ಗಂಡನ ಗೆಳೆಯನೊಂದಿಗೆ ಲವ್ವಿ ಡವ್ವಿ: ಮದುವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ! ಮುಂದೇನಾಯ್ತು..?

ಕೋಲಾರ: ವಿವಾಹದ ಭರವಸೆ ನೀಡಿ ದೈಹಿಕ ಸಂಬಂಧ ಹೊಂದಿದ ನಂತರ ಮದುವೆಗೆ ಹಿಂದೇಟು ಹಾಕಿದ ಪ್ರಿಯಕರನ ವಿರುದ್ಧ ಗರ್ಭಿಣಿಯಾದ ವಿವಾಹಿತ ಮಹಿಳೆಯೊಬ್ಬರು ಪ್ರತಿಷ್ಠಾನದ ಮನೆಯಲ್ಲಿ ಏಕಾಂಗಿ ಧರಣಿ ನಡೆಸಿದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.
ತಿಮ್ಮಸಂದ್ರ ಮೂಲದ ಮಹಿಳೆ ಮತ್ತು ಶ್ರೀನಿವಾಸಪುರದ ಅಮರನಾಥ್ ನಡುವೆ ಕಳೆದ ಮೂರು ವರ್ಷಗಳಿಂದ ಪರಿಚಯ ಇತ್ತು. ಈ ನಡುವೆ ಇಬ್ಬರ ನಡುವೆ ಪ್ರೇಮ ಸಂಬಂಧ ಬೆಳೆಯಿದ್ದು, ಮದುವೆ ಮಾಡುವ ಭರವಸೆ ನೀಡಿ ಅಮರನಾಥ್ ದೈಹಿಕ ಸಂಬಂಧಕ್ಕೆ ಮುಂದಾಗಿದ್ದ ಎನ್ನಲಾಗಿದೆ. ಇದೀಗ ಮದುವೆಗೆ ನಿರಾಕರಣೆ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಮಹಿಳೆ ಈಗ ಗರ್ಭಿಣಿಯಾಗಿದ್ದು, ನ್ಯಾಯಕ್ಕಾಗಿ ಅಮರನಾಥ್ ನಿವಾಸದ ಎದುರು ಧರಣಿ ನಡೆಸಿದ್ದಾರೆ. ಈ ಹಿಂದೆ ಕೂಡ ಮಹಿಳೆ ಅಮರನಾಥ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆಗ ಆತ ತಪ್ಪು ಪುನರಾವರ್ತನೆ ಮಾಡದಂತೆ ಮುಚ್ಚಳಿಕೆ ಬರೆದುಕೊಂಡಿದ್ದ.ಈ ಸಂಬಂಧ ಶ್ರೀನಿವಾಸಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ವಿಷಯ ಶಾಂತಿಯುತವಾಗಿ ಇತ್ಯರ್ಥವಾಗುವಂತೆ ಪೊಲೀಸರು ಮಧ್ಯಸ್ಥಿಕೆ ವಹಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






