ಪ್ರೇಮಿಗಳ ದಿನಾಚರಣೆಯಂದು ರಾಜು ಜೇಮ್ಸ್ ಬಾಂಡ್ ರಿಲೀಸ್: ಪ್ರೀ ರಿಲೀಸ್ ಇವೆಂಟ್‌ಗೆ ರಮ್ಯಾ, ಗೃಹ ಸಚಿವರು ಭಾಗಿ!

ಫೆಬ್ರವರಿ 11, 2025 - 18:07
 0  14
ಪ್ರೇಮಿಗಳ ದಿನಾಚರಣೆಯಂದು ರಾಜು ಜೇಮ್ಸ್ ಬಾಂಡ್ ರಿಲೀಸ್: ಪ್ರೀ ರಿಲೀಸ್ ಇವೆಂಟ್‌ಗೆ ರಮ್ಯಾ, ಗೃಹ ಸಚಿವರು ಭಾಗಿ!

ಫಸ್ಟ್ Rank ರಾಜು’ ಖ್ಯಾತಿಯ ಗುರುನಂದನ್ ಅವರ ರಾಜು ಜೇಮ್ಸ್ ಬಾಂಡ್  ಚಿತ್ರವು ಫೆ. 14 ರಂದು ರಿಲೀಸ್ ಆಗಲಿದೆ. 

ಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲಿ ಚಿತ್ರದ ಪ್ರೀ ರಿಲೀಸ್ ಇವೆಂಟ್ ಇದೇ ಫೆಬ್ರವರಿ 11ರಂದು ಅಂದ್ರೆ ನಾಳೆಯೇ ನಡೆಯಲಿದೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಸ್ಯಾಂಡಲ್‌ವುಡ್ ನಟಿ ರಮ್ಯಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಗುರುನಂದನ್ ಈ ಚಿತ್ರದ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿಯಾಗಿ ಮೃದುಲ ಅಭಿನಯಿಸಿದ್ದಾರೆ. ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ. 

ಅತ್ಯಂತ ನಿರೀಕ್ಷಿತ ಸಿನಿಮಾ ರಾಜು ಜೇಮ್ಸ್ ಬಾಂಡ್ ಚಿತ್ರದ ಪ್ರೀ ರಿಲೀಸ್ ಇವೆಂಟ್‌ಗೆ ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ನಟಿ ರಮ್ಯಾ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow