ಗುರುಪ್ರಸಾದ್ 1000 ಸಲ ಸಾಯುತ್ತೇನೆ ಎಂದು ಹೇಳುತ್ತಿದ್ದ: ನಟ ಜಗ್ಗೇಶ್‌ ಪ್ರತಿಕ್ರಿಯೆ

ನವೆಂಬರ್ 3, 2024 - 20:03
 0  59
ಗುರುಪ್ರಸಾದ್ 1000 ಸಲ ಸಾಯುತ್ತೇನೆ ಎಂದು ಹೇಳುತ್ತಿದ್ದ: ನಟ ಜಗ್ಗೇಶ್‌ ಪ್ರತಿಕ್ರಿಯೆ

ಬೆಂಗಳೂರು: ಗುರುಪ್ರಸಾದ್ 1000 ಸಲ ಸಾಯುತ್ತೇನೆ ಎಂದು ಹೇಳುತ್ತಿದ್ದ ಎಂದು ಹಿರಿಯ ನಟ ಜಗ್ಗೇಶ್‌ ಹೇಳಿದ್ದಾರೆ. ನಿರ್ದೇಶಕನ ಸಾವಿನ ಬಗ್ಗೆ ಮಾತನಾಡಿದ ಅವರು, ಗುರುಪ್ರಸಾದ್ ಯಾರ ಮಾತು ಕೂಡ ಕೇಳುತ್ತಿರಲಿಲ್ಲ. ಆತ ನಮ್ಮ ಮನೆಯಲ್ಲಿ ಬೆಳೆದಿರುವ ಹುಡುಗ. ಗುರುಪ್ರಸಾದ್‌ನ ನಾನು ಹೆಚ್ಚಿಗೆ ಮಾತನಾಡಿಸುತ್ತಿರಲಿಲ್ಲ. ಕುಡಿತದ ಚಟಕ್ಕೆ ಬಿದ್ದು ತುಂಬಾ ಹಾಳಾಗಿದ್ದ.

ಒಳ್ಳೆಯ ಬರವಣಿಗೆ ಶಕ್ತಿ ಹೊಂದಿರುವ ಆ ವ್ಯಕ್ತಿ 1000 ಸಲ ಸಾಯುತ್ತೇನೆ ಎಂದು ಹೇಳಿದ್ದ. ನಾನು ಈ ಬಗ್ಗೆ ಹಲವು ಬಾರಿ ಬುದ್ಧಿವಾದ ಹೇಳಿದ್ದೆ. ಗುರುಪ್ರಸಾದ್ ಮೊದಲ ಪತ್ನಿ ಜತೆಗೂ ಸರಿಯಾಗಿ ಇರಲಿಲ್ಲ ಎಂದು ತಿಳಿಸಿದ್ದಾರೆ.

ಆತ ಯಾರ ಮಾತನ್ನು ಕೇಳುತ್ತಿರಲಿಲ್ಲ. ತಾನು ಹೇಳಿದ್ದೇ ಸರಿ ಎಂದು ವಾದಿಸುತ್ತಿದ್ದ. ಪ್ರಶ್ನೆ ಮಾಡಿದರೆ ವಿವಾದ ಮಾಡುತ್ತಿದ್ದ. ಸಿನಿಮಾದಲ್ಲಿ ವಿಪರೀತ ಡಬಲ್‌ ಮೀನಿಂಗ್‌ ಡೈಲಾಗ್‌ ಹಾಕುತ್ತಿದ್ದ. ಡಬಲ್‌ ಮೀನಿಂಗ್‌ ಡೈಲಾಗ್‌ ಬಳಸಬೇಡ ಎಂದು ಸಲಹೆ ನೀಡಿದ್ದೆ.

ಅದಕ್ಕೆ ಆತ ನನ್ನ ವಿರುದ್ಧವೇ ಅಪಪ್ರಚಾರ ಮಾಡಿ ಜಗ್ಗೇಶ್‌ ಸಿನಿಮಾದಲ್ಲಿ ನಟಿಸಲ್ಲ ಎಂದಿದ್ದ. ಇದರಿಂದ ನನಗೆ ಅಂದು ಬಹಳ ಬೇಸರವಾಗಿ ನಾನು ಕಣ್ಣೀರು ಹಾಕಿದ್ದೆ ಎಂದು ತಿಳಿಸಿದರು. ಸಿನಿಮಾ ಹಿಟ್‌ ಆದ ನಂತರ ಸೋಲಲು ಆರಂಭವಾಯಿತು. ಈ ಸೋಲನ್ನು ಅರಗಿಸಿಕೊಳ್ಳುವ ಶಕ್ತಿ ಆತನ ಬಳಿ ಇರಲಿಲ್ಲ. ಸೋಲುಗಳಿಂದ ಪಾಠ ಕಲಿಯುವ ಮನಸ್ಥಿತಿ ಇರಲಿಲ್ಲ. ಕುಡಿತದ ಚಟಕ್ಕೆ ಬಿದ್ದಿದ್ದ. ತನ್ನ ತಾಯಿಯನ್ನೇ ತುಚ್ಛವಾಗಿ ನಿಂದಿಸುತ್ತಿದ್ದ ಎಂದು ಹೇಳಿದರು.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow