ಬೆಂಗಳೂರಿನಲ್ಲಿ ನೀವು ಕೂಡ ಕ್ಯಾಬ್ ಗೆ ಅವಲಂಬಿತರಾಗಿದ್ದೀರಾ? ಹಾಗಿದ್ರೆ ಇದು ಎಷ್ಟು ಸೇಫ್? ಮೊದಲು ತಿಳಿಯಿರಿ!

ಬೆಂಗಳೂರು:- ಬೆಂಗಳೂರಿನಲ್ಲಿ ನೀವು ಕೂಡ ಕ್ಯಾಬ್ ಗೆ ಅವಲಂಬಿತರಾಗಿದ್ದೀರಾ? ಹಾಗಿದ್ರೆ ಇದು ಎಷ್ಟು ಸೇಫ್? ಒಂದು 2 ನಿಮಿಷ ಫ್ರೀ ಮಾಡಿಕೊಂಡು ಈ ಸುದ್ದಿ ಓದಿ ಜನರೇ...
ಹೌದು, ಶ್ರಾವಿಕಾ ಜೈನ್ ಬೆಂಗಳೂರಿ ನಲ್ಲಿ ರಾತ್ರಿ ಹನ್ನೊಂದು ಗಂಟೆಗೆ ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ವೇಳೆಯಲ್ಲಿ ಕ್ಯಾಬ್ ಡ್ರೈವರ್ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿರುವುದನ್ನು ಹೇಳಿಕೊಂಡಿದ್ದು, ಬಳಕೆದಾರರು ಈ ಪೋಸ್ಟ್ ಗೆ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
Shravika jain ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಬೆಂಗಳೂರಿನ ವಿಮಾನ ನಿಲ್ದಾಣದಿಂದ ರಾತ್ರಿ 11 ಗಂಟೆಗೆ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ತಮಗಾದ ಅನುಭವವನ್ನು ಸವಿವರವಾಗಿ ಹೇಳಿದ್ದಾರೆ. ಹೌದು ತಮ್ಮ ಈ ಪೋಸ್ಟ್ ನಲ್ಲಿ ‘ಈ ಬೆಂಗಳೂರು ಸುರಕ್ಷಿತ ಎಂದು ಜನರು ಹೇಳುತ್ತಾರೆ? ನಿನ್ನೆ ರಾತ್ರಿ ವಿಮಾನ ನಿಲ್ದಾಣದಿಂದ ಕ್ಯಾಬ್‌ನಲ್ಲಿ ಬಂದದ್ದು ನನ್ನ ಜೀವನದ ಅತ್ಯಂತ ಭಯಾನಕ ಅನುಭವಗಳಲ್ಲಿ ಒಂದು. ಪ್ರಯಾಣ ಪ್ರಾರಂಭವಾದ ಕೂಡಲೇ ಚಾಲಕ ನನ್ನನ್ನು ಕೆಟ್ಟ ದೃಷ್ಟಿಯಿಂದ ನೋಡಲು ಪ್ರಾರಂಭಿಸಿದ್ದಾನೆ.
ಅಷ್ಟೇ ಅಲ್ಲದೇ ಈ ವೇಳೆಯಲ್ಲಿ ಕನ್ನಡ ಅರ್ಥವಾಗುತ್ತದೆಯೇ ಎಂದು ಕೇಳಿದ್ದು, ನಾನು ಹೌದು ಎನ್ನುತ್ತಿದ್ದಂತೆ, ಅವನು ಯೂಟ್ಯೂಬ್‌ನಲ್ಲಿ ಜೋರಾಗಿ ಸಂಗೀತ ಹಾಕಿ ಜೋರಾಗಿ ಹಾಡುತ್ತಾ, ತನ್ನ ತೊಡೆಗಳನ್ನು ತಟ್ಟಲು ಪ್ರಾರಂಭಿಸಿದ್ದಾನೆ. ಈ ವೇಳೆಯಲ್ಲಿ ಪರಿಸ್ಥಿತಿ ಭಯಾನಕವಾಯಿತು. ಆ ತಕ್ಷಣವೇ ನಾನು ಹಾಡಿನ ಧ್ವನಿ ಕಡಿಮೆ ಮಾಡಲು ಪದೇ ಪದೇ ಹೇಳಿದರೂ ಕೂಡ ಈ ಚಾಲಕನು ಕೆಟ್ಟ ನೋಟದಿಂದ ಪ್ರತಿಕ್ರಿಯಿಸಿದ್ದಾನೆ.
ಆತನ ಈ ಕೆಟ್ಟ ನಡವಳಿಕೆಯನ್ನು ವಿರೋಧಿಸಿದರೂ ಕೂಡ ಆತನ ವರ್ತನೆಯೂ ಮಿತಿ ಮೀರಿದ್ದು, ಕಾರಿನಲ್ಲಿ ಸಿಗರೇಟ್ ಸೇದಿದ್ದಾನೆ. ಆ ಸಮಯದಲ್ಲಿ ನಾನು ಒಂಟಿಯಾಗಿದ್ದೆ, ರಾತ್ರಿ ಬೇರೆಯಾಗಿತ್ತು. ಈ ವೇಳೆಯಲ್ಲಿ ನನ್ನ ಮೂವರು ಸ್ನೇಹಿತರು ನನಗೆ ಕರೆ ಮಾಡಿ ನನ್ನ ಸ್ಥಳವನ್ನು ಟ್ರ್ಯಾಕ್ ಮಾಡುತ್ತಿದ್ದರು.ಅದಲ್ಲದೇ, ಈ ಚಾಲಕನು ರಸ್ತೆಯ ಮಧ್ಯದಲ್ಲಿ ಕಾರನ್ನು ನಿಲ್ಲಿಸಿ ತಾನು ಟೀ ಕುಡಿಯಲು ಬಯಸುವುದಾಗಿ ಹೇಳಿದ
ಆದರೆ ನಾನು, ನನ್ನನ್ನು ಮೊದಲು ಮನೆಗೆ ಕರೆದೊಯ್ಯುವಂತೆ ವಿನಂತಿಸಿದರೂ, ಚಾಲಕ ಹೊರಗೆ ಹೋಗಿದ್ದು ಹತ್ತು ನಿಮಿಷಗಳ ನಂತರ ಹಿಂತಿರುಗಿದ. ಈ ಪ್ರಯಾಣದ ಉಳಿದ ಭಾಗದಲ್ಲಿ ಅವನು ತನ್ನನ್ನು ಅನುಚಿತವಾಗಿ ನೋಡುತ್ತಲೇ ಇದ್ದದ್ದು ನನಗೆ ಆ ಕ್ಷಣ ಭಯಾನಕವಾಗಿತ್ತು. ಈ ವೇಳೆಯಲ್ಲೂ ನಾನು ಭಯಭೀತಳಾಗಿದ್ದೆ ಹಾಗೂ ಸುರಕ್ಷಿತವಾಗಿ ಮನೆ ತಲುಪಬೇಕೆಂದು ಪ್ರಾರ್ಥಿಸುತ್ತಿದ್ದೆ. ಆದರೆ ಅದೃಷ್ಟವಶಾತ್, ಯಾವುದೇ ಅಹಿತಕರ ಘಟನೆ ಸಂಭವಿಸದೆ ತಲುಪಿದೆ ಎಂದು ಬರೆದುಕೊಂಡಿದ್ದಾರೆ
ಯುವತಿಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಒಂಬತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಬಳಕೆದಾರರು ಈ ಚಾಲಕ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






