ಸಾವನ್ನೇ ಗೆದ್ದು ಬಂದ ವಿದ್ಯಾರ್ಥಿನಿ: 12 ಗಂಟೆಗಳ ಕಾರ್ಯಾಚರಣೆ ಬಳಿಕ ಯುವತಿಯ ರಕ್ಷಣೆ

ಅಕ್ಟೋಬರ್ 28, 2024 - 16:02
 0  32
ಸಾವನ್ನೇ ಗೆದ್ದು ಬಂದ ವಿದ್ಯಾರ್ಥಿನಿ: 12 ಗಂಟೆಗಳ ಕಾರ್ಯಾಚರಣೆ ಬಳಿಕ ಯುವತಿಯ ರಕ್ಷಣೆ

ತುಮಕೂರು: ಸೆಲ್ಫಿ ಫೋಟೋ ತೆಗೆದುಕೊಳ್ಳುವಾಗ ಕೆರೆ ಕೋಡಿ ನೀರಿನಲ್ಲಿ ಕೊಚ್ಚಿಹೋಗಿದ್ದ ಯುವತಿ ಸಾವನ್ನು ಗೆದ್ದು ಬಂದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಶಿವರಾಂಪುರ ಗ್ರಾಮದ ಹಂಸಾ (19) ತುಮಕೂರು ಜಿಲ್ಲೆಯ ಮೈದಾಳ ಕೆರೆಯ ಕೋಡಿ ನೀರಿನಲ್ಲಿ ಭಾನುವಾರ ಕೊಚ್ಚಿ ಹೋಗಿದ್ದಳು. ಸತತ 12 ಗಂಟೆಗಳ ಕಾರ್ಯಾಚರಣೆ ಮೂಲಕ ಅಗ್ನಿ ಶಾಮಕ ದಳದವರು ಯುವತಿಯನ್ನು ರಕ್ಷಣೆ ಮಾಡಿದ್ದಾರೆ.

ಕಲ್ಲುಬಂಡೆಯ ಗುಹೆಯೊಳಗೆ ಯುವತಿ ಹಂಸಾ ಸಿಲುಕಿಕೊಂಡಿದ್ದಳು. ಅದೃಷ್ಟವಶಾತ್ ಆ ಭಾಗದಲ್ಲಿ ಮುಂಡಿಯುದ್ದಕ್ಕಷ್ಟೇ ನೀರಿತ್ತು. ಹಾಗಾಗಿ ಹಂಸಾಳಿಗೆ ತೊಂದರೆಯಾಗಿಲ್ಲ. ರಕ್ಷಣೆ ಮಾಡಿದ ಬಳಿಕ ಹಂಸಾಳನ್ನು ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆ ಕೋಡಿ ನೀರನ್ನ ಬೇರೆಡೆಗೆ ಡೈವರ್ಟ್ ಮಾಡಿ ಕಾರ್ಯಾಚರಣೆ ಆರಂಭಿಸಿದ್ದರು. ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ಹಂಸಾರನ್ನು ರಕ್ಷಣೆ ಮಾಡಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow