ಜಾನ್ವಿ ಕಪೂರ್ ಕಾಂಡೋಮ್ ಜಾಹೀರಾತಿಗೆ ಪರ್ಫೆಕ್ಟ್! ಖ್ಯಾತ ಉದ್ಯಮಿ ಹೇಳಿಕೆ ವೈರಲ್!

ಜಾನ್ವಿ ಕಪೂರ್ ಕಾಂಡೋಮ್ ಜಾಹೀರಾತಿಗೆ ಸೂಕ್ತ ಎಂದು ಉದ್ಯಮಿ ಓರ್ವರು ನೀಡಿರುವ ಹೇಳಿಕೆ ವೈರಲ್ ಆಗಿದೆ. ಮ್ಯಾನ್ಫೋರ್ಸ್ ಕಾಂಡೋಮ್ ಕಂಪನಿಯ ಎಂಡಿ ಹಾಗೂ ಸಹ ಸಂಸ್ಥಾಪಕ ರಾಜೀವ್ ಜುನೇಜಾ ಅವರು ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ಕಂಪನಿಯ ಕಾಂಡೋಮ್ ಜಾಹೀರಾತಿಗೆ ಮೊದಲು ಸನ್ನಿ ಲಿಯೋನ್ ಪ್ರಚಾರ ರಾಯಭಾರಿ ಆಗಿದ್ದರು. ಇತ್ತೀಚೆಗೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರನ್ನು ಆಯ್ಕೆ ಮಾಡಲಾಯಿತು. ಬೇರೆ ಯಾರು ಸೂಕ್ತ ಎಂದು ಕೇಳಿದ್ದಕ್ಕೆ ಜಾನ್ವಿ ಕಪೂರ್ ಹಾಗೂ ರಣಬೀರ್ ಕಪೂರ್ ಹೆಸರನ್ನು ರಾಜೀವ್ ಜುನೇಜಾ ಹೇಳಿದ್ದಾರೆ
ಜಾನ್ವಿ ಕಪೂರ್ ಅವರು ಕಾಂಡೋಮ್ ಜಾಹೀರಾತಿಗೆ ಲಾಯಕ್ಕು. ಅವರೇ ಉತ್ತಮ ಆಯ್ಕೆ. ಪುರುಷರಲ್ಲಿ ರಣಬೀರ್ ಕಪೂರ್ ಬೆಸ್ಟ್’ ಎಂದು ರಾಜೀವ್ ಜುನೇಜಾ ಅವರು ಹೇಳಿದ್ದಾರೆ. ಈ ಹೇಳಿಕೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೊಂದು ವರ್ಗದ ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ. ‘ಇದು ರಾಜೀವ್ ಜುನೇಜಾ ಅವರ ವೈಯಕ್ತಿಯ ಅಭಿಪ್ರಾಯ. ಇದರಲ್ಲಿ ಆಕ್ಷೇಪಾರ್ಹ ಅಂಶ ಏನೂ ಇಲ್ಲ’ ಎಂದು ಕೆಲವರು ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






