ಗಂಡು ಮಕ್ಕಳಿಗೂ ಸಿಹಿ ಸುದ್ದಿ ಕೊಡ್ತಾರಾ DCM ಡಿಕೆಶಿ: ಶೀಘ್ರವೇ ಫ್ರೀ ಬಸ್ ವ್ಯವಸ್ಥೆ!?

ನವೆಂಬರ್ 15, 2024 - 17:58
 0  14
ಗಂಡು ಮಕ್ಕಳಿಗೂ ಸಿಹಿ ಸುದ್ದಿ ಕೊಡ್ತಾರಾ DCM ಡಿಕೆಶಿ: ಶೀಘ್ರವೇ ಫ್ರೀ ಬಸ್ ವ್ಯವಸ್ಥೆ!?

ಬೆಂಗಳೂರು:- ಗಂಡು ಮಕ್ಕಳಿಗೂ ಉಚಿತ ಪ್ರಯಾಣ ನೀಡುವ ಬೇಡಿಕೆ ಕೇಳಿ ಬಂದಿರುವ ವಿಚಾರವಾಗಿ DCM ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.  ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಒಂದು ಪ್ರಶ್ನೆ ಕೇಳಿದ್ದಾನೆ. ಫ್ರೀ ಬಸ್ ಯೋಜನೆಯಲ್ಲಿ ನಮ್ಮ ತಾಯಿ ಸಂಚಾರ ಮಾಡುತ್ತಾರೆ. ನನ್ನ ತಾಯಿ ನನ್ನ ಬಿಟ್ಟು ನನ್ನ ಅಕ್ಕ-ತಂಗಿಯನ್ನು ಮಾತ್ರ ಕರೆದುಕೊಂಡು ಹೋಗುತ್ತಾರೆ. ಬಸ್ಸಲ್ಲಿ ಗಂಡು ಮಕ್ಕಳಿಗೂ ಫ್ರೀ ಪ್ರಯಾಣ ಸಿಗುತ್ತಾ? ಎಂದು ಪ್ರಶ್ನಿಸಿದ್ದಾರೆ.

ಮಕ್ಕಳ ಜೊತೆ ಸಂವಾದದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು ವಯಸ್ಸಿನ ಮಿತಿ ನಿರ್ಧರಿಸಿ ಫ್ರೀ ಪ್ರಯಾಣಕ್ಕೆ ಚಿಂತನೆ ನಡೆಸಲಾಗುವುದು. ಒಂದು ಏಜ್​ವರೆಗೆ ಫ್ರೀ ನೀಡಲು ಯೋಚಿಸ್ತೀವಿ ಎಂದಿದ್ದಾರೆ.

ಡಿಕೆ ಶಿವಕುಮಾರ್ ಅವರ ಈ ಮಾತಿನಿಂದ ಶಕ್ತಿ ಯೋಜನೆ ವಿಸ್ತರಣೆ ಆಗುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಲಾಗಿದೆ. ಪುರುಷರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಪ್ರಸ್ತಾವನೆ ಇಲ್ಲ. ಪುರುಷರಿಗೆ ಉಚಿತ ಪ್ರಯಾಣ ನೀಡುವ ಯೋಜನೆ ಸದ್ಯಕ್ಕಿಲ್ಲ. ನಮ್ಮ ಬಳಿ ಅಂತಹ ಯಾವುದೇ ಪ್ರಸ್ತಾವನೆಯೂ ಇಲ್ಲ. ಡಿಕೆ ಶಿವಕುಮಾರ್ ಭೇಟಿ ಮಾಡಿದಾಗ ಇದರ ಬಗ್ಗೆ ವಿಚಾರಿಸುತ್ತೇನೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow