ಡಿಕೆ ಶಿವಕುಮಾರ್ ಮುಂದೆ ಸಿಎಂ ಆಗ್ತಾರೆ! ನಟನ ಬಾಯಲ್ಲಿ ರಾಜಕೀಯ ಮಾತು!

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಂದೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೇಳಿದ್ದಾರೆ. ಧ್ರುವ ಸರ್ಜಾ ಕೂಡ ಡಿ.ಕೆ ಶಿವಕುಮಾರ್ನ ಫ್ಯೂಚರ್ ಸಿಎಂ ಅಂತ ಕರೆಯುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ವೇದಿಕೆ ಉದ್ದೇಶಿಸಿ ಮಾತನಾಡುವ ವೇಳೆ ನಾನು ಯಾರ ಬಗ್ಗೆ ಮಾತಾಡ್ತಿದ್ದೀನಿ ಗೊತ್ತಾ.. ನಾನು ಫ್ಯೂಚರ್ ಸಿಎಂ ಬಗ್ಗೆ ಮಾತನಾಡ್ತಾ ಇದ್ದೀನಿ ಎಂದ ಧ್ರುವ ಡಿಕೆಶಿಯನ್ನು ಹೊಗಳುವ ವೇಳೆ ಪರೋಕ್ಷ ಹಿಂಟ್ಸ್ ಕೊಟ್ಟಿದ್ದಾರೆ. ಧ್ರುವ ಸರ್ಜಾ ಹೇಳಿಕೆಗೆ ಚಪ್ಪಾಳೆ ಹೊಡೆದ ವಿದ್ಯಾರ್ಥಿಗಳು ಕೇಕೆ ಹಾಕಿದ್ದಾರೆ.
ಒಟ್ಟಾರೆ, ನಾನು ಮುಂದಿನ ಸಿಎಂ ಆಗ್ಬೇಕು ಅಂತ ಕನವರಿಸ್ತಿರೋ ಡಿಕೆಶಿಗೆ ಫ್ಯೂಚರ್ ಸಿಎಂ ಎನ್ನುವ ಮೂಲಕ ನಟ ಧ್ರುವ ಸರ್ಜಾ ಕೂಡ ಬೆಂಬಲ ನೀಡಿರೋದು ಡಿಕೆಶಿ ಉತ್ಸಾಹ ಇಮ್ಮಡಿಸಿದಂತಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






