ಪತ್ನಿಯ ಶೀಲ ಶಂಕಿಸಿದ ಗಂಡ: ಹೆಂಡತಿ ಹಾಗೂ ಲವರ್ ಕೊಂದು ತಾನು ಸಾವಿನ ಹಾದಿ ಹಿಡಿದ!

ಅಕ್ಟೋಬರ್ 17, 2024 - 13:57
 0  17
ಪತ್ನಿಯ ಶೀಲ ಶಂಕಿಸಿದ ಗಂಡ: ಹೆಂಡತಿ ಹಾಗೂ ಲವರ್ ಕೊಂದು ತಾನು ಸಾವಿನ ಹಾದಿ ಹಿಡಿದ!

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಆರ್‌ಬಿಐ ಲೇಔಟ್ ಸಮೀಪದ ಸೋಮೇಶ್ವರ ಬಡಾವಣೆಯಲ್ಲಿ ಶೀಲ ಶಂಕಿಸಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬರ್ಬರವಾಗಿ ಕೊಂದ ಘಟನೆ ನಡೆದಿದೆ. ಪೈತಮ್ಮ (40), ಗಣೇಶ್ ಕುಮಾರ್ ಕೊಲೆಯಾದವರು. ಗೊಲ್ಲಬಾಬು ಕೊಲೆಗೈದು ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇವರೆಲ್ಲರೂ ಮೂಲತಃ ಆಂಧ್ರ ಪ್ರದೇಶದವರು ಎಂದು ತಿಳಿದು ಬಂದಿದೆ.

ಕೆಲಸ ಅರಸಿ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದರು. ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರು. ಪತ್ನಿ ಪೈತಮ್ಮ ಮೇಲೆ ಆಗಾಗ ಗೊಲ್ಲಬಾಬು ಅನುಮಾನ ವ್ಯಕ್ತ ಪಡಿಸಿದ್ದ. ನಿನ್ನೆ ತಡರಾತ್ರಿಯಲ್ಲಿ ಗಣೇಶ್ ಕುಮಾರ್ ಜತೆಗಿದ್ದಾಗಲೇ ಪೈತಮ್ಮ ಪತಿಗೆ ಸಿಕ್ಕಿಬಿದ್ದಿದ್ದಳು.

ಈ ಮೂಲಕ ಅಕ್ರಮ ಸಂಬಂಧಕ್ಕೆ ಮೂವರ ಹೆಣ ಬಿದ್ದಂತಾಗಿದೆ. ನಿರ್ಮಾಣ ಹಂತದ ‌ಕಟ್ಟಡದಲ್ಲಿ‌ ಈ ಹತ್ಯೆ ನಡೆದಿದ್ದು, ಮೊದಲಿಗೆ ಮರದ ತುಂಡಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಗಂಡ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಸೂಸೈಡ್ ಮಾಡಿಕೊಂಡು ಪ್ರಾಣ ಬಿಟ್ಟಿದ್ದಾನೆ. ಕೂಡಲೇ ಸ್ಥಳಕ್ಕೆ ಕೋಣನಕುಂಟೆ ಪೋಲಿಸರು ‌ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow