ಗುಪ್ತಚರ ಇಲಾಖೆ ಹುದ್ದೆಗೆ ಅರ್ಜಿ ಆಹ್ವಾನ: ವೇತನ 69 ಸಾವಿರ! ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ
10ನೇ ತರಗತಿ ಪಾಸಾಗಿರುವ ಯುವಕರಿಗೆ ಸರಕಾರದಿಂದ ಮತ್ತೊಂದು ಉತ್ತಮ ಅವಕಾಶ ಲಭ್ಯವಾಗಿದೆ. ಭಾರತ ಸರ್ಕಾರದ ಗೃಹ ಸಚಿವಾಲಯದ ಅಧೀನದ ಗುಪ್ತಚರ ಇಲಾಖೆಯಾದ ಇಂಟೆಲಿಜೆನ್ಸ್ ಬ್ಯೂರೋ (IB) ತನ್ನ ವಿಭಾಗದಲ್ಲಿ ಭದ್ರತಾ ಸಹಾಯಕ/ ಕಾರ್ಯನಿರ್ವಾಹಕ (Security Assistant/Executive) ಹುದ್ದೆಗಳಿಗೆ 4987 ಖಾಲಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಅರ್ಜಿ ಸಲ್ಲಿಕೆ ಮಾಹಿತಿಗಳು:
-
ಅರ್ಜಿ ಪ್ರಾರಂಭ ದಿನಾಂಕ: ಜುಲೈ 26, 2025
-
ಅಂತಿಮ ದಿನಾಂಕ: ಆಗಸ್ಟ್ 17, 2025
-
ಅರ್ಜಿ ಸಲ್ಲಿಸುವ ಜಾಗ:
ಅರ್ಹತಾ ಮಾನದಂಡಗಳು:
-
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು.
-
ಗರಿಷ್ಠ ವಯೋಮಿತಿ: 27 ವರ್ಷ
-
ಎಸ್‌ಸಿ/ಎಸ್‌ಟಿ: 5 ವರ್ಷ ಸಡಿಲಿಕೆ
-
ಓಬಿಸಿ: 3 ವರ್ಷ ಸಡಿಲಿಕೆ
-
ದಿವ್ಯಾಂಗ ಅಭ್ಯರ್ಥಿಗಳಿಗೆ: 10 ವರ್ಷ ಸಡಿಲಿಕೆ
-
ಅರ್ಜಿ ಶುಲ್ಕ:
-
ಸಾಮಾನ್ಯ/ಓಬಿಸಿ ವರ್ಗ: ₹650
-
ಎಸ್‌ಸಿ/ಎಸ್‌ಟಿ ವರ್ಗ: ₹550
-
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
-
ಟೈಯರ್ 1 ಮತ್ತು ಟೈಯರ್ 2 ಪರೀಕ್ಷೆಗಳು
-
ಪರೀಕ್ಷೆಯ ಅಧಿಸೂಚನೆ ಹಾಗೂ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು
ವೇತನ ವಿವರ:
-
ವೇತನ ಶ್ರೇಣಿ: ₹21,700 – ₹69,100 (ಲೆವೆಲ್ 3)
ಅರ್ಜಿ ಸಲ್ಲಿಸುವ ವಿಧಾನ:
-
ಅಧಿಕೃತ ವೆಬ್‌ಸೈಟ್‌ಗೆ ಹೋಗಿ (ncs.gov.in)
-
'IB Security Assistant Recruitment 2025' ಲಿಂಕ್ ಮೇಲೆ ಕ್ಲಿಕ್ ಮಾಡಿ
-
ಹೊಸ ಬಳಕೆದಾರರಾಗಿದ್ದರೆ ಮೊದಲು ನೋಂದಾಯಿಸಿ
-
ಅರ್ಜಿ ಫಾರ್ಮ್ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
-
ಶುಲ್ಕ ಪಾವತಿಸಿ, ಫಾರ್ಮ್ ಸಲ್ಲಿಸಿ
ನಿಮ್ಮ ಪ್ರತಿಕ್ರಿಯೆ ಏನು?