ದರ್ಶನ್ ಜಾಮೀನು ರದ್ದು: ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ ಮುಂದೂಡಿಕೆ..!

ಆಗಸ್ಟ್ 14, 2025 - 18:32
 0  15
ದರ್ಶನ್ ಜಾಮೀನು ರದ್ದು:  ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ ಮುಂದೂಡಿಕೆ..!

 ದಿ ಡೆವಿಲ್ಚಿತ್ರದ ಹೊಸ ಹಾಡು ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ. ಮೂಲತಃ ಆಗಸ್ಟ್ 15ರಂದು ಬಿಡುಗಡೆ ಆಗಬೇಕಿದ್ದ ಹಾಡು, ನಟ ದರ್ಶನ್ ಅವರಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಸುಪ್ರೀಂಕೋರ್ಟ್ರದ್ದು ಮಾಡಿದ ಹಿನ್ನೆಲೆ ಮುಂದೂಡಲಾಗಿದೆ.

ಹಾಡಿನ ಟೈಟಲ್ನಿಂದಲೇ ಅಭಿಮಾನಿಗಳಲ್ಲಿ ವಿಶೇಷ ಕುತೂಹಲವಿತ್ತು. ಆದರೆ ಬಿಡುಗಡೆಯಿಗೆ ಕೇವಲ ಒಂದು ದಿನ ಬಾಕಿ ಇರುವಾಗಲೇ ದರ್ಶನ್ ಜಾಮೀನು ರದ್ದು ಸುದ್ದಿಯು ಅಭಿಮಾನಿಗಳಿಗೆ ಡಬಲ್ ನಿರಾಸೆ ತಂದಿದೆ.

ಮಿಲನಖ್ಯಾತಿಯ ಪ್ರಕಾಶ್ ವೀರ್ ನಿರ್ದೇಶನದ ಸಿನಿಮಾಶ್ರೀ ಜೈಮಾತಾ ಕಂಬೈನ್ಸ್ಸಂಸ್ಥೆಯಿಂದ ನಿರ್ಮಾಣವಾಗುತ್ತಿದೆ. ಹೊಸ ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow