಕ್ಕೆ ಮುಖ್ಯ ಕಾರಣವೇನು? ಇದಾದ ಬಳಿಕ ಏನೆಲ್ಲಾ ಆಯ್ತು? ಎಂಬುವುದರ ಬಗ್ಗೆ ಇಂದಿನ ಎಪಿಸೋಡ್​ ಮೂಲಕ ತಿಳಿದು ಬರಲಿದೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow