ಬೆಂಗಳೂರಿನಲ್ಲೊಬ್ಬ ಬೀದಿ ಕಾಮುಕ: ರಸ್ತೆಯಲ್ಲಿ ಹೋಗ್ತಿದ್ದ ಯುವತಿಗೆ ಬ್ಯಾಡ್ ಟಚ್ ಮಾಡಿ ಎಸ್ಕೆಎಫ್!

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲೊಬ್ಬ ಬೀದಿ ಕಾಮುಕನ ಉಪಟಳ ಜೋರಾಗಿದೆ. ಕತ್ತಲಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬೈಕ್ ನಲ್ಲಿ ಬಂದು ಬ್ಯಾಡ್ ಟಚ್ ಮಾಡಿ ಎಸ್ಕೇಪ್ ಆಗಿದ್ದಾನೆ. ಇದೇ ನವೆಂಬರ್ 11 ರ ರಾತ್ರಿ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಈ ಘಟನೆ ಜರುಗಿದೆ.
ಪುಂಡನ ನೀಚ ಕೃತ್ಯ ಸಿಸಿಟವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಕ್ ಸವಾರ ಅರುಣ್ ಎಂಬಾತನಿಂದ ಅಸಭ್ಯ ವರ್ತನೆ ತೋರಲಾಗಿದೆ. ಈ ಬಗ್ಗೆ ರಾಮಮೂರ್ತಿ ನಗರ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಆರೋಪಿ ಅರುಣ್ ನನ್ನ ಪೊಲೀಸರು ಬಂಧಿಸಿದ್ದಾರೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನಿಮ್ಮ ಪ್ರತಿಕ್ರಿಯೆ ಏನು?






