ಜುಲೈ ತಿಂಗಳಲ್ಲಿ ಬರೋಬ್ಬರಿ 13 ದಿನ ಬ್ಯಾಂಕ್ ರಜೆ.! ಕರ್ನಾಟಕದಲ್ಲಿ ಯಾವತ್ತಿದೆ ರಜೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಜೂನ್ 30, 2025 - 08:02
 0  13
ಜುಲೈ ತಿಂಗಳಲ್ಲಿ ಬರೋಬ್ಬರಿ 13 ದಿನ ಬ್ಯಾಂಕ್ ರಜೆ.! ಕರ್ನಾಟಕದಲ್ಲಿ ಯಾವತ್ತಿದೆ ರಜೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಬೆಂಗಳೂರು: ಮುಂದಿನ ತಿಂಗಳು, 2025 ಜುಲೈನಲ್ಲಿ ಬ್ಯಾಂಕುಗಳಿಗೆ 13 ದಿನಗಳವರೆಗೂ ರಜೆ ಇದೆ. ಆರ್ಬಿಐ ಪ್ರಕಟಿಸಿದ ಕ್ಯಾಲೆಂಡರ್ನಲ್ಲಿ 13 ದಿನಗಳ ರಜಾಪಟ್ಟಿದೆ. ಇದರಲ್ಲಿ ಭಾನುವಾರದ ವಾರದ ರಜೆ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರದ ರಜೆಗಳೂ ಒಳಗೊಂಡಿವೆ. ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಕೆಲವು ದಿನಗಳು ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್ಗಳು ಮುಚ್ಚಲ್ಪಟ್ಟಿರುತ್ತವೆ.

 ಕೆಲ ಸ್ಥಳೀಯ ಹಬ್ಬಗಳು ಕೆಲವು ರಾಜ್ಯಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಖಾರ್ಚಿ ಪೂಜೆ , ಗುರು ಹರಗೋಬಿಂದ್ ಜಿ ಅವರ ಜನ್ಮದಿನ , ಬೆಹ್ ದೀಂಕ್ಲಾಮ್ , ಹರೇಲಾ, ಯು ತಿರೋಟ್ ಸಿಂಗ್ ಅವರ ಪುಣ್ಯತಿಥಿ, ಕೆರ್ ಪೂಜಾ, ಡ್ರುಕ್ಪಾ ತ್ಶೆ-ಜಿ ಮುಂತಾದ ಸಂದರ್ಭಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ . ಜುಲೈ ತಿಂಗಳಲ್ಲಿನ ಬ್ಯಾಂಕ್ ರಜಾದಿನಗಳ ಮಾಹಿತಿ ಇಲ್ಲಿದೆ.

ಜುಲೈ 2025 ರಲ್ಲಿ ಬ್ಯಾಂಕ್ ರಜಾದಿನಗಳು

ಜುಲೈ 3, 2025: ಖರ್ಚಿ ಪೂಜೆಯ ಸಂದರ್ಭದಲ್ಲಿ ತ್ರಿಪುರಾದಲ್ಲಿ ಬ್ಯಾಂಕ್ಗಳು ಮುಚ್ಚಲ್ಪಡುತ್ತವೆ.

ಜುಲೈ 5, 2025: ಗುರು ಹರಗೋವಿಂದ ಜಿ ಅವರ ಜನ್ಮದಿನವನ್ನು ಆಚರಿಸಲು ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್ಗಳು ಮುಚ್ಚಲ್ಪಡುತ್ತವೆ.

ಜುಲೈ 14, 2025: ಜುಲೈ 14, 2025 ರಂದು ಬೆಹ್ ದೇಂಖ್ಲಾಮ್ ಸಂದರ್ಭದಲ್ಲಿ ಮೇಘಾಲಯದಲ್ಲಿ ಬ್ಯಾಂಕ್ಗಳು ಮುಚ್ಚಲ್ಪಡುತ್ತವೆ.

ಜುಲೈ 16, 2025: ಹರೇಲಾ ಸಂದರ್ಭದಲ್ಲಿ ಉತ್ತರಾಖಂಡದಲ್ಲಿ ಬ್ಯಾಂಕ್ಗಳು ಮುಚ್ಚಲ್ಪಡುತ್ತವೆ.

ಜುಲೈ 17, 2025: ಯು ತಿರೋಟ್ ಅವರ ಪುಣ್ಯತಿಥಿಯ ಸ್ಮರಣಾರ್ಥ ಮೇಘಾಲಯದಲ್ಲಿ ಬ್ಯಾಂಕ್ಗಳು ಮುಚ್ಚಲ್ಪಡುತ್ತವೆ.

ಜುಲೈ 19, 2025: ಕೇರ್ ಪೂಜೆಯ ಸಂದರ್ಭದಲ್ಲಿ ತ್ರಿಪುರಾದಲ್ಲಿ ಬ್ಯಾಂಕ್ಗಳು ಮುಚ್ಚಲ್ಪಡುತ್ತವೆ.

ಜುಲೈ 28, 2025: ಡ್ರುಕ್ಪಾ ತ್ಶೆ-ಜಿ ಸಂದರ್ಭದಲ್ಲಿ ಸಿಕ್ಕಿಂನಲ್ಲಿ ಬ್ಯಾಂಕ್ಗಳು ಮುಚ್ಚಲ್ಪಡುತ್ತವೆ.

ನಾಲ್ಕು ಭಾನುವಾರ ಮತ್ತು ಎರಡು ಶನಿವಾರ

ಜುಲೈ 6, ಜುಲೈ 13, ಜುಲೈ 20 ಮತ್ತು ಜುಲೈ 27 ಭಾನುವಾರದ ರಜಾದಿನವಾಗಿದೆ. ಜುಲೈ 12 ಮತ್ತು ಜುಲೈ 26ರಂದು ಎರಡು, ನಾಲ್ಕನೇ ಶನಿವಾರ ರಜಾದಿನವಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow