ಪ್ರೇಮಿಗಳ ದಿನದಂದೇ ಬೆಸ್ಟ್ ಸಿನಿಮಾಗಳು ರಿಲೀಸ್: ಲವರ್ಸ್ ಗಳಿಗೆ ಖುಷಿ ಕೊಡುವ ದೃಶ್ಯಗಳಿವೆ!
ಪ್ರೇಮಿಗಳ ದಿನವಾದ ಇಂದು ಸ್ಯಾಂಡಲ್ವುಡ್ನಿಂದ 2 ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ಸಿನಿಮಾಗಳಂತೂ ಪ್ರೇಮಿಗಳಿಗೆ ಸ್ಪೆಷಲ್ ಎನ್ನಬಹುದು.
ಭುವನಂ ಗಗನಂ ಸಿನಿಮಾ ಸೂಪರ್ ಆಗಿದೆ. ಇದರಲ್ಲಿ ಎರಡು ಮಾತಿಲ್ಲ. ಏಕೆಂದರೆ ದುಬೈನಲ್ಲಿನ ಇತ್ತೀಚೆಗೆ ಇದೇ ಸಿನಿಮಾದ ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಅಲ್ಲಿನ ಕನ್ನಡಿಗರು ಸಿನಿಮಾ ನೋಡಿ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಅದರಂತೆ ಇಂದು ರಾಜ್ಯಾದ್ಯಂತ ಭುವನಂ ಗಗನಂ ಬಿಡುಗಡೆ ಆಗುತ್ತಿದ್ದು ಭರ್ಜರಿ ಓಪನಿಂಗ್ ಪಡೆಯುವ ನಿರೀಕ್ಷೆ ಹೆಚ್ಚು ಇದೆ.
ಗಿರೀಶ್ ಮೂಲಿಮನಿ ನಿರ್ದೇಶನದಲ್ಲಿ ಭುವನಂ ಗಗನಂ ಸಿನಿಮಾದಲ್ಲಿ ಪೃಥ್ವಿ ಅಂಬರ್ ಹಾಗೂ ಪ್ರಮೋದ್ ಅಭಿನಯ ಮಾಡಿದ್ದಾರೆ. ಈ ಸಿನಿಮಾ ಲವ್, ರೋಮ್ಯಾನ್ಸ್, ಕುಟುಂಬದ ಸೆಂಟಿಮೆಂಟ್ ನಡುವಿನ ಕಥಾಹಂದರದಲ್ಲಿ ಎರಡು ಮುಗ್ದ ಮನಸ್ಸುಗಳ ಪಯಣದ ಸಿನಿಮಾವಾಗಿದೆ. ಇನ್ನು ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ನಟಿಸಿದ್ದಾರೆ.
ಫಸ್ಟ್ ರ್ಯಾಂಕ್ ರಾಜು ಮೂವಿ ಮೂಲಕ ಪ್ರಸಿದ್ಧಿ ಪಡೆದಿದ್ದ ನಟ ಗುರುನಂದನ್ ಅವರು ಮತ್ತೊಮ್ಮೆ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಗುರುನಂದನ್ ಅವರಿಗೆ ಹುಬ್ಬಳ್ಳಿಯ ಮೃದುಲಾ ಪಟ್ಟಣಶೆಟ್ಟಿ ನಾಯಕಿಯಾಗಿದ್ದಾರೆ. ಈಗಾಗಲೇ ಈ ಸಿನಿಮಾದ ಟ್ರೈಲರ್, ಸಾಂಗ್ಸ್ ಹಿಟ್ ಆಗಿದ್ದು ಮೂವಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವ ನಿರೀಕ್ಷೆ ಎಲ್ಲ ಇದೆ.
ಸ್ಯಾಂಡಲ್ವುಡ್ ಸಿನಿಮಾಗಳ ಜೊತೆ ಟಾಲಿವುಡ್, ಬಾಲಿವುಡ್ ಸಿನಿಮಾಗಳು ಕೂಡ ಇಂದು ತೆರೆಗೆ ಅಪ್ಪಳಿಸುತ್ತಿವೆ.
ನಿಮ್ಮ ಪ್ರತಿಕ್ರಿಯೆ ಏನು?