ತಂದೆಯಿಂದಲೇ ಹೀನ ಕೃತ್ಯ: 8 ದಿನದ ಹಸುಗೂಸಿನ ಮೇಲೆ ಅತ್ಯಾಚಾರವೆಸಗಿ ಕೊಂದ ಪಾಪಿ ಅಪ್ಪ..!

ಮಾರ್ಚ್ 31, 2025 - 22:13
 0  27
ತಂದೆಯಿಂದಲೇ ಹೀನ ಕೃತ್ಯ: 8 ದಿನದ ಹಸುಗೂಸಿನ ಮೇಲೆ ಅತ್ಯಾಚಾರವೆಸಗಿ ಕೊಂದ ಪಾಪಿ ಅಪ್ಪ..!

ಹೆತ್ತ ಮಕ್ಕಳಿಗೆ ಉಜ್ವಲ ಭವಿಷ್ಯ ಸೃಷ್ಟಿಸಬೇಕು ಎಂದು ಎಲ್ಲಾ ತಂದೆ-ತಾಯಿಯರು ಯೋಚಿಸುತ್ತಾರೆಅದಲ್ಲೂ ತಂದೆ-ಮಗಳ ನಡುವಿನ ಪವಿತ್ರ ಸಂಬಂಧಕ್ಕೆ ಕಳಂಕ ತರುವಂತಹ ಘಟನೆಯೊಂದು ದಕ್ಷಿಣ ಆಫ್ರಿಕಾ ನಡೆದಿದೆ. ದಕ್ಷಿಣ ಆಫ್ರಿಕಾ 37 ವರ್ಷದ ಹ್ಯೂಗೊ ಫೆರೀರಾ ಎಂಬ ವ್ಯಕ್ತಿ ತನ್ನ ಎಂಟು ದಿನದ ಹಸುಗೂಸಿನ ಮೇಲೆ ಅತ್ಯಾಚಾರವೆಸಗಿದ್ದಾನೆ. 2023ರ ಜೂನ್​ನಲ್ಲಿ ಈ ಘಟನೆ ನಡೆದಿತ್ತು, ತನ್ನ ಮನೆಯಲ್ಲಿ ಇನ್ನಷ್ಟೇ ಕಣ್ಣು ಬಿಟ್ಟ ಕಂದಮ್ಮನ ಮೇಲೆ ದೌರ್ಜನ್ಯವೆಸಗಿದ್ದ. ಇದರ ಪರಿಣಾಮವಾಗಿ ತಲೆಗೆ ತೀವ್ರವಾದ ಗಾಯಗಳಾಗಿ ಮಗು ಸಾವನ್ನಪ್ಪಿತ್ತು.

ಕೋಪ ಮತ್ತು ಮಗುವಿಗೆ ನೋವುಂಟು ಮಾಡುವ ಬಯಕೆಯಿಂದ ಈ ಅಪರಾಧ ನಡೆದಿದೆ ಮತ್ತು ಫೆರೀರಾ ಉದ್ದೇಶಪೂರ್ವಕವಾಗಿ ಮತ್ತು ಕ್ರೂರವಾಗಿ ವರ್ತಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.

ಶಿಶುವಿನ ತಾಯಿ ಮೌರೀನ್ ಬ್ರಾಂಡ್ ಮಾತನಾಡಿ, ಮಗುವನ್ನು ಗಂಡನ ಬಳಿ ಬಿಟ್ಟು ಮಗುವಿಗೆ ಬಟ್ಟೆ ಖರೀದಿಸಲು ಶಾಪ್​ಗೆ ಹೋಗಿದ್ದಳು. ಆಕೆ ಮನೆಗೆ ಹಿಂದಿರುಗಿದಾಗ ಮಗು ಮಾರಣಾಂತಿಕ ಗಾಯಗಳಿಂದ ನರಳುತ್ತಿರುವುದನ್ನು ಕಂಡಿದ್ದಾಳೆ. ಮಗುವನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತೀವ್ರ ಗಾಯಗಳಾಗಿದ್ದ ಕಾರಣ ಮಗು ಮೃತಪಟ್ಟಿದೆ.

ನನಗೆ ಮಗುವನ್ನು ನೋಡಿಕೊಳ್ಳಲು ಸಾಧ್ಯವಿಲ್ಲ, ಅದಕ್ಕೆ ಹಾಲುಣಿಸಲು ಐದು ನಿಮಿಷಗಳಲ್ಲಿ ನೀನು ವಾಪಸ್ ಬರಬೇಕು ಎಂದು ಆತ ಷರತ್ತು ಹಾಕಿದ್ದ. ತನ್ನನ್ನು ಮಗುವಿನೊಂದಿಗೆ ಬಿಟ್ಟು ಹೋಗಿದ್ದಕ್ಕೆ ಕೋಪಗೊಂಡು ಈ ಕೃತ್ಯವೆಸಗಿದ್ದ ಎನ್ನಲಾಗಿದೆ.

ಮಗು ಅಳಲು ಶುರು ಮಾಡಿತ್ತು, ಮಗುವಿನ ಕತ್ತಿನ ಹಿಂಭಾಗ ಹಿಡಿದು ಪ-ದೇ ಪದೇ ಏಟು ಕೊಟ್ಟಿದ್ದ. ಬಳಿಕ ಮಗುವಿನ ಮೇಲೆ ಅತ್ಯಾಚಾರವೆಸಗಿದ್ದಾನೆ. ಈಗಾಗಲೇ ತಲೆಗೆ ಪೆಟ್ಟು ಬಿದ್ದು ಮಗು ನರಳುತ್ತಿತ್ತು, ಆ ನೋವನ್ನು ಮತ್ತಷ್ಟು ಹೆಚ್ಚಿಸಲು ಆತ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಮಗು ಸಾಯಬಹುದು ಎಂದು ತಿಳಿದಿದ್ದರೂ ದೌರ್ಜನ್ಯ ಮುಂದುವರೆಸಿದ್ದ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow