16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್‌ ಮೀಡಿಯಾ ಬ್ಯಾನ್‌..! ಧಿಡೀರ್‌ ನಿರ್ಧಾರ ಯಾಕೆ ಗೊತ್ತಾ..?

ಡಿಸೆಂಬರ್ 1, 2024 - 21:51
 0  10
16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್‌ ಮೀಡಿಯಾ ಬ್ಯಾನ್‌..! ಧಿಡೀರ್‌ ನಿರ್ಧಾರ ಯಾಕೆ ಗೊತ್ತಾ..?

ಸಾಮಾಜಿಕ ಜಾಲತಾಣಗಳು ನಮ್ಮ ಜೀವನದ ಒಂದು ಭಾಗವೇ ಆಗಿದೆ, ಅದನ್ನು ಬಿಟ್ಟು ಒಂದು ಕ್ಷಣವು ಇರಲು ಸಾಧ್ಯವಿಲ್ಲದಷ್ಟು ಅದನ್ನು ಬಳಕೆ ಮಾಡುತ್ತಿದ್ದಾರೆ. ಮನೆಯವರಿಗಿಂತ ಹೊರಗಡೆಯವರ ಜೊತೆ ಸ್ನೇಹ -ಸಂಬಂಧ , ಖುಷಿಯಾಗಿ ಮಾರ್ಪಡುತ್ತಿದೆ. ಜಾಲತಾಣಗಳಲ್ಲಿ ಹೆಚ್ಚು ಲೈಕ್ಸ್ , ಕಾಮೆಂಟ್ಸ್ ಬರಬೇಕೆಂಬ ಹುಚ್ಚು ಹೆಚ್ಚಾಗಿದೆ. 10-12 ವರ್ಷದ ಮಕ್ಕಳು ಏನು ಬೇಕೆಂದು ಕೇಳಿದರೆ ಮೊಬೈಲ್ ಎನ್ನುತ್ತಿದ್ದಾರೆ.

ಅದರಲ್ಲಿಯೇ ತಮ್ಮ ಸಂತೋಷವನ್ನು ಕಂಡುಕೊಳ್ಳುತ್ತಿದ್ದಾರೆ. ಆಟ ಆಡಬೇಕಾದ ವಯಸ್ಸಿನಲ್ಲಿ ಹೊರಗೆ ಆಟವಾಡದೇ ಮೊಬೈಲ್ ಗೇಮ್ಸ್ ಇವರ ಗೆಳಯರಾಗಿ ಮಾರ್ಪಟ್ಟಿದೆ. ವಯಸ್ಸಿಗೆ ಮೀರಿದ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ, ತಮ್ಮ ಮುಗ್ದತೆಯನ್ನು ಬೇಗ ಕಳೆದುಕೊಳ್ಳುತ್ತಿದ್ದಾರೆ . ಕೋವಿಡ್ ಆದಾಗಿನಿಂದ ಮೊಬೈಲ್ ಎಲ್ಲರ ಕೈಗೆ ಸುಲಭವಾಗಿ ಸಿಗುತ್ತಿದೆ. ಊಟ ಮಾಡುವಾಗ ಮೊಬೈಲ್, ಪಾಠ ಕೇಳುವಾಗ ಮೊಬೈಲ್, ಶೌಚಕ್ಕೆ ಹೋದಾಗ ಮೊಬೈಲ್, ಪ್ರಯಾಣ ಮಾಡುವಾಗ ಮೊಬೈಲ್ ಹೀಗೆ ಮೊಬೈಲ್ ಜೀವನದ ಅವಿಭಾಜ್ಯ ವಸ್ತುವಾಗಿದೆ . 

ಆದ್ದರಿಂದ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮ ಬಳಕೆಗೆ ನಿಷೇಧ ವಿಧಿಸುವ ಮಸೂದೆಯನ್ನು ಆಸ್ಟ್ರೇಲಿಯಾ ಅಂಗೀಕರಿಸಿದೆ. ಮಸೂದೆಯನ್ನು ಉಭಯಪಕ್ಷೀಯ ಬೆಂಬಲದೊಂದಿಗೆ ಎರಡೂ ಸಂಸದೀಯ ಸದನಗಳು ಅಂಗೀಕರಿಸಿವೆ. ಹದಿಹರೆಯದವರು ಖಾತೆಗಳನ್ನು ಹೊಂದುವುದನ್ನು ತಡೆಯಲು ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಶೀಘ್ರದಲ್ಲೇ ಸಮಂಜಸವಾದ ಕ್ರಮಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ. 

ಸಾಮಾಜಿಕ ಮಾಧ್ಯಮ ಸಂಸ್ಥೆಗಳು ನಿಯಮವನ್ನು ಅನುಸರಿಸಲು ವಿಫಲವಾದಲ್ಲಿ 274 ಕೋಟಿ ರೂ. ವರೆಗೆ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಹೊಸ ನಿಯಮ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರ ಹಿಂದೆ ಬರಲು ಆಸ್ಟ್ರೇಲಿಯಾ ಪೋಷಕರನ್ನು ಒಟ್ಟುಗೂಡಿಸಿದ್ದಾರೆ. ಯುವ ಆಸ್ಟ್ರೇಲಿಯನ್ನರು ತಮ್ಮ ಫೋನ್‌ಗಳಿಂದ ದೂರವಿರಿ. ಈಜುಕೊಳದಲ್ಲಿ ಈಜಾಡಿ, ಕ್ರಿಕೆಟ್ ಮೈದಾನ, ಟೆನಿಸ್ ಮತ್ತು ನೆಟ್‌ಬಾಲ್ ಅಂಕಣಗಳಲ್ಲಿ ಆಟವಾಡಿ ಎಂದು ಕರೆ ನೀಡಿದ್ದಾರೆ.

 

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow