ಬಿಗ್ ಬಾಸ್ ಮನೆಯಲ್ಲೂ ದರ್ಶನ್ ಸಿನಿಮಾ ವಿಚಾರ: ಖುಷಿಯಲ್ಲಿ ಧರ್ಮಗೆ ಸೃಜನ್ ಹೇಳಿದ್ದೇನು!?

ಬಿಗ್ ಬಾಸ್ ಸೀಸನ್ 11 ರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸಿನಿಮಾದ ಚರ್ಚೆ ನಡೆದಿದೆ. ಎಸ್ ಈ ವಿಚಾರವನ್ನು ಸೃಜನ್ ಲೋಕೇಶ್ ಅವರು, ಧರ್ಮ ಅವರಿಗೆ ಖುಷಿಯಿಂದ ಹೇಳಿದ್ದಾರೆ.
ದಿನಕರ್ ತುಗುದೀಪ್ ಅವರ ನಿರ್ದೇಶನದ ನವಗ್ರಹ ಸಿನಿಮಾ ಈಗ ನವೆಂಬರ್ 8ರಂದು ರೀ-ರಿಲೀಸ್ ಆಗುತ್ತಿದೆ. ಮೈಸೂರಿನ ಅಂಬಾರಿ ಕದಿಯೋ ಕಥೆಯನ್ನು ಈ ಚಿತ್ರ ಹೊಂದಿದೆ. ಗೆಂಡೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸೃಜನ್ ಲೋಕೇಶ್ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಧರ್ಮ ಕೀರ್ತಿರಾಜ್ ಇದ್ದಾರೆ. ಅವರು ‘ನವಗ್ರಹ’ ಚಿತ್ರದಲ್ಲಿ ವಿಕ್ಕಿ ಹೆಸರಿನ ಪಾತ್ರ ಮಾಡಿದ್ದರು. ಸೃಜನ್ ಅವರು ದೊಡ್ಮನೆ ಒಳಗೆ ಬಂದಿದ್ದನ್ನು ನೋಡಿ ಧರ್ಮಗೆ ಖುಷಿ ಆಗಿದೆ. ಸೃಜನ್ ಅವರು ಬಿಗ್ ಬಾಸ್ಗೆ ಅತಿಥಿಯಾಗಿ ಬರುತ್ತಿದ್ದಂತೆ ಯಾರ ಯಾರ ಪರಿಚಯ ಇದೆ ಎಂಬುದನ್ನು ಹೇಳಿದರು. ಅದೇ ರೀತಿ ಧರ್ಮ ಬಳಿ ವಿಶೇಷ ಸುದ್ದಿ ಇರೋದಾಗಿ ಹೇಳಿದರು.
ಧರ್ಮ ಒಂದು ಗುಡ್ ನ್ಯೂಸ್ ಇದೆ. ನವಗ್ರಹ ಸಿನಿಮಾ ಮತ್ತೆ ರಿಲೀಸ್ ಆಗುತ್ತಿದೆ’ ಎಂದು ಸೃಜನ್ ಹೇಳಿದರು. ಇದನ್ನು ಕೇಳಿ ‘ಯಾವಾಗ’ ಎಂದು ಪ್ರಶ್ನೆ ಮಾಡಿದರು ಧರ್ಮ. ‘ನವೆಂಬರ್ 8’ ಎಂದು ಸೃಜನ್ ಉತ್ತರ ಕೊಟ್ಟರು. ಇದನ್ನು ಕೇಳಿ ಧರ್ಮ ಅವರು ಸಖತ್ ಖುಷಿಪಟ್ಟರು.
ನಿಮ್ಮ ಪ್ರತಿಕ್ರಿಯೆ ಏನು?






