ಗೋಲ್ಡ್ ಪ್ರಿಯರಿಗೆ ಬ್ಯಾಡ್ ನ್ಯೂಸ್! ಇಂದು ಕೂಡ ಚಿನ್ನ-ಬೆಳ್ಳಿ ಬೆಲೆ ಏರಿಕೆ! ಹೀಗಿದೆ ಇಂದಿನ ದರಗಳು
ಬೇರೆ ದೇಶಗಳಿಗೆ ಹೋಲಿಸಿದೆರೆ, ಭಾರತೀಯರಿಗೆ ಅದರಲ್ಲೂ ಮಹಿಳೆಯರಿಗೆ ಚಿನ್ನ ಅಂದರೆ ಪ್ರೀತಿ. ಯಾವುದೇ ಸಮಾರಂಭ ಇರಲಿ, ಹಬ್ಬವಿರಲಿ ಅವರು ಮೊದಲು ಕೇಳುವುದೇ ಚಿನ್ನ. ಈ ಹಬ್ಬಕ್ಕಾದ್ರೂ ಒಂದು ಸ್ವಲ್ಪ ಬಂಗಾರ ತೆಗೆದುಕೊಳ್ಳೋಣ ಅನ್ನೋ ಬೇಡಿಕೆ ಇವರ ಬಾಯಲ್ಲಿ ಬರುತ್ತದೆ.
ರಾಜ ಮಹಾರಾಜರು ಕೂಡ ಬೆಳ್ಳಿ, ಬಂಗಾರಗಳ ಬಳಕೆಯನ್ನು ಯಥೇಚ್ಛವಾಗಿ ಮಾಡುತ್ತಿದ್ದರು ಎಂದು ದಾಖಲೆಗಳು ತಿಳಿಸುತ್ತವೆ. ವೀಕೆಂಡ್ನಲ್ಲಿ ಚಿನ್ನ ಅಷ್ಟೇ ಅಲ್ಲ ಬೆಳ್ಳಿ ಬೆಲೆಯು ಸಾಕಷ್ಟು ದುಬಾರಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ವಾರದಲ್ಲಿ ಎರಡು ದಿನ ಇಳಿಕೆ ಬಳಿಕ ಬಂಗಾರದ ಬೆಲೆಯು ಸತತ ಎರಡನೇ ವಹಿವಾಟಿನಲ್ಲಿ ಶನಿವಾರ ಬೆಲೆ ಹೆಚ್ಚಳಗೊಂಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಏರಿಕೆ ದಾಖಲಾಗಿದೆ.
-
22 ಕ್ಯಾರೆಟ್ ಚಿನ್ನ: 10 ಗ್ರಾಂಗೆ ₹550 ಏರಿಕೆ → ₹1,06,000
-
24 ಕ್ಯಾರೆಟ್ ಚಿನ್ನ: 10 ಗ್ರಾಂಗೆ ₹600 ಏರಿಕೆ → ₹1,15,630
-
ಬೆಳ್ಳಿ: ಪ್ರತಿ ಕೆಜಿಗೆ ₹6,000 ಏರಿಕೆ → ₹1,49,000
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ)
| ನಗರ | ಬೆಲೆ |
|---|---|
| ಬೆಂಗಳೂರು | ₹1,15,480 |
| ನಾಗ್ಪುರ | ₹1,15,480 |
| ಮುಂಬೈ | ₹1,15,480 |
| ಚೆನ್ನೈ | ₹1,15,480 |
| ಕೋಲ್ಕತ್ತಾ | ₹1,15,480 |
| ಪಾಟ್ನಾ | ₹1,15,530 |
| ಸೂರತ್ | ₹1,15,530 |
| ಚಂಡೀಗಢ | ₹1,15,630 |
| ಲಕ್ನೋ | ₹1,15,630 |
ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ (ಪ್ರತಿ ಕೆಜಿ)
| ನಗರ | ಬೆಲೆ |
|---|---|
| ದೆಹಲಿ | ₹1,49,000 |
| ಬೆಂಗಳೂರು | ₹1,49,500 |
| ಚೆನ್ನೈ | ₹1,59,000 |
| ಮುಂಬೈ | ₹1,49,000 |
| ಕೋಲ್ಕತ್ತಾ | ₹1,49,000 |
| ಕೇರಳ | ₹1,59,000 |
| ಪಾಟ್ನಾ | ₹1,49,000 |
| ಸೂರತ್ | ₹1,49,000 |
| ಚಂಡೀಗಢ | ₹1,49,000 |
| ಲಕ್ನೋ | ₹1,49,000 |
ನಿಮ್ಮ ಪ್ರತಿಕ್ರಿಯೆ ಏನು?