ಬಿಗ್ ಶಾಕಿಂಗ್ ನ್ಯೂಸ್: Jio, Airtel, BSNL ಗ್ರಾಹಕರೇ ಇಲ್ಲಿ ಕೇಳಿ, ಬ್ಯಾನ್ ಆಗಿವೆ 1.7 ಕೋಟಿ ಸಿಮ್! ಈಗಲೇ ಚೆಕ್ ಮಾಡಿ!

ಅಕ್ಟೋಬರ್ 8, 2024 - 22:09
 0  28
ಬಿಗ್ ಶಾಕಿಂಗ್ ನ್ಯೂಸ್: Jio, Airtel, BSNL ಗ್ರಾಹಕರೇ ಇಲ್ಲಿ ಕೇಳಿ, ಬ್ಯಾನ್ ಆಗಿವೆ 1.7 ಕೋಟಿ ಸಿಮ್! ಈಗಲೇ ಚೆಕ್ ಮಾಡಿ!

ನೀವು ಬೇರೆಯವರ ಹೆಸರಲ್ಲಿ ಸಿಮ್ ಬಳಸ್ತಿದ್ದೀರಾ!? ಹಾಗಿದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ. ಬರೋಬ್ಬರಿ 1.7 ಕೋಟಿ ಸಿಮ್ ಬ್ಯಾನ್ ಆಗಿದೆ ಎನ್ನಲಾಗಿದೆ. 

ಟೆಲಿಕಾಂ ಆಪರೇಟರ್‌ಗಳ ಸುಮಾರು 1.7 ಕೋಟಿ ಸಿಮ್ ಕಾರ್ಡ್‌ಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿದೆ. ನಕಲಿ ದಾಖಲೆಗಳ ಮೂಲಕ ಪಡೆಯಲಾದ ಸಿಮ್​​ಕಾರ್ಡ್​ಗಳನ್ನು ಬ್ಲಾಕ್ ಮಾಡಿದೆ. ಈ ಮೂಲಕ ನೀವು ಬೇರೊಬ್ಬರ ಹೆಸರಿನಲ್ಲಿರುವ ಸಿಮ್ ಕಾರ್ಡ್​ ಬಳಸಬಾರದು ಎಂದು ಎಚ್ಚರಿಕೆ ನೀಡಿದೆ. ಒಂದು ವೇಳೆ ನೀವು ಬಳಸುತ್ತಿರುವ ಸಿಮ್ ಕಾರ್ಡ್​ ನಿಮ್ಮ ಹೆಸರಲ್ಲಿ ಎಲ್ಲವೆಂದರೆ ಅದು ಬ್ಲಾಕ್ ಆಗುವ ಸಾಧ್ಯತೆ ಹೆಚ್ಚಿದೆ.

ಸ್ಪ್ಯಾಮ್ ಕರೆಗಳನ್ನು ನಿಲ್ಲಿಸಲು ಸರ್ಕಾರವು ನಿರಂತರವಾಗಿ ಶ್ರಮಿಸುತ್ತಿದೆ. ಅದರ ಮುಂದುವರಿದ ಭಾಗವಾಗಿ ಇಂಥ ನಿರ್ಧಾರ ಕೈಗೊಂಡಿದೆ. AI ಸಹಾಯದಿಂದ ಸಿಮ್‌ಗಳನ್ನು ನಿರ್ಬಂಧಿಸಲಾಗಿದೆ. ನಕಲಿ ಅಥವಾ ನಕಲಿ ದಾಖಲೆಗಳೊಂದಿಗೆ ಖರೀದಿಸಿದ 1.77 ಕೋಟಿ ಮೊಬೈಲ್ ಸಂಪರ್ಕಗಳನ್ನು ಕೃತಕ AI ಸಹಾಯದಿಂದ ನಿರ್ಬಂಧಿಸಲಾಗಿದೆ. ಮಾತ್ರವಲ್ಲ, 45 ಲಕ್ಷ ಅಂತರರಾಷ್ಟ್ರೀಯ ನಕಲಿ ಕರೆಗಳನ್ನು ನಿರ್ಬಂಧಿಸಲಾಗಿದೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಸಿಮ್ ಕಾರ್ಡ್‌ಗಳನ್ನು ಬ್ಲಾಕ್ ಮಾಡಲಾಗುವುದು ಎಂದು ಕೇಂದ್ರ ಹೇಳಿದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow