ನಿಮ್ಮ ಬಿಳಿ ಕೂದಲು ಕಪ್ಪಾಗಲು ಈ ಹೂವನ್ನು ಅರೆದು ಮೊಟ್ಟೆಯಲ್ಲಿ ಬೆರೆಸಿ ತಲೆಗೆ ಹಚ್ಚಿ: ಎರಡೇ ನಿಮಿಷದಲ್ಲಿ ರಿಸಲ್ಟ್ ನೋಡಿ!
ಚಿಕ್ಕ ವಯಸ್ಸಿನಲ್ಲಿ ಕೂದಲು ಉದುರುವುದು ಮತ್ತು ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಅದರಲ್ಲೂ ಜನರು ತಮ್ಮ ಕೂದಲನ್ನು ಕಪ್ಪಾಗಿಸಲು ಡೈ ಅಥವಾ ಮದರಂಗಿ ಬಳಸುತ್ತಾರೆ. ಇಂದಿನ ಯುವ ಪೀಳಿಗೆಯು ಬೂದು ಕೂದಲಿನ ಸಮಸ್ಯೆಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದೆ. ಮಾನಸಿಕ ಒತ್ತಡದಿಂದಾಗಿ ನಮ್ಮ ಜೀವನ ವಿಧಾನದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ.
ಅನಾರೋಗ್ಯಕರ ಜೀವನಶೈಲಿಯಿಂದಾಗಿ, ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತದೆ. ಜನರು ತಮ್ಮ ಕೂದಲನ್ನು ಮತ್ತೆ ಕಪ್ಪಾಗಿಸಲು ಹಲವಾರು ರಾಸಾಯನಿಕ ಉತ್ಪನ್ನಗಳನ್ನು ಬಳಸುತ್ತಾರೆ. ಹಾಗೆ ಮಾಡುವುದು ಅನೇಕರಿಗೆ ಸರಿ ಎನಿಸುವುದಿಲ್ಲಾ. ಆದರೂ ಹಾಗೆ ಮಾಡದೇ ಇರೋಕೆ ಆಗೋದೇ ಇಲ್ಲಾ ಅಂತಹ ಪರಿಸ್ಥಿತಿಯಲ್ಲಿ ರಾಸಾಯನಿಕವೂ ಅವರಿಗೆ ಮುಖ್ಯವಾಗುತ್ತದೆ.
ಎಲ್ಲರ ಮನೆಯಂಗಳದಲ್ಲಿ ಸಿಗುವ ಸಾಮಾನ್ಯ ಹೂವು ದಾಸವಾಳ. ಇದರ ಪ್ರಯೋಜನಳು ಒಂದೆರಡಲ್ಲ.. ಸರಿಯಾಗಿ ಬಳಸಿದರೆ ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸಬಹುದು.
ದಾಸವಾಳ ಕೂದಲು ಬಿಳಿಯಾಗುವುದನ್ನು ತಡೆಯಲು ಪರಿಣಾಮಕಾರಿಯಾಗಿದೆ. ಸೂರ್ಯನ ಬೆಳಕು ಮತ್ತು ಮಾಲಿನ್ಯ, ಆಧುನಿಕ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳು ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ದಾಸವಾಳ ಹೂವಿನ ಹೇರ್ ಮಾಸ್ಕ್ ತಯಾರಿಸಿ ಹಚ್ಚಿಕೊಂಡರೆ ಬಿಳಿ ಕೂದಲನ್ನು ರಾಸಾಯನಿಕ ಆಧಾರಿತ ಹೇರ್ ಕಲರ್ ಇಲ್ಲದೇಯೇ ಕಪ್ಪಾಗಿಸಬಹುದು. ಕೂದಲು ಉದುರುವ ಸಮಸ್ಯೆಗೆ ಕೂಡ ಇದು ಪರಿಣಾಮಕಾರಿಯಾಗಿದೆ.
ಬಿಳಿ ಕೂದಲು ಹೊಂದಿರುವವರು ಮೊಟ್ಟೆ, ಗೋರಂಟಿ ಎಲೆ ಮತ್ತು ದಾಸವಾಳ ಹೂವು ಬಳಸಿ ಮಾಡುವ ಈ ಹೇರ್ ಮಾಸ್ಕ್ ಹಚ್ಚಿಕೊಳ್ಳಬೇಕು. ಇದು ಕೂದಲಿನ ಹೊಳಪಿಗೆ ಕಾರಣವಾಗುತ್ತದೆ. ಒಣ ನಿರ್ಜೀವ ಕೂದಲು ರೇಷ್ಮೆಯಂತೆ ಮಿಂಚಲು ಆರಂಭಿಸುತ್ತದೆ.
ಗೋರಂಟಿ ಎಲೆಗಳು ಮತ್ತು ದಾಸವಾಳ ಹೂವಿನ ಪೇಸ್ಟ್ ಹಚ್ಚುವುದರಿಂದ ಕೂದಲಿನ ಬಣ್ಣ ನೈಸರ್ಗಿಕವಾಗಿ ಕಪ್ಪಾಗುತ್ತದೆ. ಮೊದಲು ಒಂದಷ್ಟು ಗೋರಂಟಿ ಎಲೆಗಳನ್ನು ಸಂಗ್ರಹಿಸಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ
ದಾಸವಾಳ ಹೂವುಗಳನ್ನು ತೆಗೆದುಕೊಂಡು ತೊಳೆಯಿರಿ. ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಮತ್ತು ಅದಕ್ಕೆ 10 ದಾಸವಾಳ ಹೂವು ಹಾಕಿ ಚೆನ್ನಾಗಿ ಕುದಿಸಿ. ಈಗ ಅದನ್ನು ತಣ್ಣಗಾಗಲು ಬಿಡಿ.
ನಿಮ್ಮ ಪ್ರತಿಕ್ರಿಯೆ ಏನು?