ಪಾಕ್ ವಿರುದ್ಧ ಸೈಬರ್ ಸಮರ: ಪಾಕಿಸ್ತಾನದ ಯೂಟ್ಯೂಬ್ ಚಾನೆಲ್ʼಗಳು ಬ್ಯಾನ್ - ಶೋಯೆಬ್ ಅಖ್ತರ್ʼಗೂ ತಟ್ಟಿದ ಬಿಸಿ

ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತದ ಪ್ರತೀಕಾರ ಹೆಚ್ಚಾಗುತ್ತಿದೆ. ಅದರಲ್ಲೂ ಭಾರತದಿಂದ ಪಾಕ್‌ಗೆ ಹರಿಯುವ ಸಿಂಧೂ, ಚೀನಾಬ್, ಜೀಲಂ ನದಿ ನೀರಿಗೆ ಬ್ರೇಕ್ ಹಾಕಲಾಗಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ನೀರಿಲ್ಲದೆ ಹಾಹಾಕಾರದ ಪರಿಸ್ಥಿತಿ ನಿರ್ಮಾಣ ಆಗುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಭಾರತದಲ್ಲಿ ದ್ವೇಷ ಹರಡುತ್ತಿರುವ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ.
ಪೆಹಲ್ಗಾಮ್ ದಾಳಿ ಬಳಿಕ ಈ ಯೂಟ್ಯೂಬ್ ಚಾನೆಲ್‌ಗಳು ತಪ್ಪು ಮಾಹಿತಿಯನ್ನು ಜನರಿಗೆ ನೀಡುತ್ತಿದೆ ಪಾಕಿಸ್ತಾನದ ಪರವಾಗಿ ಹಾಗೂ ಭಾರತದ ವಿರುದ್ಧವಾಗಿ ಈ ಚಾನೆಲ್‌ಗಳು ಸುದ್ದಿ ನೀಡುತ್ತಿದೆ. ನಕಲಿ ಸುದ್ದಿಗಳನ್ನು ನೀಡುತ್ತಿದೆ. ಭಾರತದಲ್ಲಿ ಪಾಕಿಸ್ತಾನದ ಪ್ರಚಾರ, ಭಾರತೀಯರನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿರುವ ಪಾಕಿಸ್ತಾನದ ಯೂಟ್ಯೂಬ್ ಚಾನೆಲ್‌ಗೆ ಭಾರತ ನಿಷೇಧ ಹೇರಿದೆ. ಮೊದಲ ಹಂತದಲ್ಲಿ 16 ಪಾಕಿಸ್ತಾನದ ಯೂಟ್ಯೂಬ್ ಚಾನೆಲ್ ಬ್ಯಾನ್ ಆಗಿದೆ.
63.08 ಮಿಲಿಯನ್ ಸಬ್‌ಸ್ಕ್ರೈಬರ್ಸ್
ಪಾಕಿಸ್ತಾನದ ಪರ ಕೆಲಸ ಮಾಡುತ್ತಿರುವ ಈ 16 ಯೂಟ್ಯೂಬ್ ಚಾನೆಲ್ ಭಾರತದಲ್ಲಿ ಭಾರಿ ಜನಪ್ರಿಯವಾಗಿದೆ. ವಿಶೇಷ ಅಂದರೆ ಭಾರತದಲ್ಲೂ ಕೂಡ ಹಲವರು ಚಂದಾದಾರರಾಗಿದ್ದಾರೆ. ಈ 16 ಪಾಕಿಸ್ತಾನ ಯೂಟ್ಯೂಬ್ ಚಾನೆಲ್‌ಗಳ ಒಟ್ಟು ಸಬ್‌ಸ್ಕ್ರೈಬರ್ ಸಂಖ್ಯೆ ಬರೋಬ್ಬರಿ 63.08 ಮಿಲಿಯನ್. ಪಾಕಿಸ್ತಾನದ ಖ್ಯಾತ ಡಾನ್ ನ್ಯೂಸ್ ಯೂಟ್ಯೂಬ್ ಚಾನೆಲ್, Geo ನ್ಯೂಸ್, ಇರ್ಶಾದ್ ಭಟ್ಟಿ ಸೇರಿದಂತೆ 16 ಖ್ಯಾತ ಯೂಟ್ಯೂಬ್ ಚಾನೆಲ್ ಬ್ಯಾನ್ ಮಾಡಲಾಗಿದೆ.
ಕೇಂದ್ರ ಗೃಹ ಸಚಿವಾಲದ ಸೂಚನೆ ಮೇರೆಗೆ ಬ್ಯಾನ್
ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ಗಳನ್ನು ಬ್ಯಾನ್ ಮಾಡಲಾಗಿದೆ. ಸಾಮಾಜಿಕ ಜಾಲತಾಣ, ವೆಬ್‌ಸೈಟ್ ಸೇರಿದಂತೆ ಡಿಜಿಟಲ್ ಜಗತ್ತಿನ ಮೇಲೆ ಹದ್ದಿನ ಕಣ್ಣಿಟ್ಟಿರುವ ಭಾರತದ ಇದೀಗ ಮೊದಲ ಹಂತದಲ್ಲಿ ಯೂಟ್ಯೂಬ್ ಚಾನೆಲ್ ಬ್ಯಾನ್ ಮಾಡಿದೆ. ಇದೀಗ ಮತ್ತಷ್ಟು ಯೂಟ್ಯೂಬ್ ಚಾನೆಲ್ ಹಾಗೂ ಸೋಶಿಯಲ್ ಮೀಡಿಯಾ ಖಾತೆಗಳನ್ನು ಗುರುತಿಸಲಾಗಿದೆ. ಶೀಘ್ರದಲ್ಲೇ ಮತ್ತಷ್ಟು ಪಾಕಿಸ್ತಾನ ಪ್ರೋಪಗಾಂಡ ಚಾನೆಲ್‌ಗಳು, ಖಾತೆಗಳು ಬ್ಯಾನ್ ಆಗಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






