ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಸಜ್ಜಾಯ್ತು ವೇದಿಕೆ: ಯಾರಾಗ್ತಾರೆ ವಿನ್ನರ್!? 2 ದಿನ ಸಂಭ್ರಮವೋ ಸಂಭ್ರಮ!

ಜನವರಿ 24, 2025 - 20:02
 0  14
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಸಜ್ಜಾಯ್ತು ವೇದಿಕೆ: ಯಾರಾಗ್ತಾರೆ ವಿನ್ನರ್!? 2 ದಿನ ಸಂಭ್ರಮವೋ ಸಂಭ್ರಮ!

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ಗ್ರ್ಯಾಂಡ್‌ ಫಿನಾಲೆಗೆ ಇನ್ನು ಎರಡು ದಿನ ಮಾತ್ರ ಬಾಕಿಯಿದೆ. ಇದು ಸುದೀಪ್‌ ನಿರೂಪಣೆಯ ಕೊನೆಯ ಸೀಸನ್‌ ಕೂಡ ಆಗಿದೆ. ಈ ಹೊತ್ತಿನಲ್ಲಿ ಮನೆಯಲ್ಲಿರುವ 6 ಸ್ಪರ್ಧಿಗಳ ಪೈಕಿ ಒಬ್ಬರಿಗೆ ಅತಿ ಹೆಚ್ಚು ಮತಗಳು ಬಂದಿವೆ ಎನ್ನಲಾಗ್ತಿದೆ.

ಬಿಗ್ ಬಾಸ್ ಸೀಸನ್-11 ಎಂಡ್ ಆಗುತ್ತಿದೆ. ಈ ಮೂಲಕ ಈ ಸಲ ಯಾರು ಗೆಲ್ತಾರೆ ಅನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ತ್ರಿವಿಕ್ರಮ್ ಗೆಲ್ತಾರಾ? ಉಗ್ರಂ ಮಂಜು ವಿನ್ ಆಗ್ತಾರಾ? ಅಥವಾ ಹನುಮಂತ್‌ನೇ ಗೆದ್ದು ಬೀಗ್ತಾರಾ? ಎಂಬ ಪ್ರಶ್ನೆ ಉದ್ಭವಿಸಿದೆ. 

ಹೆಚ್ಚು ಕಡಿಮೆ 120 ದಿನಗಳವರೆಗೂ ನಡೆದ ಈ ಒಂದು ಆಟದಲ್ಲಿ 17 ವಾರಗಳೇ ಕಳೆದಿವೆ. ಈ 17 ವಾರದ ಆಟಕ್ಕೆ ತೆರೆ ಬೀಳುತ್ತಿದೆ. ಮನೆ ಒಳಗೆ ಹೋದ ಸದಸ್ಯರಲ್ಲಿ ಕಡೆಯದಾಗಿ 6 ಜನ ಉಳಿದಿದ್ದಾರೆ. ಈ ಆರು ಜನರಲ್ಲಿ ಉಳಿದ ನಾಲ್ಕು ಜನರಲ್ಲಿ ಯಾರು ಮನೆಗೆ ಹೋಗುತ್ತಾರೆ. ವೇದಿಕೆ ಮೇಲೆ ಕಿಚ್ಚನ ಮುಂದೆ ನಿಲ್ಲುವವರು ಯಾರು? ಈ ಪ್ರಶ್ನೆ ಇದ್ದೇ ಇದೆ.

ಈ ಎರಡು ಹೆಸರು ಹೆಚ್ಚು ಕೇಳಿ ಬರುತ್ತಿವೆ. ಹನುಮಂತ್ ಗೆಲ್ತಾನೆ ಅನ್ನೋ ಮಾತು ಜಾಸ್ತಿ ಇದೆ. ಆದರೆ, ಕಡೆಯವಾರದಲ್ಲಿ ತ್ರಿವಿಕ್ರಮ್ ಜಾಸ್ತಿನೇ ಆ್ಯಕ್ಟೀವ್ ಆಗಿದ್ದಾರೆ. ಟಾಸ್ಕ್ ಬಿಟ್ರೆ ಮಾತೇ ಆಡದ ತ್ರಿವಿಕ್ರಮ್ ಈಗ ಹೆಚ್ಚು ಮಾತ್ ಆಡುತ್ತಿದ್ದಾರೆ. ಇದನ್ನ ನೋಡಿದ್ರೆ, ತ್ರಿವಿಕ್ರಮ್ ಗೆಲುವು ಗ್ಯಾರಂಟಿ ಅನ್ನುವ ಭಾವನೆ ಕೂಡ ಮೂಡುತ್ತಿದೆ.

ಇದರ ಮಧ್ಯೆ ಇನ್ನೂ ನಾಲ್ಕು ಜನ ಇದ್ದಾರೆ ಅಲ್ವೇ? ಉಗ್ರಂ ಮಂಜು ಚೆನ್ನಾಗಿಯೇ ಆಡಿದ್ದಾರೆ. ಇಡೀ ಶೋದಲ್ಲಿ ಮಂಜಣ್ಣನ ಅಬ್ಬರ ಹೆಚ್ಚಾಗಿಯೇ ಇದೆ. ಗೌತಮಿ ಜೊತೆಗಿನ ದೋಸ್ತಿಯಿಂದ ಮಂಜಣ್ಣನ ಓಟದಲ್ಲಿ ಒಂದಷ್ಟು ವ್ಯತ್ಯಾಸ ಆಗಿರೋದು ಇದೆ. ಆದರೆ, ಆಟ ಅಂತ ಬಂದ್ರೆ ಮಂಜು ಕೂಡ ಜೋರಾಗಿಯೇ ಆಡಿದ್ದಾರೆ.

50 ದಿನ ಆದ್ಮೇಲೆ ಬಂದ ರಜತ್ ಕಿಶನ್ ಕೂಡ ಅಬ್ಬರಿಸಿದ್ದಾರೆ. ಆದರೆ, ಇವರ ಆಟವನ್ನ ಹೇಗೆ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೋ ಏನೋ? ಆದರೆ, ಸದ್ಯ ಹೊರಗಡೆಯ ಮಾಹಿತಿ ಪ್ರಕಾರ ದೊಡ್ಮನೆಯ ವಿನ್ನರ್ ಬೇರೆ ಯಾರೋ ಅಲ್ಲ. ಅದು ತ್ರಿವಿಕ್ರಮ್ ಅನ್ನೋ ಮಾತು ಬಲವಾಗಿಯೇ ಕೇಳಿ ಬರುತ್ತಿದೆ. ಒಟ್ಟಾರೆ, ದೊಡ್ಮನೆಯಲ್ಲಿ ಎರಡು ದಿನ ಗ್ರ್ಯಾಂಡ್ ಫಿನಾಲೆ ಪ್ಲಾನ್ ಆಗಿದೆ. ಸಂಜೆ ೬ ಗಂಟೆಗೇನೆ ಎರಡೂ ದಿನ ಪ್ರಸಾರ ಆಗುತ್ತದೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow