ಕೃಷಿ ವಿವಿಯಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ! ಇಂದೇ ವಾಕ್-ಇನ್ ಇಂಟರ್ವ್ಯೂʼಗೆ ಹಾಜರಾಗಿ
ಧಾರವಾಡ: ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ಯೋಜನಾ ಸಹಾಯಕ ಹಾಗೂ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಳಗಾವಿ, ಹಾವೇರಿ, ವಿಜಯಪುರ ಮತ್ತು ಗದಗ ಜಿಲ್ಲೆಗಳಲ್ಲಿ ಕೆಲಸ ಮಾಡುವ ಅವಕಾಶ ಇದಾಗಿದೆ.
ಒಟ್ಟು ಮೂರು ಹುದ್ದೆಗಳಿದ್ದು, ಯೋಜನಾ ಸಹಾಯಕ ಒಂದು ಹುದ್ದೆಗೆ B.Sc ಅಥವಾ B.Tech ಅರ್ಹತೆ ಅಗತ್ಯ. ಸಹಾಯಕ ಹುದ್ದೆಗೆ ಎರಡು ಸ್ಥಾನಗಳಿದ್ದು, 10ನೇ ತರಗತಿ ಉತ್ತೀರ್ಣತೆ ಬೇಕಾಗಿದೆ. ಈ ಹುದ್ದೆಗಳಿಗೆ ತಿಂಗಳಿಗೆ ₹15,000 ರಿಂದ ₹30,000 ವರೆಗೆ ಸಂಬಳ ನೀಡಲಾಗುತ್ತದೆ. ಅಕ್ಟೋಬರ್ 13ರಂದು ನಡೆಯುವ ವಾಕ್-ಇನ್ ಇಂಟರ್ವ್ಯೂಗೆ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು.
ಇಂಟರ್ವ್ಯೂ ಸ್ಥಳ:
Chamber of Associate Director of Research,
ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಧಾರವಾಡ – 580005.
ಕರ್ನಾಟಕ ಸರ್ಕಾರದಡಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?