ಘೋರ ದುರಂತ: ನಕಲಿ ವೈದ್ಯರ ಹಾವಳಿಗೆ ಹೋಯ್ತು 8 ವರ್ಷದ ಬಾಲಕಿಯ ಜೀವ!

ಅಕ್ಟೋಬರ್ 3, 2025 - 13:59
ಅಕ್ಟೋಬರ್ 3, 2025 - 14:00
 0  16
ಘೋರ ದುರಂತ: ನಕಲಿ ವೈದ್ಯರ ಹಾವಳಿಗೆ ಹೋಯ್ತು 8 ವರ್ಷದ ಬಾಲಕಿಯ ಜೀವ!

ಕೋಲಾರ: ಕೋಲಾರದಲ್ಲಿ ಘೋರ ದುರಂತ ನಡೆದಿದ್ದು, ಅನಾರೋಗ್ಯದಿಂದ ಆಸ್ಪತ್ರೆಗೆ ಹೋದ ಬಾಲಕಿಯೊಬ್ಬಳು ವೈದ್ಯರ ಚಿಕಿತ್ಸೆಯಿಂದಲೇ ಸಾವನ್ನಪ್ಪಿರುವ  ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ದೊಡ್ಡಿಗ್ಗಲೂರು ಗ್ರಾಮದಲ್ಲಿ ನಡೆದಿದೆ.

ಮಾಲೂರು ತಾಲೂಕಿನ ದೊಡ್ಡ ಇಗಲೂರು ಗ್ರಾಮದ ನಿವಾಸಿಗಳಾದ ತಾನವಿ (8) ಎಂಬ ಬಾಲಕಿಯೇ ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿ. ಬಾಲಕಿ ಜ್ವರದಿಂದ ಬಳಲುತ್ತಿದ್ದಾಗ ಪೋಷಕರು ಸಂತೆಹಳ್ಳಿ ಗ್ರಾಮದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕ್ಲಿನಿಕ್​ನಲ್ಲಿ ಮಗುವಿಗೆ ನೀಡಿದ ಇಂಜೆಕ್ಷನ್​ನಿಂದ ಬಾಲಕಿ ತೀವ್ರ ಅಸ್ವಸ್ಥಳಾಗಿದ್ದಾಳೆ.

ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿಗೆ ಚಿಕತ್ಸೆ ಮಾಡಿದವರು ನಕಲಿ ವೈದ್ಯರೆಂದು ತಿಳಿದುಬಂದಿದ್ದು, ಅವರು ಕೊಟ್ಟ ಇಂಜೆಕ್ಷನ್ ಪರಿಣಾಮವಾಗಿಯೇ ಬಾಲಕಿ ಸಾವನ್ನಪ್ಪಿದ್ದಾಳೆಂದು ಆರೋಪ ಕೇಳಿಬಂದಿದೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ರಿಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow