ಪಹಲ್ಗಾಮ್ ದಾಳಿ ಎಫೆಕ್ಟ್: ಭಾರತದಲ್ಲಿ ಅಭಿರ್ ಗುಲಾಲ್’ ಸಿನಿಮಾ ಹಾಡು ತೆಗೆದು ಹಾಕಿದ ಯೂಟ್ಯೂಬ್!

ಮಂಗಳವಾರ ನಡೆದ ಭೀಕರ ಉಗ್ರರ ದಾಳಿ ಬಳಿಕ ಪಾಕಿಸ್ತಾನ್ ಹಾಗೂ ಭಾರತದ ನಡುವಿನ ಸಂಬಂಧ ಕಳಚಿ ಬಿದ್ದಿದೆ. ಅಲ್ಲದೇ ಕೇಂದ್ರ ಸರ್ಕಾರವು ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಅದರಂತೆ ಪಹಲ್ಗಾಮ್ ದಾಳಿಯ ಬಳಿಕ ಬಾಲಿವುಡ್ ಸಿನಿಮಾ ‘ಅಬಿರ್ ಗುಲಾಲ್’ ನಿಷೇಧಕ್ಕೆ ಒತ್ತಾಯ ಕೇಳಿ ಬಂದಿದೆ. ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ‘ಅಬಿರ್ ಗುಲಾಲ್’ ಸಿನಿಮಾದ ಬಿಡುಗಡೆಗೆ ಅವಕಾಶ ನಿರಾಕರಿಸಿದೆ ಎನ್ನಲಾಗುತ್ತಿದೆ. ವಿವಾದದ ಕೇಂದ್ರವಾಗಿರುವ ‘ಅಭಿರ್ ಗುಲಾಲ್’ ಸಿನಿಮಾ ಮೇ 9ಕ್ಕೆ ತೆರೆಗೆ ಬರಲಿದೆ. ಈ ಸಿನಿಮಾನಲ್ಲಿ ಫಹಾದ್ ಖಾನ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.
ನಟಿ ವಾಣಿ ಕಪೂರ್ ನಾಯಕಿ. ಸಿನಿಮಾವನ್ನು ಆರತಿ ಎಸ್ ಬಾಗ್ಡಿ ನಿರ್ದೇಶನ ಮಾಡಿದ್ದಾರೆ. ಫಹಾದ್ ಖಾನ್ ಹೊರತುಪಡಿಸಿ ಸಿನಿಮಾದಲ್ಲಿ ನಟಿಸಿರುವ, ಕೆಲಸ ಮಾಡಿರುವ ಎಲ್ಲರೂ ಭಾರತೀಯರೇ ಆಗಿದ್ದಾರೆ. ಆದರೆ ಪಾಕಿಸ್ತಾನಿ ನಟ ಫಹಾದ್ ಖಾನ್ ನಟಿಸಿರುವ ಕಾರಣಕ್ಕೆ ಈಗ ಸಿನಿಮಾಕ್ಕೆ ಸಮಸ್ಯೆ ಎದುರಾಗಿದೆ.
ಅಭಿರ್ ಗುಲಾಲ್’ ಸಿನಿಮಾದ ಕೆಲ ಹಾಡುಗಳು ಯೂಟ್ಯೂಬ್ನಲ್ಲಿ ಈ ಹಿಂದೆ ಬಿಡುಗಡೆ ಆಗಿತ್ತು. ಸಿನಿಮಾದ ಹಾಡುಗಳು ಚೆನ್ನಾಗಿಯೇ ಇದ್ದವು. ಆದರೆ ಇದೀಗ ಯೂಟ್ಯೂಬ್, ‘ಅಭಿರ್ ಗುಲಾಲ್’ ಸಿನಿಮಾದ ಹಾಡುಗಳನ್ನು ಡಿಲೀಟ್ ಮಾಡಿದೆ. ಯೂಟ್ಯೂಬ್ ಇಂಡಿಯಾ ಈ ನಿರ್ಧಾರ ಕೈಗೊಂಡಿದೆ. ಭಾರತದಲ್ಲಿ ಮಾತ್ರ ‘ಅಭಿರ್ ಗುಲಾಲ್’ ಸಿನಿಮಾದ ಹಾಡುಗಳು ಯೂಟ್ಯೂಬ್ನಲ್ಲಿ ಕೇಳಲು ಲಭ್ಯ ಇರುವುದಿಲ್ಲ ಎನ್ನಲಾಗಿದೆ
ನಿಮ್ಮ ಪ್ರತಿಕ್ರಿಯೆ ಏನು?






