ಚೆನ್ನೈ ಮೇಲೆ ಗೆದ್ದ ಬೆನ್ನಲ್ಲೇ ಅಂಧಾಬಿಮಾನ ತೋರಿದ ಬೆಂಗಳೂರು ಅಭಿಮಾನಿ!

ಮೇ 6, 2025 - 21:03
ಮೇ 6, 2025 - 15:52
 0  16
ಚೆನ್ನೈ ಮೇಲೆ ಗೆದ್ದ ಬೆನ್ನಲ್ಲೇ ಅಂಧಾಬಿಮಾನ ತೋರಿದ ಬೆಂಗಳೂರು ಅಭಿಮಾನಿ!

ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ RCB ಭರ್ಜರಿ ಪ್ರದರ್ಶನ ತೋರುತ್ತಿದೆ. ಅದರಂತೆ ಮೊನ್ನೆ- ಮೊನ್ನೆ ಅಂದ್ರೆ ಶನಿವಾರ ನಡೆದ  CSK ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದು ಬೀಗಿತ್ತು. 

ಸಿಎಸ್​ಕೆ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಗೆಲ್ಲುತ್ತಿದ್ದಂತೆ ಕೊಹ್ಲಿ ಬ್ಯಾನರ್ ಮುಂದೆ ಅಭಿಮಾನಿಗಳು, ಮೇಕೆ ಬಲಿಕೊಟ್ಟು ಸಂಭ್ರಮಿಸಿದ್ದಾರೆ. ಮೊಳಕಾಲ್ಮೂರು ತಾಲೂಕಿನ ಮಾರಮ್ಮನಹಳ್ಳಿ ಗ್ರಾಮದಲ್ಲಿ ಆರ್​ಸಿಬಿ ಅಭಿಮಾನಿಗಳು ಮಚ್ಚಿನಿಂದ ಮೇಕೆಯನ್ನು ಕಡಿದು ಕೊಹ್ಲಿ ಪೊಸ್ಟರ್​ಗೆ ರಕ್ತಾಭಿಷೇಕ ಮಾಡಿದ್ದಾರೆ. ಇದೇ ದೃಶ್ಯವನ್ನು ತಮ್ಮ ಫೋನ್​ನಲ್ಲಿ ಸೆರೆ ಮಾಡಿಕೊಂಡು call-me-143-kalki ಹೆಸರಿನ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ.

ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಶಾಕ್ ಆಗಿದ್ದಾರೆ. ಅಲ್ಲದೆ ಕೇಸ್ ದಾಖಲಿಸಿ ತನಿಖೆಗೆ ಇಳಿದಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow