ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ: ಆರೋಪಿಗಳು ಅಂದರ್
ಹಾಸನ ನಗರದ ಪೆನ್ಷನ್ ಮೊಹಲ್ಲಾ ಪ್ರದೇಶದಲ್ಲಿ ಮಾನವೀಯತೆಯನ್ನು ನಾಚಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. 28 ವರ್ಷದ ಬುದ್ಧಿಮಾಂದ್ಯ ಯುವತಿಯನ್ನು ನಾಲ್ವರು ಕೀಚಕರು ಗುಂಪು ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ನಡೆದಿದೆ.
ಆರೋಪಿಗಳು – ಇಮ್ರಾನ್, ಅಜೀಜ್, ಇರ್ಫಾನ್ ಹಾಗೂ ಇನ್ನೋರ್ವ – ಯುವತಿಯನ್ನು ಹಿಂಸಿಸಿ, ತಮ್ಮ ಕೃತ್ಯವನ್ನು ಮೊಬೈಲ್ ಫೋನ್ನಲ್ಲಿ ಚಿತ್ರೀಕರಿಸಿದ್ದರು. ಈ ಅಶ್ಲೀಲ ವಿಡಿಯೋ ಯುವತಿಯ ತಮ್ಮನ ಮೊಬೈಲ್ಗೆ ತಲುಪಿದ ಬಳಿಕ ಕುಟುಂಬ ಬೆಚ್ಚಿಬಿದ್ದು ತಕ್ಷಣವೇ ಮೊಹಲ್ಲಾ ಠಾಣೆಗೆ ದೂರು ನೀಡಿದೆ.
ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪೈಕಿ ಇರ್ಫಾನ್, ಅಜೀಜ್ ಹಾಗೂ ಇಮ್ರಾನ್ ಅವರನ್ನು ಬಂಧಿಸಿದ್ದಾರೆ. ಇನ್ನೋರ್ವನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಘಟನೆಗೆ ಖಂಡನೆ ವ್ಯಕ್ತವಾಗುತ್ತಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?