ಧಾರವಾಹಿಯಲ್ಲಿ ಅಣ್ಣ-ತಂಗಿಯಾಗಿದ್ದವರು ರಿಯಲ್ ಲೈಫ್ ನಲ್ಲಿ ಜೋಡಿಯಾದರು!
ಈ ಸೀರಿಯಲ್‌ನಲ್ಲಿ ಪೂರ್ಣಿ ಪಾತ್ರದಲ್ಲಿ ನಟಿಸುತ್ತಿರುವ ಲಾವಣ್ಯ ಮತ್ತು ಅಮೃತಧಾರೆ ಸೀರಿಯಲ್‌ನಲ್ಲಿ ಜೀವ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಶಶಿ ನಿಜ ಜೀವನದಲ್ಲಿ ಗಂಡ ಹೆಂಡತಿ. 2022ರಲ್ಲಿ ಮದುವೆಯಾಗಿದ್ದ ಈ ಜೋಡಿ ಇನ್‌ಸ್ಟಾಗ್ರಾಂನಲ್ಲಿ ಸಖತ್ ಆಕ್ಟೀವ್. ಅಂದಹಾಗೆ ಇವರಿಬ್ಬರು ಈ ಹಿಂದೆ 'ರಾಜಾ-ರಾಣಿ' ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು.
ಆ ಧಾರಾವಾಹಿಯಲ್ಲಿ ಲಾವಣ್ಯ ಮತ್ತು ಶಶಿ ಅಣ್ಣ-ತಂಗಿ ಪಾತ್ರ ನಿಭಾಯಿಸಿದ್ದರು. ಆದರೆ ಆ ಧಾರಾವಾಹಿಯಿಂದಲೇ ಇವರಿಬ್ಬರ ಪ್ರೇಮ ಚಿಗುರೊಡೆದಿತ್ತು. ಅಂದಹಾಗೆ ಈ ಜೋಡಿ ʼಸಹವಾಸ ದೋಷʼ ಎಂಬ ಕಿರುಚಿತ್ರದಲ್ಲೂ ಒಟ್ಟಿಗೆ ನಟಿಸಿದ್ದರು.
ಕಿರುತೆರೆ ಮೂಲಕ ಪರಿಚಯವಾಗಿ ಸ್ನೇಹಿತರಾಗಿದ್ದರು. ಶಶಿಗೆ ಲಾವಣ್ಯ ಮೇಲೆ ಲವ್ ಆಗಿ ನಂತರ ಪ್ರಪೋಸ್ ಮಾಡಿದ್ದಾರೆ. ಅಷ್ಟೇ ಅಲ್ಲ, ಲಾವಣ್ಯ ಉತ್ತರಕ್ಕೆ ಕಾಯದ ಶಶಿ, ಅವರ ಪೋಷಕರಿಗೆ ವಿಷಯ ತಿಳಿಸಿ ಮದುವೆಗೆ ಒಪ್ಪಿಗೆ ಪಡೆದಿದ್ದಾರೆ. ಆದ್ರೆ ಕೊರೊನಾ ಕಾರಣದಿಂದ ಇವರಿಬ್ಬರ ಮದುವೆ ಕೊಂಚ ತಡವಾಗಿ ನಡೆದಿತ್ತು.
ಮದುವೆಯಾದ ನಂತರ ಶಶಿಗೆ ಎರಡು ಕಂಡೀಷನ್ ಹಾಕಿದ್ರಂತೆ ಲಾವಣ್ಯ. ಈ ಬಗ್ಗೆ ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ ಈ ಕಂಡೀಷನ್‌ಗೆ ಒಪ್ಪಿದ್ರೆ ಮಾತ್ರ ಮಕ್ಕಳು ಮಾಡಿಕೊಳ್ಳಲು ಒಕೆ.. ಇಲ್ಲಾಂದ್ರೆ ಇಲ್ಲ ಎಂದು ಹೇಳಿದ್ದರಂತೆ.
ಸಂದರ್ಶನ ನಡೆಯುವ ಸಮಯದಲ್ಲಿ, ಲಾವಣ್ಯ ಮತ್ತು ಶಶಿ ಇನ್ನೂ ಹನಿಮೂನ್‌ಗೆ ಹೋಗಿರಲಿಲ್ಲ. ಅಷ್ಟೇ ಅಲ್ಲ, ಅದಕ್ಕೂ ಮುನ್ನ ಎರಡು ಬಾರಿ ಮಾಡಿದ್ದ ಪ್ಲಾನ್ ಕ್ಯಾನ್ಸಲ್ ಆಗಿತ್ತಂತೆ. ಹನಿಮೂನ್‌ಗೆ ಮನಾಲಿ ಮತ್ತು ವಿದೇಶಕ್ಕೆ ಕರೆದುಕೊಂಡು ಹೋದ ನಂತರವೇ ಪೋಷಕರಾಗಿ ಬಡ್ತಿ ಪಡೆಯಲು ಸಾಧ್ಯ ಎಂದು ಲಾವಣ್ಯ ಕಂಡಿಷನ್ ಹಾಕಿದ್ರು ಅಂತ ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಇನ್ನೂ ನಟಿ ಲಾವಣ್ಯ ಬಾಲ್ಯದಿಂದ ನೃತ್ಯದ ಮೇಲೆ ಹೆಚ್ಚು ಒಲವಿದ್ದರೂ ಹೆಚ್ಚು ಸಕ್ರಿಯರಾಗಿರುವುದು ನಟನೆಯಲ್ಲಿ. ಅಕಸ್ಮಾತ್ ಆಗಿ ಕಿರುತೆರೆಗೆ ಬಂದ ಲಾವಣ್ಯ ಅವರು ಇದನ್ನೇ ವೃತ್ತಿ ಬದುಕನ್ನಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ. ಒಂದೇ ಧಾರಾವಾಹಿಗೆ ಸಾಕು ಎಂದು ಬಿಟ್ಟು ಹೋದರು.
ಆದರೂ ನಟನೆಯ ಮೇಲಿನ ಒಲವು ಲಾವಣ್ಯ ಅವರ ಕೈ ಬಿಡಲಿಲ್ಲ. ಕಾರ್ಪೋರೇಟ್ ಕಂಪನಿಯ ಕೆಲವನ್ನು ಬಿಟ್ಟು ಮತ್ತೆ ಕಿರುತೆರೆಗೆ ಮರಳಿದರು. ಇಲ್ಲೇ ಬದುಕನ್ನು ಕಂಡುಕೊಂಡ ಲಾವಣ್ಯ ಜೀವನ ಸಂಗಾತಿಯನ್ನೂ ಇಲ್ಲೇ ಹುಡುಕಿಕೊಂಡಿದ್ದಾರೆ.
ರಾಧಾರಮಣ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಲಾವಣ್ಯ ಅವರು ಬಣ್ಣ ಹಚ್ಚಿದರು. ರಾಧಾರಮಣ ಸೀರಿಯಲ್ ಮುಗಿದ ಬಳಿಕ ಲಾವಣ್ಯ ಅವರು ನಟನೆಯನ್ನು ತೊರೆದು ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಪಡೆದು ಸೆಟಲ್ ಆದರು. ಆದರೆ ಅವರನ್ನು ಈ ನಟನಾ ರಂಗ ಬಿಡಲಿಲ್ಲ. ಮತ್ತೆ ರಾಜಾ ರಾಣಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆ ಅವಕಾಶವನ್ನು ಕೈ ಬಿಡಲಾಗದೇ, ರಾಜಾರಾಣಿ ಧಾರಾವಾಹಿಗೆ ಬಂದರು. ಕಾರ್ಪೋರೇಟ್ ಕೆಲಸಗಳನ್ನು ಸಂಪೂರ್ಣವಾಗಿ ಬಿಟ್ಟು ಬಂದು ನಟಿಯಾಗಿ ಉಳಿದುಕೊಂಡರು. ಬಳಿಕ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಸಂಘರ್ಷ ಎಂಬ ಧಾರಾವಾಹಿಯಲ್ಲಿ ನಟಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?