ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ: PUC ಪಾಸಾದವರು ಇಂದೇ ಅರ್ಜಿ ಸಲ್ಲಿಸಿ!

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ರೈಲ್ವೆ ಇಲಾಖೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಮೂಲಕ ಹಲವಾರು ವರ್ಷಗಳಿಂದ ಸರ್ಕಾರಿ ಉದ್ಯೋಗಗಳಿಗಾಗಿ ಕಾಯುತ್ತಿರುವವರಿಗೆ ರೈಲ್ವೆ ಇಲಾಖೆ ಮತ್ತೊಂದು ಗುಡ್ನ್ಯೂಸ್ ಕೊಟ್ಟಂತಾಗಿದೆ.
ರೈಲ್ವೆ ನೇಮಕಾತಿ ಮಂಡಳಿ ಇದೀಗ ಹೊಸ ಉದ್ಯೋಗಗಳನ್ನು ಭರ್ತಿ ಮಾಡುತ್ತಿದ್ದು ಈ ಸಂಬಂಧ ಅರ್ಜಿಗಳನ್ನು ಆಹ್ವಾನ ಮಾಡಿದೆ. ಮಿನಿಸ್ಟ್ರಿಯಲ್ ಮತ್ತು ಐಸೊಲೇಟೆಡ್ ಕೆಟಗರಿ ಉದ್ಯೋಗಗಳು ಇವಾಗಿದ್ದು ಸಂಬಂಧಿಸಿದ ಎಲ್ಲ ಮಾಹಿತಿ ಇಲ್ಲಿ ಕೊಡಲಾಗಿದೆ. ಅರ್ಹ ಹಾಗೂ ಆಸಕ್ತಿ ಇರುವವರು ಇವುಗಳಿಗೆ ಅಪ್ಲೇ ಮಾಡಬಹುದು. ಇದಕ್ಕೂ ಮೊದಲು ಈ ಲೇಖನವನ್ನು ಅಭ್ಯರ್ಥಿಗಳು ಸಂಪೂರ್ಣವಾಗಿ ಓದಿಕೊಂಡು ಎಲ್ಲ ಮಾಹಿತಿ ಪಡೆಯಿರಿ.
ಜೂನಿಯರ್ ಸ್ಟೆನೋಗ್ರಾಫರ್, ಜೂನಿಯರ್ ಟ್ರಾನ್ಸ್ಲೇಟರ್ ಸೇರಿದಂತೆ ವಿವಿಧ ಹುದ್ದೆಗಳು ಇವೆ.
ವೇತನ ಶ್ರೇಣಿ
29,200 ಇಂದ 1,12,400 ರೂಪಾಯಿಗಳು
ಯಾವ್ಯಾವ ಉದ್ಯೋಗ, ಎಷ್ಟು ಕೆಲಸಗಳು?
ದೈಹಿಕ ತರಬೇತಿ ಬೋಧಕ- 338
ಸ್ನಾತಕೋತ್ತರ ಶಿಕ್ಷಕರು- 187
ತರಬೇತಿ ಪಡೆದ ಪದವೀಧರ ಶಿಕ್ಷಕರು- 03
ಜೂ. ಟ್ರಾನ್ಸ್ಲೇಟರ್ ಹಿಂದಿ- 54
ಸೀನಿಯರ್ ಪಬ್ಲಿಸಿಟಿ ಇನ್ಸ್ಪೆಕ್ಟರ್- 20
ಸ್ಟಾಪ್ ಆ್ಯಂಡ್ ವೆಲ್ಪರ್ ಇನ್ಸ್ಪೆಕ್ಟರ್- 18
ಪ್ರಯೋಗಾಲಯ ಸಹಾಯಕ- 02
ಲ್ಯಾಬ್ ಸಹಾಯಕ ಗ್ರೇಡ್ III- 130
ಶೈಕ್ಷಣಿಕ ಅರ್ಹತೆ:-
ದ್ವಿತಿಯ ಪಿಯುಸಿಯಲ್ಲಿ ಸೈನ್ಸ್, ಡಿಪ್ಲೋಮಾ, ಸ್ನಾತಕೋತ್ತರ ಹಾಗೂ ಬಿಇಡಿ, ಪದವಿ ಹಾಗೂ ಬಿಇಡಿ, ಸಿಟಿಇಟಿ, ಪದವಿ ಹಾಗೂ ಬಿಪಿಎಡ್, ಸ್ನಾತಕೋತ್ತರದಲ್ಲಿ ಹಿಂದಿ- ಇಂಗ್ಲಿಷ್, ಪದವಿಯಲ್ಲಿ ಜರ್ನಲಿಸಂ, ಡಿಪ್ಲೋಮಾ, ಮಾಸ್ಕಮ್ಯೂನಿಕೇಶನ್, ಎಲ್ಎಲ್ಬಿ, ಎಂಬಿಎ,
ಅರ್ಜಿ ಶುಲ್ಕ
ಜನರಲ್, ಇಡಬ್ಲುಎಸ್, ಒಬಿಸಿ- 500 ರೂಪಾಯಿ
ಎಸ್ಸಿ, ಎಸ್ಟಿ, ವಿಶೇಷ ಚೇತನ- 200 ರೂಪಾಯಿ
ವಯೋಮಿತಿ
18 ರಿಂದ 48 ವರ್ಷಗಳು
ಈ ಹುದ್ದೆಗಳಿಗೆ ಸಂಬಂಧಿಸಿದ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭದ ದಿನಾಂಕ- 07 ಜನವರಿ 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- 06 ಫೆಬ್ರವರಿ 2025
ನಿಮ್ಮ ಪ್ರತಿಕ್ರಿಯೆ ಏನು?






