‘ಟಾಕ್ಸಿಕ್’ ಸಿನಿಮಾಗಾಗಿ ಬಂದ ನಯನತಾರಾ; ಬೆಂಗಳೂರಲ್ಲಿ ‘GOAT’ ನೋಡಿದ ತಮಿಳು ನಟಿ

‘ಟಾಕ್ಸಿಕ್’ ಸಿನಿಮಾಗಾಗಿ ಬಂದ ನಯನತಾರಾ; ಬೆಂಗಳೂರಲ್ಲಿ ‘GOAT’ ನೋಡಿದ ತಮಿಳು ನಟಿ
ಟಾಕ್ಸಿಕ್’ ಸಿನಿಮಾದ ಶೂಟಿಂಗ್ ಬೆಂಗಳೂರಿನ ಹೊರವಲಯದಲ್ಲಿ ನಡೆಯುತ್ತಿದೆ. ಯಶ್ ಅವರು ಈ ಚಿತ್ರದ ಪ್ರಮುಖ ಪಾತ್ರ ಮಾಡಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಯನತಾರಾ ನಟಿಸುತ್ತಿದ್ದಾರೆ ಎನ್ನುವ ವಿಚಾರ ಇತ್ತೀಚೆಗೆ ಹರಿದಾಡಿತ್ತು. ಸದ್ಯ ಅವರು ಬೆಂಗಳೂರಿನಲ್ಲಿ ಇದ್ದಾರೆ. ಅವರು ಬೆಂಗಳೂರಿನಲ್ಲೇ ದಳಪತಿ ವಿಜಯ್ ನಟನೆಯ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್’ (GOAT) ಸಿನಿಮಾ ನೋಡಿದ್ದಾರೆ.
ಬೆಂಗಳೂರಿನ ನೆಲಮಂಗಲದ ಸಮೀಪ ‘ಟಾಕ್ಸಿಕ್’ ಸಿನಿಮಾದ ಸೆಟ್ ಹಾಕಲಾಗಿದೆ. ಯಶ್ ಅವರಿಗೆ ಜೊತೆಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದು, ನಯನತಾರಾ ಯಶ್ ಸಹೋದರಿ ಪಾತ್ರ ಮಾಡುತ್ತಿದ್ದಾರಂತೆ. ಸದ್ಯ ನಯನತಾರಾ ಅವರು ನಾಲ್ಕು ದಿನಗಳ ಶೂಟಿಂಗ್ ಮಾಡಿದ್ದಾರೆ. ಪ್ರಮುಖ ದೃಶ್ಯಗಳ ಶೂಟ್ ಪೂರ್ಣಗೊಂಡಿದೆ ಎನ್ನಲಾಗಿದೆ.
ದಳಪತಿ ವಿಜಯ್ ನಟನೆಯ ‘GOAT’ ಸಿನಿಮಾ ಸೆಪ್ಟೆಂಬರ್ 5ರಂದು ರಿಲೀಸ್ ಆಗಿದೆ. ಈ ಸಿನಿಮಾ ಬೆಂಗಳೂರಿನ ಎಂಜಿ ರೋಡ್ನಲ್ಲಿರೋ ಸ್ವಾಗತ್ ಶಂಕರ್ನಾಗ್ ಥಿಯೇಟರ್ನಲ್ಲಿ ವೀಕ್ಷಿಸಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಈ ಫೋಟೋ ನೋಡಿದ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಕಳೆದ ವರ್ಷ ನಯನತಾರಾಗೆ ದೊಡ್ಡ ಮಟ್ಟದ ಗೆಲುವು ಸಿಕ್ಕಿದೆ. ಅವರ ನಟನೆಯ ‘ಜವಾನ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಈ ಚಿತ್ರದಿಂದ ಅವರು ಗೆದ್ದು ಬೀಗಿದ್ದಾರೆ. ಅವರು ಈ ಮೊದಲು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಮತ್ತೊಮ್ಮೆ ಅವರು ಕನ್ನಡತ್ತ ಮುಖ ಮಾಡಿದ್ದಾರೆ. ಈ ಸಿನಿಮಾ 2025ರ ಏಪ್ರಿಲ್ನಲ್ಲಿ ತೆರೆಮೇಲೆ ಬರಲಿದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






