ನಟ ದಳಪತಿ ವಿಜಯ್ ವಿರುದ್ಧ FIR ದಾಖಲು..! ಯಾಕೆ ಗೊತ್ತಾ..?

ಆಗಸ್ಟ್ 27, 2025 - 12:25
 0  16
ನಟ ದಳಪತಿ ವಿಜಯ್ ವಿರುದ್ಧ FIR ದಾಖಲು..! ಯಾಕೆ ಗೊತ್ತಾ..?

ಮಧುರೈ : ತಮಿಳು ನಟ ಹಾಗೂ ರಾಜಕೀಯ ನಾಯಕ ದಳಪತಿ ವಿಜಯ್ ಮತ್ತು ಅವರ ಬೌನ್ಸರ್‌ಗಳ ವಿರುದ್ಧ ಹಲ್ಲೆ ಪ್ರಕರಣ ದಾಖಲೆಯಾಗಿದೆ.

ಆಗಸ್ಟ್ 21ರಂದು ಮಧುರೈನಲ್ಲಿ ವಿಜಯ್ ತಮ್ಮ ಹೊಸ ಪಕ್ಷ “ತಮಿಳಗ ವೆಟ್ರಿ ಕಳಗಂ” ಎರಡನೇ ಬಹಿರಂಗ ಸಮಾವೇಶವನ್ನು ಆಯೋಜಿಸಿದ್ದರು. ಈ ಸಮಾವೇಶಕ್ಕೆ ಲಕ್ಷಾಂತರ ಮಂದಿ ಭಾಗಿಯಾಗಿದ್ದರು. ಸಮಾವೇಶದ ವೇಳೆ ವಿಜಯ್ ವೇದಿಕೆಗೆ ಪ್ರವೇಶಿಸಲು ರ್ಯಾಂಪ್ ನಿರ್ಮಿಸಲಾಗಿತ್ತು. ವಿಜಯ್ ರ್ಯಾಂಪ್‌ನಲ್ಲಿ ನಡೆದು ಬರುತ್ತಿದ್ದಾಗ, ಹಲವರು ಅವರನ್ನು ಭೇಟಿ ಮಾಡಲು ರ್ಯಾಂಪ್ ಮೇಲೆ ಏರಿದರು

ಬೌನ್ಸರ್‌ಗಳು ಅವರನ್ನು ತಡೆಯುವ ವೇಳೆ ಕೆಲವರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಈ ವೇಳೆ ಗಾಯಗೊಂಡ ಶರತ್ ಕುಮಾರ್ ಎಂಬ ಯುವಕ, ವಿಜಯ್ ಮತ್ತು ಅವರ ಬೌನ್ಸರ್‌ಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಪೆರಂಬಲೂರು ಎಸ್‌ಪಿ ಕಚೇರಿಗೆ ತಾಯಿ ಜೊತೆಯಾಗಿ ತೆರಳಿದ ಶರತ್ ಕುಮಾರ್, ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow