ವಿಶ್ವ ಬ್ಯಾಂಕ್ ಮುಂದೆ ಕೈ ಚಾಚಿದ ಪಾಲಿಕೆ: BBMPಗೆ ಸಾಲ ಕೊಟ್ರೆ ಬೆಂಗಳೂರು ಬರ್ಬಾದ್ ಗ್ಯಾರಂಟಿ!

ಬೆಂಗಳೂರು:- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸಾಲಕ್ಕಾಗಿ ವಿಶ್ವಬ್ಯಾಂಕ್ ಕೈ ಚಾಚಿದ್ದು, ಹೀಗಾಗಿ ಸಾಲ ಕೊಡದಂತೆ ಸಾಮಾಜಿಕ ಕಾರ್ಯಕರ್ತರೊಬ್ಬರು ಮನವಿ ಮಾಡಿದ್ದಾರೆ.
ನಾಲ್ಕು ಸಾವಿರ ಕೋಟಿ ಸಾಲಕ್ಕಾಗಿ ವಿಶ್ವ ಬ್ಯಾಂಕ್ ಗೆ ಬಿಬಿಎಂಪಿ ಮನವಿ ಮಾಡಿದೆ. ಬಿಬಿಎಂಪಿ ಮನವಿಗೆ ಸ್ಪಂದಿಸಿದ ವಿಶ್ವ ಬ್ಯಾಂಕ್ ಸಾಲ ಕೊಡಲು ಮುಂದಾಗಿದೆ.
ಪ್ರವಾಹ ಪರಿಸ್ಥಿತಿ ಇದೆ ಇದರ ನಿರ್ವಹಣೆಗಾಗಿ ಪಾಲಿಕೆಯು, 4 ಸಾವಿರ ಕೋಟಿ ಸಾಲ ಕೇಳಿದೆ. ಆದ್ರೆ ಹಣ ದುರುಪಯೋಗ ಸಾಧ್ಯತೆ ಇದೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.
ಯಾವುದೇ ಕಾರಣಕ್ಕೂ ಬಿಬಿಎಂಪಿ ಗೆ ಸಾಲ ನೀಡದಂತೆ ವಿಶ್ವ ಬ್ಯಾಂಕ್ ಗೆ ದೂರು ಕೊಟ್ಟಿದ್ದಾರೆ. ಬಿಬಿಎಂಪಿರಾಜಕಾಲುವೆ ಒತ್ತುವರಿ ತೆರವಿಗೆ ಹಾಗೂ ಹೂಳೆತ್ತಲು ಪ್ರತಿ ವರ್ಷ ಸಾವಿರಾರು ಕೋಟಿ ಹಣ ವೆಚ್ಚ ಆಗ್ತಿದೆ. ಆದ್ರೆ ರಾಜಕಾಲುವೆ ಒತ್ತುವರಿ ತೆರವು ಆಗ್ತಿಲ್ಲ, ಹೂಳು ಎತ್ತುತ್ತಿಲ್ಲ ಎಂದು ಅಸಮಧಾನ ಹೊರ ಹಾಕಿದ್ದಾರೆ. ಬಿಬಿಎಂಪಿಗೆ ಹಣ ಸಾಲ ಕೊಟ್ರೆ ಮತ್ತೆ ಬೆಂಗಳೂರು ಬರ್ಬಾದ್ ಆಗುತ್ತೆ. ಸಾಲದ ಹಣ ವಾಪಸ್ ಕಟ್ಟುವ ನೆಪದಲ್ಲಿ ನೀರಿನ ಸೆಸ್ ಹಾಕುತ್ತಾರೆ. ಕಸದ ಸೆಸ್,ಆಸ್ತಿ ತೆರಿಗೆ ಹೆಚ್ಚಳ ನೆಪದಲ್ಲಿ ಜನ ಸಾಮಾನ್ಯರಿಗೆ ಆರ್ಥಿಕ ಹೊರೆಯಾಗುತ್ತೆ.
ಸಾಲದ ಹಣ ಕೂಡಾ ಬಿಬಿಎಂಪಿ ದುರ್ಬಳಕೆ ಮಾಡಿಕೊಳ್ಳುತ್ತೆ. ಇದ್ರಿಂದ ಯಾವುದೇ ಕಾರಣಕ್ಕೂ ಬಿಬಿಎಂಪಿ ಗೆ ಸಾಲ ನೀಡಬೇಡಿ ಅಂತ ವಿಶ್ವ ಬ್ಯಾಂಕ್ ಗೆ ಮಾಹಿತಿ ಅದ್ಯಾಯನ ಕೇಂದ್ರ ದೂರು ಸಲ್ಲಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?






