ಟ್ರೋಫಿ ವಿವಾದ: ಮೊಹ್ಸಿನ್ ನಖ್ವಿ ವಿರುದ್ಧ ಕಠಿಣ ಕ್ರಮಕ್ಕೆ BCCI ತಯಾರಿ

ಅಕ್ಟೋಬರ್ 4, 2025 - 09:03
 0  10
ಟ್ರೋಫಿ ವಿವಾದ: ಮೊಹ್ಸಿನ್ ನಖ್ವಿ ವಿರುದ್ಧ ಕಠಿಣ ಕ್ರಮಕ್ಕೆ BCCI ತಯಾರಿ

ಏಷ್ಯಾಕಪ್ 2025 (Asia Cup 2025) ವೇಳೆ ಭುಗಿಲೆದ್ದ ಟ್ರೋಫಿ ವಿವಾದ ಇನ್ನೂ ತಣ್ಣಗಾಗಿಲ್ಲ. ಚಾಂಪಿಯನ್ ತಂಡವಾದ ಭಾರತಕ್ಕೆ ಟ್ರೋಫಿ ಹಾಗೂ ಪದಕಗಳನ್ನು ಹಸ್ತಾಂತರಿಸದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಹಾಗೂ ಏಷ್ಯನ್ ಕ್ರಿಕೆಟ್ ಮಂಡಳಿ (ACC) ಅಧ್ಯಕ್ಷ ಮೊಹ್ಸಿನ್ ನಖ್ವಿ ತೋರಿದ ವರ್ತನೆ ವಿರುದ್ಧ ಬಿಸಿಸಿಐ (BCCI) ಗಂಭೀರ ಅಸಮಾಧಾನ ವ್ಯಕ್ತಪಡಿಸಿದೆ.

ಬಿಸಿಸಿಐ ಮೊಹ್ಸಿನ್ ನಖ್ವಿಯನ್ನು ಎಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದೆ. ಪಂದ್ಯಾವಳಿ ಮುಗಿದು ವಾರವಾದರೂ ಟ್ರೋಫಿ ಭಾರತ ತಂಡದ ಕೈ ಸೇರಿಲ್ಲ. ಇತ್ತ, ನಖ್ವಿ ತಮ್ಮ ನಿಲುವನ್ನು ನಿರಂತರವಾಗಿ ಬದಲಿಸುತ್ತಿದ್ದು, ಈ ನಡೆ ಬಿಸಿಸಿಐಗೆ ತಲೆನೋವು ತಂದಿದೆ.

ಇತ್ತೀಚೆಗೆ ನಡೆದ ಎಸಿಸಿ ಸಭೆಯಲ್ಲಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಟ್ರೋಫಿಯನ್ನು ನೇರವಾಗಿ ಭಾರತಕ್ಕೆ ನೀಡಬೇಕು ಎಂದು ಒತ್ತಾಯಿಸಿದ್ದರು. ಆದರೆ ನಖ್ವಿ ಅದನ್ನು ನಿರಾಕರಿಸಿ, ಟ್ರೋಫಿ ಬೇಕಾದರೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ನನ್ನ ಬಳಿ ಬಂದು ಪಡೆದುಕೊಳ್ಳಲಿ ಎಂಬ ಹೇಳಿಕೆ ನೀಡಿದ್ದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow