ಗೌತಮ್ ಗಂಭೀರ್ ಗೆ ಬಿಗ್ ಶಾಕ್: ಮುಖ್ಯ ಕೋಚ್ ಪವರ್ ಕಟ್ ಮಾಡಿದ BCCI! ಏನದು?

ಗೌತಮ್ ಗಂಭೀರ್ ಹೆಡ್ಕೋಚ್ ಆಗಿ ನೇಮಕಗೊಂಡ ನಂತರ ಟೀಮ್ ಇಂಡಿಯಾದಲ್ಲಿ ಎಲ್ಲವೂ ಬದಲಾಗಿದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಟೆಸ್ಟ್ ಸರಣಿಗಳನ್ನು ಟೀಮ್ ಇಂಡಿಯಾ ಕಳೆದುಕೊಂಡಿದೆ. ಈ ಸೋಲಿನ ನಂತರ ಟೀಮ್ ಇಂಡಿಯಾ ಆಟಗಾರರು ಸೇರಿದಂತೆ ಗೌತಮ್ ಗಂಭೀರ್ ಕೂಡ ಟೀಕೆಗಳನ್ನು ಎದುರಿಸುವಂತಾಗಿದೆ.
ಇದೀಗ ಟೀಮ್ ಇಂಡಿಯಾ ಮುಖ್ಯ ಕೋಚ್ಗೆ ಬಿಗ್ ಶಾಕ್ ಎದುರಾಗಿದ್ದು, BCCI ಗಂಭೀರ್ ಪವರ್ ಕಟ್ ಮಾಡಿದೆ. ಇತ್ತೀಚೆಗಷ್ಟೇ ಕೋಚ್ ಗೌತಮ್ ಗಂಭೀರ್, ಕ್ಯಾಪ್ಟನ್ ರೋಹಿತ್ ಶರ್ಮಾ, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಜೊತೆ ಬಾಸ್ಗಳು ರಿವ್ಯೂ ಮೀಟಿಂಗ್ ನಡೆಸಿದ್ರು. ಈಗ ಹೈವೋಲ್ಟೆಜ್ ಸಭೆಯ ಬಳಿಕ ಹೊಸ ರೂಲ್ಸ್ ಜಾರಿಗೆ ತರಲು ಬಿಗ್ಬಾಸ್ಗಳು ಮುಂದಾಗಿದ್ದಾರೆ.
ಟೀಮ್ ಇಂಡಿಯಾ ಕ್ರಿಕೆಟರ್ಸ್ ಫಾರಿನ್ ಟೂರ್ ಹೊರಟ್ರೆ ಸಾಕು. ಪತ್ನಿ, ಮಕ್ಕಳು, ಫ್ಯಾಮಿಲಿ ಎಂಟ್ರಿಗೆ ಬಿಸಿಸಿಐ ಫ್ರಿಡಂ ನೀಡಿತ್ತು. ಮುಕ್ತಾಯವಾದ ಆಸಿಸ್ ಟೂರ್ನಲ್ಲೂ ಬಿಗ್ ಸ್ಟಾರ್ಗಳಾದ ವಿರಾಟ್ ಕೊಹ್ಲಿ, ಜಸ್ಪ್ರಿತ್ ಬೂಮ್ರಾ, ರಾಹುಲ್ ಕೂಡ ಪತ್ನಿಯರ ಜೊತೆ ಬ್ಯುಸಿಯಾಗಿದ್ರು.
ಆಟಗಾರರು ಆಟದ ಮೇಲೆ ಗಮನವಹಿಸೋದನ್ನ ಕಡಿಮೆ ಮಾಡಿ, ಟೂರ್ಗಳಲ್ಲಿ ಫ್ಯಾಮಿಲಿಗಳಿಗೆ ಹೆಚ್ಚು ಸಮಯ ನೀಡೋಕೆ ಶುರುವಿಟ್ಟುಕೊಂಡಿದ್ದು ಬಿಸಿಸಿಐ ಬಾಸ್ಗಳ ಕಣ್ಣು ಕೆಂಪಾಗಿಸಿದ್ದು, ಸ್ಟ್ರಿಕ್ಟ್ ರೂಲ್ಸ್ ಜಾರಿಗೆ ಮುಂದಾಗಿದ್ದಾರೆ. 45ಕ್ಕಿಂತ ಹೆಚ್ಚು ದಿನಗಳ ಟೂರ್ ಇದ್ರೆ, 14 ದಿನ ಮಾತ್ರ ಕುಟುಂಬದ ಜೊತೆಗಿರಲು ಅನುಮತಿ ನೀಡಲು ಬಾಸ್ಗಳು ತೀರ್ಮಾನಿಸಿದ್ದಾರೆ
ಕೋಚ್ ಆಗಲು ಗಂಭೀರ್ ಒಪ್ಪಿದ್ದೇ ತಡ, ಕೇಳಿದ್ದಕ್ಕೆಲ್ಲಾ ಬಿಸಿಸಿಐ ಬಾಸ್ಗಳು ಅಸ್ತು ಎಂದಿದ್ರು. ಎಷ್ಟರಮಟ್ಟಿಗೆ ಅಂದ್ರೆ, ಈ ಹಿಂದೆ ಟೀಮ್ ಇಂಡಿಯಾದ ಕೋಚ್ಗೂ ಪರ್ಸನಲ್ ಮ್ಯಾನೇಜರ್ ಇರಲಿಲ್ಲ. ಆದ್ರೀಗ, ಗಂಭೀರ್ಗೆ ವೈಯಕ್ತಿಕವಾಗಿ ಗೌರವ್ ಅರೋರ ಎಂಬ ಪರ್ಸನಲ್ ಮ್ಯಾನೇಜರ್ ಇದ್ರು. ಇದೀಗ ಬಿಸಿಸಿಐ ಬಾಸ್ಗಳು ಇದನ್ನೆಲ್ಲಾ ಟೀಮ್ ಇಂಡಿಯಾದಿಂದ ದೂರ ಇಡುವಂತೆ ಖಡಕ್ ಸೂಚನೆ ನೀಡಿದ್ದಾರೆ. ಈ ಗೌರವ್ ಅರೋರಗೆ ಇನ್ಮುಂದೆ ಟೀಮ್ ಹೋಟೆಲ್ಗೆ ಎಂಟ್ರಿ ಇಲ್ಲ. ಟೀಮ್ ಬಸ್ನಲ್ಲಿ ಟ್ರಾವೆಲ್ ಮಾಡುವಂತಿಲ್ಲ. ಪಂದ್ಯದ ವೇಳೆ ವಿಐಪಿ ಬಾಕ್ಸ್ನಲ್ಲಿ ಕೂರುವಂತಿಲ್ಲ ಎಂದು ವಾರ್ನ್ ಮಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






