ನೀವು ಆ್ಯಪಲ್ ಪ್ರಿಯರಾ!? ನಿಮಗಿಲ್ಲಿದೆ ಗುಡ್ ನ್ಯೂಸ್! ಐಫೋನ್ 16e ಮಾರಾಟ, ರೇಟ್ ಎಷ್ಟು?

ಆ್ಯಪಲ್ ಪ್ರಿಯರಿಗಾಗಿ ಐಫೋನ್ 16e ಅಧಿಕೃತವಾಗಿ ಮಾರಾಟ ಆಗುತ್ತಿದ್ದು, ಅಮೇಜಾನ್, ಫ್ಲಿಪ್ಕಾರ್ಟ್ ಇತ್ಯಾದಿ ಇಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಬುಕ್ ಮಾಡಿ ಖರೀದಿಸಬಹುದು.
ಐಫೋನ್ 16e ಮೊಬೈಲ್ 59,990 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದೆ. ಇದು ಐಫೋನ್ 16e ಫೋನಿನ 128GB ಸ್ಟೋರೇಜ್ ರೂಪಾಂತರದ ಬೆಲೆಯಾಗಿದೆ. ಕಂಪನಿಯು ಮೊದಲ ಮಾರಾಟದಲ್ಲಿ, ಈ ಐಫೋನ್ ಖರೀದಿಸುವ ಗ್ರಾಹಕರಿಗೆ 4,000 ರೂ.ಗಳ ರಿಯಾಯಿತಿ ನೀಡುತ್ತಿದೆ. ಎಲ್ಲಾ ಐಸಿಐಸಿಐ ಬ್ಯಾಂಕ್ ಗ್ರಾಹಕರು ಈ ರಿಯಾಯಿತಿಯ ಲಾಭ ಪಡೆಯಬಹುದು. ಯಾವುದೇ ಐಸಿಐಸಿಐ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಐಫೋನ್ 16e ಖರೀದಿಸಿದರೆ 4,000 ರಷ್ಟು ಫ್ಲಾಟ್ ಡಿಸ್ಕೌಂಟ್ ಸಹ ಪಡೆಯಬಹುದು.
128GB ಸ್ಟೋರೇಜ್ ಹೊಂದಿರೋ ಐಫೋನ್ 16e ಬೇಸ್ ಪ್ರೈಸ್ 59,900 ರಿಂದ ಶುರುವಾಗುತ್ತದೆ. ಹ್ಯಾಂಡ್ಸೆಟ್ 256GB ಮತ್ತು 512GB ಸ್ಟೋರೇಜ್ ಕಾನ್ಫಿಗರೇಶನ್ಗಳಲ್ಲಿ ಲಭ್ಯವಿದೆ. ಇವುಗಳ ಬೆಲೆ ಕ್ರಮವಾಗಿ ರೂ. 69,900 ಮತ್ತು ರೂ. 89,900 ಇದೆ. ಫೆಬ್ರವರಿ 28 ರಿಂದ ಮಾರಾಟ ಶುರುವಾಗಲಿದೆ ಎಂದು ಆ್ಯಪಲ್ ಸಂಸ್ಥೆ ಹೇಳಿದೆ.
ಇನ್ನು, ಐಫೋನ್ 16e ಡ್ಯುಯಲ್ ಸಿಮ್ (ನ್ಯಾನೋ+ಇಸಿಮ್) ಹ್ಯಾಂಡ್ಸೆಟ್ ಆಗಿದೆ. ಇದು ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದೆ. iOS 18ನಲ್ಲಿ ಕಾರ್ಯನಿರ್ವಹಿಸುತ್ತದೆ. 6.1-ಇಂಚಿನ ಸೂಪರ್ ರೆಟಿನಾ XDR (1,170×2,532 ಪಿಕ್ಸೆಲ್ಗಳು) OLED ಡಿಸ್ಪ್ಲೇ ಹೊಂದಿದೆ. 60Hz ರಿಫ್ರೆಶ್ ದರ ಮತ್ತು 800nits ಗರಿಷ್ಠ ಬ್ರೈಟ್ನೆಸ್ ಇದೆ. 3nm A18 ಚಿಪ್ ಅಳವಡಿಸಿದ್ದು, 512GB ವರೆಗೂ ಸ್ಟೋರೇಜ್ ಇದೆ. ಹಾಗೆಯೇ 8GB RAM ವರೆಗೂ ಇದೆ.
48-ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ ಮತ್ತು ಮುಂದೆ 12-ಮೆಗಾಪಿಕ್ಸೆಲ್ ಟ್ರೂಡೆಪ್ತ್ ಕ್ಯಾಮೆರಾ ಸಹ ಹೊಂದಿದೆ. ಟಚ್ ಐಡಿಯೊಂದಿಗೆ ಫೇಸ್ ಐಡಿ ಕೂಡ ನೀಡಲಾಗಿದೆ. 5G, 4G LTE, Wi-Fi 6, ಬ್ಲೂಟೂತ್ 5.3, NFC ಮತ್ತು GPS ಸಂಪರ್ಕ ನೀಡುತ್ತದೆ. 18W ವೈರ್ಡ್ ಚಾರ್ಜಿಂಗ್ ಮತ್ತು 7.5W ವೈರ್ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






