ಜೀ ರಿಯಾಲಿಟಿ ಶೋಗೆ ಬಂದ ಕಿಚ್ಚ : ಅಮ್ಮನ ಪ್ರತಿಮೆ ನೋಡಿ ಸುದೀಪ್ ಭಾವುಕ!

ಜೀ ಕನ್ನಡ ರಿಯಾಲಿಟಿ ಶೋನಲ್ಲಿ ಕಿಚ್ಚ ಕಾಲಿಟ್ಟಿದ್ದು, ವೇದಿಕೆ ಮೇಲೆ ಸುದೀಪ್ ಕಣ್ಣೀರಿಟ್ಟಿದ್ದಾರೆ.
ನಟ ಸುದೀಪ್ ಅವರು ಜೀ ಕನ್ನಡ ರಿಯಾಲಿಟಿ ಶೋಗೆ ಆಗಮಿಸಿದ್ದು, ಈ ಪ್ರೋಮೋ ಎಲ್ಲಾರ ಗಮನ ಸೆಳೆಯುವಂತೆ ಮಾಡಿದೆ. ಜೀ ಕನ್ನಡದಲ್ಲಿ 'ಸರಿಗಮಪ' ಶೋ ಪ್ರಸಾರ ಕಾಣುತ್ತಿದೆ. ಈ ಶೋ ನಲ್ಲಿ ಕುಟುಂಬ ಸಮೇತರಾಗಿ ಸರಿಗಮಪ ಶೋಗೆ ಸುದೀಪ್ ಅವರ ಕುಟುಂಬ ಸರ್‌ಪ್ರೈಸ್ ಆಗಿ ಎಂಟ್ರಿಕೊಟ್ಟಿದ್ದಾರೆ.
ಸರಿಗಮಪ ರಿಯಾಲಿಟಿ ಶೋಗೆ ಸುದೀಪ್ ಅವರು ಅವರ ಪತ್ನಿ ಪ್ರಿಯಾ ಜೊತೆಗೆ ಮೊದಲು ಬಂದಿದ್ದಾರೆ. ನಂತರ ಕಾರ್ಯಕ್ರಮದ ಮಧ್ಯ ಮಗಳು ಸಾನ್ವಿ ಕೂಡ ವೇದಿಕೆ ಏರಿದ್ದಾರೆ. ಈ ವಾರಂತ್ಯದಲ್ಲಿ ಈ ಎಪಿಸೋಡ್ ಪ್ರಸಾರ ಕಾಣಲಿದೆ. ಇದರ ಪ್ರೋಮೋ ಗಮನ ಸೆಳೆದಿದೆ. ಸದ್ಯ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡ್ತಾ ಇದೆ. ಮ್ಯಾಕ್ಸ್ ಯಶಸ್ಸಿನಿಂದ ಫುಲ್ ಖುಷ್ ಆಗಿರೊ ಕಿಚ್ಚ ಸುದೀಪ್ ಅವರು ಜೀ ಕನ್ನಡದ ಶೋ ನಲ್ಲಿ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೇ ತಮ್ಮ ಪತ್ನಿಗಾಗಿ ಹಾಡನ್ನು ಸಹ ಹಾಡಿದ್ದಾರೆ. ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಮ್ಯಾಕ್ಸ್ ಮೂವಿಗೆ ತೆಲುಗು, ತಮಿಳಿನಲ್ಲೂ ಒಳ್ಳೆ ರೆಸ್ಪಾನ್ಸ್ ಬರ್ತಾ ಇದ್ದು, ವರ್ಷಾಂತ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಗೆಲುವಿನ ನಗೆ ಮೂಡಿದೆ.
ಇನ್ನೂ ಸ್ಯಾಂಡಲ್‌ವುಡ್‌ನ ಬಾದ್‌ಷಾ, ಕಿಚ್ಚ ಸುದೀಪ ಅವರ ಆಗಮನವನ್ನು ಸಮಭ್ರಮಿಸಿದೆ ಸರಿಗಮಪ. ಈ ವಾರ ಪ್ರೇಕ್ಷಕರಿಗೆ ಇದೆ ‘Max’imum ಮನರಂಜನೆಯ ಹಬ್ಬ. ಹೌದು ಸುದೀಪ್ ಮಾತ್ರವಲ್ಲ ಮಗಳು ಮತ್ತು ಹೆಂಡತಿ ಕೂಡ ಬಂದಿದ್ದರು. ಸುದೀಪ್ ಲಾಲಿ ಹಾಡನ್ನು ಹಾಡಿದ್ದಾರೆ. ವೇದಿಕೆಯಲ್ಲಿ ಮಕ್ಕಳ ಜತೆ ಕುಪ್ಪಳಿಸಿದ್ದಾರೆ. ಸುದೀಪ್ ಅಮ್ಮನ ಪ್ರತಿಮೆ ಕಂಡು ಬಿಗಿದಪ್ಪಿ ಕಣ್ಣೀರಿಟ್ಟಿದ್ದಾರೆ. ಜತೆಗೆ ಸಾನ್ವಿ ಕೂಡ ಅತ್ತಿದ್ದಾರೆ. ಒಟ್ಟಾರೆ ಇಡೀ ಕಾರ್ಯಕ್ರಮ ಭಾವುಕತೆಗೆ ಸಾಕ್ಷಿಯಾಗಿದೆ. ಈ ಶನಿವಾರ, ಭಾನುವಾರದ ಎಪಿಸೋಡ್‌ನಲ್ಲಿ ಪ್ರಸಾರ ಕಾಣಲಿದೆ.
ಇನ್ನೂ ಸರಿಗಮಪ ರಿಯಾಲಿಟಿ ಶೋಗೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ಹಿಂದಿನ ನೆನಪುಗಳನ್ನ ಮೆಲಕು ಹಾಕಿದ್ದಾರೆ. ಮೊದಲು ಮೇಕಪ್ ಹಾಕಿ ಪಾದಾರ್ಪಣೆ ಮಾಡಿದ ಸ್ಟುಡಿಯೋ ಇದು ಎಂದು ಕಿಚ್ಚ ಸುದೀಪ್ ಅವರು ಖುಷಿ ಕ್ಷಣವನ್ನ ಹಂಚಿಕೊಂಡಿದ್ದಾರೆ. ಅಲ್ಲದೇ ಇದೇ ವೇದಿಕೆಯ ಮೇಲೆ ತಂದೆಗಾಗಿ ಸಾನ್ವಿ ಸುದೀಪ್ ಅವರು ಒಂದು ಸಾಂಗ್ ಹಾಡಿದ್ದಾರೆ. ಈ ವೇಳೆ ಸುದೀಪ್ ಮಗಳ ಹಾಡು ಕೇಳಿ ಭಾವುಕರಾಗಿದ್ದಾರೆ. ಇನ್ನೂ ಜೀ ಕನ್ನಡ ಕುಟುಂಬ ಸುದೀಪ್ ಅವರಿಗೆ ಆಗಲಿದ ತಾಯಿಯ ಮೂರ್ತಿಯನ್ನ ಸರ್‌ಪ್ರೈಸ್ ಆಗಿ ನೀಡಿದ್ದಾರೆ. ಈ ವೇಳೆ ಸುದೀಪ್ ಅವರು ತಾಯಿಯನ್ನ ನೆನೆಪು ಕಣ್ಣೀರು ಹಾಕಿದ್ದು, ಸರಿಗಮಪ ರಿಯಾಲಿಟಿ ಶೋನಲ್ಲಿ ಭಾಗಿಯಾದ ಪ್ರತಿಯೊಬ್ಬರು ಸಹ ಕಣ್ಣೀರಿಟ್ಟಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






