ಪತ್ನಿ ಹೆಸರಿನಲ್ಲಿ ಮನೆ ಖರೀದಿ ಮಾಡಿದ್ರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ..?

ನೀವು ಆಸ್ತಿಯನ್ನು ಖರೀದಿಸುತ್ತಿದ್ದರೆ, ಅದನ್ನು ನಿಮ್ಮ ಹೆಂಡತಿಯ ಹೆಸರಿನಲ್ಲಿ ಮಾತ್ರ ಖರೀದಿಸುವುದು ಉತ್ತಮ. ಇದು ನಿಮಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ನೀವು ಹಣವನ್ನು ಸಾಲ ಪಡೆಯಬೇಕಾದಾಗ, ನೀವು ಕಡಿಮೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಹೌದು ಸ್ವಂತ ಮನೆ ಖರೀದಿಸುವುದು ಪ್ರತಿಯೊಬ್ಬರ ಕನಸು. ಅನೇಕ ಜನರು ಇದಕ್ಕಾಗಿ ಹಣವನ್ನು ಉಳಿಸುತ್ತಾರೆ. ಆಗ ಮಾತ್ರ ಅವರು ತಮಗಾಗಿ ಮನೆ ಖರೀದಿಸಲು ಸಾಧ್ಯವಾಗುತ್ತದೆ. ನೀವು ನಿಮಗಾಗಿ ಹೊಸ ಮನೆ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಬಹುದು.
ಪತ್ನಿ ಹೆಸರಿನಲ್ಲಿ ಮನೆ ಖರೀದಿ ಮಾಡಿದ್ರೆ ಇದೆ ಈ ಎಲ್ಲ ಲಾಭ :
ತೆರಿಗೆ ಲಾಭ: ಮನೆಯನ್ನು ಪತ್ನಿ ಹೆಸರಿನಲ್ಲಿ ಅಥವಾ ಜಂಟಿಯಾಗಿ ಖರೀದಿ ಮಾಡಬಹುದು. ಆಗ ನಿಮಗೆ ಹೆಚ್ಚುವರಿ ತೆರಿಗೆ ಪ್ರಯೋಜನ ಸಿಗುತ್ತದೆ. ತೆರಿಗೆಯಲ್ಲಿ ನೀವು ವಾರ್ಷಿಕವಾಗಿ 1.5 ಲಕ್ಷ ರೂಪಾಯಿಯಿಂದ 2 ಲಕ್ಷ ರೂಪಾಯಿವರೆಗೆ ವಿನಾಯಿತಿ ಪಡೆಯಬಹುದು. 1961 ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ನೀವು ಅದನ್ನು ಕ್ಲೈಮ್ ಮಾಡಬಹುದು.
ಇಲ್ಲಿ ನೀವು ಗಮನಿಸಬೇಕಾದ ಒಂದು ವಿಷ್ಯವಿದೆ. ಅದೇನೆಂದ್ರೆ ನೀವು ಮತ್ತು ನಿಮ್ಮ ಸಂಗಾತಿ ಅದೇ ಮನೆಯಲ್ಲಿ ವಾಸಿಸಬೇಕು. ಆಗ ಮಾತ್ರ ನಿಮಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಪತ್ನಿಗೆ ಪ್ರತ್ಯೇಕವಾದ ಆದಾಯದ ಮೂಲವಿದ್ದರೆ, ಮಾಲಿಕತ್ವದ ಪಾಲಿನ ಆದಾರದ ಮೇಲೆ ಕ್ಲೈಮ್ ಕಡಿತವನ್ನು ಪಡೆಯಬಹುದು. ಅಂದ್ರೆ ಪತ್ನಿ ಪಾಲು ಎಷ್ಟಿದೆಯೋ ಅದಕ್ಕೆ ತೆರಿಗೆ ಕಡಿತವಾಗುತ್ತದೆ. ಇನ್ನು ಪತ್ನಿ ಮನೆಯನ್ನು ಬಾಡಿಗೆಗೆ ನೀಡಿದ್ದರೂ ಸಹ ಗೃಹ ಸಾಲದ ಅಸಲು ಮೊತ್ತದ ಮೇಲೆ ಪತ್ನಿ ತೆರಿಗೆ ಕಡಿತವನ್ನು ಪಡೆಯಬಹುದು.
ಸ್ಟ್ಯಾಂಪ್ ಡ್ಯೂಟಿ ಶುಲ್ಕದಲ್ಲಿ ವಿನಾಯಿತಿ : ಬಹುತೇಕ ಜನರು ಇದೇ ಕಾರಣಕ್ಕೆ ಪತ್ನಿ ಹೆಸರಿನಲ್ಲಿ ಮನೆ ಖರೀದಿ ಮಾಡ್ತಾರೆ. ಬಹುತೇಕ ಎಲ್ಲ ರಾಜ್ಯಗಳಲ್ಲೂ ಮಹಿಳೆ ಹೆಸರಿನಲ್ಲಿರುವ ಮನೆಗೆ ಸ್ಟ್ಯಾಂಪ್ ಡ್ಯೂಟಿ ಶುಲ್ಕದಲ್ಲಿ ವಿನಾಯಿತಿ ಸಿಗುತ್ತದೆ. ಸ್ಟ್ಯಾಂಪ್ ಡ್ಯೂಟಿ ಶುಲ್ಕದಲ್ಲಿ ಶೇಕಡಾ ಒಂದರಿಂದ ಎರಡರಷ್ಟನ್ನು ಉಳಿಸಬಹುದು. ರಾಜ್ಯದಿಂದ ರಾಜ್ಯಕ್ಕೆ ಈ ಸ್ಟ್ಯಾಂಪ್ ಡ್ಯೂಟಿ ಶುಲ್ಕ ಭಿನ್ನವಾಗಿದೆ. ಕೆಲ ರಾಜ್ಯಗಳಲ್ಲಿ ಪತಿ ಹಾಗೂ ಪತ್ನಿ ಇಬ್ಬರಿಗೂ ಒಂದೇ ಶುಲ್ಕವಿದೆ. ಮತ್ತೆ ಕೆಲ ರಾಜ್ಯಗಳಲ್ಲಿ ಮಹಿಳೆಯರಿಗೆ ವಿನಾಯಿತಿ ನೀಡಲಾಗಿದೆ.
ಗೃಹ ಸಾಲದ ಬಡ್ಡಿ ಮೇಲೂ ಸಿಗುತ್ತೆ ರಿಯಾಯಿತಿ : ಮನೆ ನಿರ್ಮಾಣ ಆಡ್ಬೇಕು ಇಲ್ಲವೆ ಮನೆ ಖರೀದಿ ಮಾಡ್ಬೇಕು ಎಂದಾಗ ಗೃಹ ಸಾಲದ ಮೊರೆ ಹೋಗ್ತೇವೆ. ಪುರುಷರ ಹೆಸರಿನಲ್ಲಿ ಗೃಹ ಸಾಲ ಪಡೆಯುವುದಕ್ಕಿಂತ ಮಹಿಳೆ ಹೆಸರಿನಲ್ಲಿ ಸಾಲ ಪಡೆದ್ರೆ ಒಳ್ಳೆಯದು. ಯಾಕೆಂದ್ರೆ ಅನೇಕ ಬ್ಯಾಂಕ್ ಪುರುಷರಿಗಿಂತ ಮಹಿಳೆಯರಿಗೆ ಗೃಹ ಸಾಲದ ಬಡ್ಡಿಯಲ್ಲಿ ರಿಯಾಯಿತಿ ನೀಡುತ್ತದೆ. ಶೇಕಡಾ ಒಂದರಷ್ಟು ಬಡ್ಡಿ ರಿಯಾಯಿತಿ ಮಹಿಳೆಯರಿಗೆ ಸಿಗುತ್ತದೆ. ಎಲ್ಲ ಬ್ಯಾಂಕ್ ನಲ್ಲೂ ಇದು ಒಂದೇ ರೀತಿಯಿಲ್ಲ. ಬ್ಯಾಂಕ್ ನಿಂದ ಸಾಲ ಪಡೆಯುವ ಮುನ್ನ ಯಾವ ಬ್ಯಾಂಕ್ ಕಡಿಮೆ ಬಡ್ಡಿ ನೀಡ್ತಿದೆ ಎಂಬುದನ್ನು ನೀವು ಪರಿಶೀಲಿಸಿ. ಜೊತೆಗೆ ಸಿಬಿಲ್ ಸ್ಕೋರ್ ಬಗ್ಗೆ ಗಮನವಿರಲಿ. ಪತ್ನಿ ಹೆಸರಿನಲ್ಲಿ ಸಾಲ ಪಡೆಯುತ್ತಿದ್ದರೆ ಆಕೆ ಸಿಬಿಲ್ ಸ್ಕೋರ್ ಕೂಡ ಮುಖ್ಯವಾಗುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






