ಚಿಕ್ಕಬಳ್ಳಾಪುರದ ನಂದಿಗಿರಿಧಾಮಕ್ಕೆ ಬಂದ ಬ್ರಿಟೀಷ್ ವ್ಯಕ್ತಿ: ಕಾರಣ ಏನು ಗೊತ್ತಾ?

ಸೆಪ್ಟೆಂಬರ್ 9, 2025 - 21:10
 0  13
ಚಿಕ್ಕಬಳ್ಳಾಪುರದ ನಂದಿಗಿರಿಧಾಮಕ್ಕೆ ಬಂದ ಬ್ರಿಟೀಷ್ ವ್ಯಕ್ತಿ: ಕಾರಣ ಏನು ಗೊತ್ತಾ?

ಚಿಕ್ಕಬಳ್ಳಾಪುರ:- ಪೂರ್ವಿಕರ ಸಮಾಧಿ ಹುಡುಕಿಕೊಂಡು ನಂದಿಗಿರಿಧಾಮಕ್ಕೆ  ಬ್ರಿಟೀಷ್ ವ್ಯಕ್ತಿ ಬಂದಿದ್ದಾರೆ.

ಬ್ರಿಟೀಷರ ಆಳ್ವಿಕೆಯಲ್ಲಿದ್ದ ಮೈಸೂರು ರಾಜ್ಯದ ಕೆಲವು ಬ್ರಿಟೀಷ್ ಅಧಿಕಾರಿಗಳು, ನಂದಿಗಿರಿಧಾಮವನ್ನೇ ತಮ್ಮ ಆವಾಸ ಸ್ಥಾನ ಮಾಡಿಕೊಂಡಿದ್ದರು. ಮೈಸೂರು ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದ ಬ್ರಿಟೀಷ್ ಅಧಿಕಾರಿ, ಸಾಹಿತಿ ಹಾಗೂ ಮುದ್ರಣಕಾರ ಜಾನ್ ಗ್ಯಾರೆಟ್ ಅವರ ಪತ್ನಿ ಸೋಫಿಯಾ ಗ್ಯಾರೆಟ್ ಅವರ ಸಮಾಧಿಯನ್ನು ಹುಡುಕಿಕೊಂಡು ಅವರ ಸಂಬಂಧಿಗಳು ಬಂದಿದ್ದರು. ಇತ್ತೀಚೆಗೆ ಲಂಡನ್‍ನಿಂದ ಗುಜರಾತ್‍ಗೆ ಆಗಮಿಸಿ, ಅಲ್ಲಿಂದ ನಂದಿಗಿರಿಧಾಮಕ್ಕೆ ಆಗಮಿಸಿ ಸೋಫಿಯಾ ಗ್ಯಾರೆಟ್ ಸಮಾಧಿಯನ್ನು ಹುಡುಕಾಡಿ ತಮ್ಮವರನ್ನು ನೆನೆದು ವ್ಯಕ್ತಿಯೊಬ್ಬರು ಕಣ್ಣೀರು ಹಾಕಿದ್ದಾರೆ.

ಈ ಬಗ್ಗೆ ಪ್ರವಾಸಿ ಮಿತ್ರ ಗೈಡ್ ನಳಿನಿಯವರು ಪ್ರತಿಕ್ರಿಯಿಸಿ, ಕಳೆದ ಕೆಲವು ತಿಂಗಳುಗಳ ಹಿಂದೆ ಎರಡು ಮೂರು ಬಾರಿ ನಂದಿಗಿರಿಧಾಮಕ್ಕೆ ಆಗಮಿಸಿದ್ದರು. ಸೋಫಿಯಾ ಗ್ಯಾರೆಟ್ ಸಂಬಂಧಿಗಳು ಗಿರಿಧಾಮದಲ್ಲಿ ಸಮಾಧಿ ಹುಡುಕಾಡಿದ್ದರು. ಆದ್ರೆ ಪತ್ತೆಯಾಗಿರಲಿಲ್ಲ. ಮತ್ತೊಂದೆಡೆ ದಾಖಲೆಗಳಲ್ಲಿ ಸೋಫಿಯಾ ಗ್ಯಾರೆಟ್ ಸಮಾಧಿ ನಂದಿಗಿರಿಧಾಮದಲ್ಲಿ ಇದೆ ಎನ್ನುವ ಮಾಹಿತಿ ಹಿನ್ನಲೆ ಮತ್ತೆ ಮೂರನೆ ಬಾರಿಗೆ ಗಿರಿಧಾಮಕ್ಕೆ ಆಗಮಿಸಿ, ಪ್ರವಾಸಿ ಮಿತ್ರ ಗೈಡ್ ಮೂಲಕ ಸಮಾಧಿಯನ್ನು ಪತ್ತೆ ಹಚ್ಚಿದ್ದಾರೆ ಎಂದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow