ಪ್ಯಾನ್ ಕಾರ್ಡ್ ಕಳೆದಿದೆಯೇ..? ಆನ್’ಲೈನ್’ನಲ್ಲಿ ಹೀಗೆ ಡೌನ್ ಲೋಡ್ ಮಾಡಿಕೊಳ್ಳಿ

ಇಂದಿನ ಗಡಿಬಿಡಿಯ ದಿನಗಳಲ್ಲಿ ಪ್ಯಾನ್ ಕಾರ್ಡ್ ಕಳೆದುಕೊಳ್ಳುವುದು ಸಾಮಾನ್ಯವಾಗಿದೆ. ಪ್ಯಾನ್ ಕಾರ್ಡ್ ಹೊಂದಿರುವವರು ಒಮ್ಮೆಯಾದರೂ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಾರೆ. ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋದರೆ ಚಿಂತಿಸಬೇಕಾಗಿಲ್ಲ. ಇ-ಪ್ಯಾನ್ ಕಾರ್ಡ್ ಅನ್ನು ಸುಲಭವಾಗಿ ಡೌನ್ಲೋಡ್ ಮಾಡಬಹುದು. ಅಥವಾ ಪ್ಯಾನ್ ಕಾರ್ಡ್ ಅನ್ನು ಮರುಮುದ್ರಣ ಮಾಡಬಹುದು. ಒಂದು ವೇಳೆ ಪಾನ್ ಕಾರ್ಡ್ ಕಳೆದುಹೋದರೆ ಏನು ಮಾಡಬೇಕು? ನಿಮಗೆ ಪಾನ್ ನಂಬರ್ ಗೊತ್ತಿದ್ದರೆ ಸಾಕು ಪಾನ್ ಕಾರ್ಡ್ ಮರಳಿ ಪಡೆಯಬಹುದು. ಆನ್ಲೈನಲ್ಲೂ ನೀವು ಈ ಕೆಲಸ ಮಾಡಬಹುದು.
ಇದರ ವಿಧಾನಗಳು ಈ ಕೆಳಕಂಡಂತಿವೆ:
- ಪಾನ್ ನಂಬರ್ನ ಅಧಿಕೃತ ವೆಬ್ಸೈಟ್ ಟಿಐಎನ್–ಎನ್ಎಸ್ಡಿಎಲ್ಗೆ ಭೇಟಿ ನೀಡಿ
- ನಂತರ ಪಾನ್ ಕಾರ್ಡ್ ರೀಪ್ರಿಂಟ್ ಆಪ್ಶನ್ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿ
- ನಂತರ ಹೆಸರು, ಜನ್ಮದಿನಾಂಕ, ಮೊಬೈಲ್ ನಂಬರ್ ಮೊದಲಾದ ಅಗತ್ಯ ಮಾಹಿತಿ ಭರ್ತಿ ಮಾಡಿ ಸಬ್ಮಿಟ್ ಮಾಡಿ.
- ಈಗ ಟೋಕನ್ ನಂಬರ್ ಜನರೇಟ್ ಆಗುತ್ತದೆ. ಅರ್ಜಿದಾರರ ನೊಂದಾಯಿತ ಇಮೇಲ್ಗೆ ಈ ಟೋಕನ್ ನಂಬರ್ ಕಳುಹಿಸಲಾಗುತ್ತದೆ. ಈ ನಂಬರ್ ಅನ್ನು ಅಪ್ಲಿಕೇಶನ್ ಸಲ್ಲಿಕೆಗೆ ಬಳಸಬೇಕಾಗುತ್ತದೆ.
- ಟೋಕನ್ ನಂಬರ್ ಜನರೇಟ್ ಆದ ಬಳಿಕ ಪೊರ್ಟಲ್ನಲ್ಲಿ ಪರ್ಸನಲ್ ಡೀಟೇಲ್ಸ್ ಪುಟದಲ್ಲಿರುವ ಇತರ ಮಾಹಿತಿಯನ್ನು ತುಂಬಿಸಿ.
- ಇದಾದ ಬಳಿಕ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಇರುತ್ತದೆ. ಇದರಲ್ಲೂ ಮೂರು ವಿಧಾನಗಳಿವೆ. ಭೌತಿಕವಾಗಿ ಅರ್ಜಿ ದಾಖಲೆಯನ್ನು ಕಚೇರಿಗೆ ಹೋಗಿ ಸಲ್ಲಿಸುವುದು ಒಂದು ವಿಧಾನವಾದರೆ, ಇ–ಕೆವೈಸಿ ಮೂಲಕ ಡಿಜಿಟಲ್ ಆಗಿ ಅರ್ಜಿ ಸಲ್ಲಿಸಬಹುದು. ಮೂರನೇ ವಿಧಾನವೆಂದರೆ ಇ–ಸಹಿ ಮೂಲಕ ಸಲ್ಲಿಸುವುದು.
- ಭೌತಿಕವಾಗಿ ಅರ್ಜಿಯನ್ನು ಕಚೇರಿಗೆ ಕಳುಹಿಸುವುದಾದರೆ ಮೊದಲಿಗೆ ಮೇಲೆ ತಿಳಿಸಿದ ಪೋರ್ಟಲ್ನಲ್ಲಿ ಅಪ್ಲಿಕೇಶನ್ ಪೇಮೆಂಟ್ ಮಾಡಬೇಕು. ನಂತರ ಸ್ವಿಕೃತಿ ಅರ್ಜಿ ತಯಾರಾಗುತ್ತದೆ. ಅದರ ಪ್ರಿಂಟ್ ತೆಗೆದುಕೊಳ್ಳಿ. ನಂತರ ಡ್ರೈವಿಂಗ್ ಲೈಸೆನ್ಸ್, ಆಧಾರ್, ವೋಟರ್ ಐಡಿ, ಜನನ ಪ್ರಮಾಣಪತ್ರ, ಪಾಸ್ಪೋರ್ಟ್, ಎಸ್ಸೆಸ್ಸೆಲ್ಸಿ ಪ್ರಮಾಣಪತ್ರ ಮತ್ತಿತರ ಯಾವುದಾದರೂ ಅಗತ್ಯ ದಾಖಲೆಗಳನ್ನು ಜೊತೆಯಲ್ಲಿ ಕವರ್ಗೆ ಸೇರಿಸಬೇಕು. ಎನ್ವಿಲೋಪ್ ಮೇಲೆ ಸ್ವೀಕೃತಿ ಸಂಖ್ಯೆ ನಮೂದಿಸಿ, ಅಪ್ಲಿಕೇಶನ್ ಫಾರ್ ರೀಪ್ರಿಂಟ್ ಆಫ್ ಪಾನ್ ಎಂದು ಬರೆದಿರಬೇಕು. ಅದನ್ನು ಎನ್ಎಸ್ಡಿಎಲ್ನ ಪಾನ್ ಸರ್ವಿಸ್ ಯೂನಿಟ್ಗಳಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸಿಕೊಡಬೇಕು.
- ಆನ್ಲೈನ್ನಲ್ಲಿ ಸಲ್ಲಿಸಲು:
- ಇನ್ನು, ಆನ್ಲೈನ್ ಮೂಲಕವೇ ನೀವು ಅರ್ಜಿ ಸಲ್ಲಿಸಲು ನಿರ್ಧರಿಸಿದಲ್ಲಿ ಇದಕ್ಕೆ ಆಧಾರ್ ನಂಬರ್ ಬಳಸಬಹುದು. ಆಧಾರ್ಗೆ ನೀಡಲಾದ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ಗೆ ಬರುವ ಒಟಿಪಿ ಮೂಲಕ ಅರ್ಜಿ ವಿವರ ತುಂಬಬಹುದು. ಅರ್ಜಿ ಸಲ್ಲಿಸುವಾಗ ಡಿಜಿಟಲ್ ಸಿಗ್ನೇಚರ್ ಹಾಕಬೇಕಾಗುತ್ತದೆ.
- ನಂತರ ನಿಮ್ಮ ಪಾಸ್ಪೋರ್ಟ್ ಗಾತ್ರದ ಫೋಟೋ, ಸಹಿ ಮತ್ತಿತರ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ಇಮೇಜ್ಗಳನ್ನು ಅಪ್ಲೋಡ್ ಮಾಡಬೇಕು. ಇದಾದ ಬಳಿಕ ಅಪ್ಲಿಕೇಶನ್ ಫಾರ್ಮ್ ಅನ್ನು ದೃಢಪಡಿಸಲು ಮತ್ತೊಮ್ಮೆ ಒಟಿಪಿ ಜನರೇಟ್ ಆಗುತ್ತದೆ.
- ಇಲ್ಲಿ ನಿಮಗೆ ಎರಡು ರೀತಿಯ ಪಾನ್ ಕಾರ್ಡ್ ಅವಕಾಶ ಇರುತ್ತದೆ. ಒಂದು ಭೌತಿಕ ಪಾನ್ ಕಾರ್ಡ್. ಮತ್ತೊಂದು ಇ ಪಾನ್ ಕಾರ್ಡ್. ಎಲೆಕ್ಟ್ರಾನಿಕ್ ಪಾನ್ ಕಾರ್ಡ್ ಪಡೆಯಲು ಇಮೇಲ್ ವಿಳಾಸ ಕೊಡಬೇಕು. ಭೌತಿಕ ಪಾನ್ ಕಾರ್ಡ್ ಬೇಕೆಂದರೆ ಪಾನ್ ಡೇಟಾಬೇಸ್ನಲ್ಲಿ ನೀವು ಇತ್ತೀಚೆಗೆ ನೀಡಿರುವ ವಿಳಾಸಕ್ಕೆ ಪಾನ್ ಕಾರ್ಡ್ ಪೋಸ್ಟ್ ಮೂಲಕ ಬರುತ್ತದೆ.
- ಆಫ್ಲೈನ್ ವಿಧಾನ:
- ರಿಕ್ವೆಸ್ಟ್ ಫಾರ್ ನ್ಯೂ ಪಾನ್ ಕಾರ್ಡ್ ಹೆಸರಿನ ಫಾರ್ಮ್ ಅನ್ನು ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಂಡು, ಅದನ್ನು ಭರ್ತಿ ಮಾಡಬೇಕು. ಎರಡು ಪಾಸ್ಪೋರ್ಟ್ ಗಾತ್ರದ ಫೋಟೋ, ಐಡಿ ಪ್ರೂಫ್, ವಿಳಾಸದ ಪ್ರೂಫ್, ಪ್ಯಾನ್ ಪ್ರೂಫ್ ದಾಖಲೆಗಳನ್ನು ಸೇರಿಸಿ ಎನ್ಎಸ್ಡಿಎಲ್ ಫೆಸಿಲಿಟೇಶನ್ ಸೆಂಟರ್ಗೆ ಕಳುಹಿಸಬೇಕು. ಎರಡು ವಾರಗಳಲ್ಲಿ ಪಾನ್ ಕಾರ್ಡ್ ನಿಮ್ಮ ವಿಳಾಸಕ್ಕೆ ಬರುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






