ಬಾನು ಮುಷ್ತಾಕ್ ದನ ತಿನ್ನೋದನ್ನ ಬಿಜೆಪಿಯವರು ನೋಡಿದ್ದಾರಾ?: ಸಿಎಂ ಸಿದ್ದರಾಮಯ್ಯ ಕಿಡಿ

ಆಗಸ್ಟ್ 31, 2025 - 15:59
 0  15
ಬಾನು ಮುಷ್ತಾಕ್ ದನ ತಿನ್ನೋದನ್ನ ಬಿಜೆಪಿಯವರು ನೋಡಿದ್ದಾರಾ?: ಸಿಎಂ ಸಿದ್ದರಾಮಯ್ಯ ಕಿಡಿ

ಮೈಸೂರು: ಬಾನು ಮುಷ್ತಾಕ್ ದನ ತಿನ್ನೋದನ್ನ ಬಿಜೆಪಿಯವರು ನೋಡಿದ್ದಾರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೆರಳಣಿಕೆಯ ಮಂದಿಗೆ ಮಾತ್ರ ಬೂಕರ್ ಪ್ರಶಸ್ತಿ ಬಂದಿದೆ. ನಾ

ನೇ ಅವರ ಹೆಸರನ್ನ ಆಯ್ಕೆ ಮಾಡಿದ್ದೇನೆ. ಉದ್ಘಾಟಕರು ದನ ತಿನ್ನುವುದನ್ನ ಬಿಜೆಪಿಯವರು ನೋಡಿದ್ದಾರಾ? ಅವರನ್ನ ವಿರೋಧಿಸಲೇಬೇಕೆಂದು ವಿರೋಧ ಮಾಡ್ತಿದ್ದಾರೆ. ದಸರಾ ಒಂದು ಸಾಂಸ್ಕೃತಿಕ ಹಬ್ಬ. ಇದು ಧರ್ಮಾತೀತವಾದ ಹಬ್ಬ.

ಇದು ಎಲ್ಲಾ ಜಾತಿ, ಧರ್ಮಕ್ಕೆ ಸೇರಿದ್ದು. ನಿಸಾರ್ ಅಹಮದ್ ಕೂಡ ದಸರಾ ಉದ್ಘಾಟನೆ ಮಾಡಿದ್ದಾರೆ. ಟಿಪ್ಪು ಹೈದಾರಲಿ ಕೂಡ ದಸರಾ ನಡೆಸಿದ್ದಾರೆ. ದಿವಾನ್ ಮಿರ್ಜಾ ಇಸ್ಮಾಯಿಲ್ ಕೂಡ ದಸರಾ ನಡೆಸಿದ್ದಾರೆ. ಇದಕ್ಕೆ ಧರ್ಮದ ಲೇಪನ ಬಳಿಯುವುದು ಸರಿಯಲ್ಲ ಎಂದು ಹೇಳಿದರು.

ಎದೆಯ ಹಣತೆ  ಭಾಷಾಂತರ ಮಾಡಿದ ದೀಪಾ ಭಾಸ್ತಿಯವರಿಗೂ  ಅರಮನೆಯ ಮುಂದೆ ಗೌರವ ಸಲ್ಲಿಸಬೇಕಿತ್ತು ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಸರ್ಕಾರ ಈಗಾಗಲೇ ದೀಪಾ ಭಾಸ್ತಿ ಹಾಗೂ ಭಾನು ಮುಸ್ತಾಕ್ ಅವರಿಗೆ ತಲಾ ಹತ್ತು ಲಕ್ಷ ರೂಗಳನ್ನು ನೀಡಿ ಇಬ್ಬರನ್ನು ಸರ್ಕಾರ ಸನ್ಮಾನಿಸಿ, ಗೌರವಿಸಿದೆ ಎಂದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow