ನನ್ನನ್ನ ಒಂದ್ ಸಾರಿ ಬಂದು ನೋಡ್ಕೊಂಡ್ ಹೋಗು ಕಂದಾ: ಸೋದರತ್ತೆ ನಾಗಮ್ಮಗೆ ಇನ್ನೂ ತಿಳಿದಿಲ್ಲ ಅಪ್ಪು ಸಾವಿನ ವಿಚಾರ

ಕರುನಾಡಲ್ಲಿ ‘ಪರಮಾತ್ಮ’ನ ಜನ್ಮದಿನ, ಅಭಿಮಾನಿಗಳ ಪಾಲಿನ ಪರಮಾತ್ಮನಿಗೆ ನಿನ್ನೆ 50ನೇ ಜನ್ಮದಿನದ ಸಂಭ್ರಮ.. ಹೀಗಾಗಿ ಪುನೀತ ಸ್ಮಾರಕಕ್ಕೆ ಜನಸಾಗರವೇ ಹರಿದು ಬಂದಿತ್ತು. ಇನ್ನು ಪುನೀತ್ ರಾಜ್ಕುಮಾರ್ ನಿಧನವಾಗಿರುವ ಸುದ್ದಿ ಪುನೀತ್ ಅವರ ಸೋದರತ್ತೆ ನಾಗಮ್ಮನಿಗೆ ಮಾತ್ರ ತಿಳಿದೇ ಇಲ್ಲ. ಪುನೀತ್ ಜನ್ಮದಿನದ ಪ್ರಯುಕ್ತ ಅಪ್ಪುಗೆ ಶುಭ ಹಾರೈಸಿರೋ ನಾಗಮ್ಮ ಒಮ್ಮೆ ಬಂದು ನೊಡ್ಕೊಂಡು ಹೋಗು ಎಂದು ಕೋರಿದ್ದಾರೆ.
ನಿನಗೆ 50 ವರ್ಷ ಆಯ್ತಾ..ಅಬ್ಬಾ ಚೆನ್ನಾಗಿದಿಯಾ ಮಗನೇ? ಎಂದಿದ್ದಾರೆ. ನಿನ್ನ ಇನ್ನೂ ಮಗು ಅಂದುಕೊಂಡಿದ್ದೇನೆ ನಾನು. ನನ್ನನ್ನ ಒಂದ್ ಸಾರಿ ಬಂದು ನೋಡ್ಕೊಂಡ್ ಹೋಗು ಕಂದಾ. ನಿನಗೆ 50 ವರ್ಷ ಆಯ್ತಲ್ಲೋ ಎಂದು ಅವರು ಮಾತನಾಡಿದ್ದಾರೆ. ಅಪ್ಪುಗೆ 50 ವರ್ಷ ತುಂಬಿತು ಎಂದು ತಿಳಿದಾಗ ಖುಷಿಯಿಂದ ಸೋದರ ಅತ್ತೆ ನಾಗಮ್ಮ ಶುಭಹಾರೈಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






