ಬೇರೊಬ್ಬರ ಜತೆ ಪತ್ನಿಯ ಅಕ್ರಮ ಸಂಬಂಧ: ನಾಲ್ವರು ಮಕ್ಕಳೊಂದಿಗೆ ರೈಲಿಗೆ ಸಿಲುಕಿ ಪ್ರಾಣಬಿಟ್ಟ ಪತಿ!

ಜೂನ್ 11, 2025 - 22:01
 0  14
ಬೇರೊಬ್ಬರ ಜತೆ ಪತ್ನಿಯ ಅಕ್ರಮ ಸಂಬಂಧ: ನಾಲ್ವರು ಮಕ್ಕಳೊಂದಿಗೆ ರೈಲಿಗೆ ಸಿಲುಕಿ ಪ್ರಾಣಬಿಟ್ಟ ಪತಿ!

ದೆಹಲಿ:- ದೆಹಲಿಯ ಫರೀದಾಬಾದ್​ನಲ್ಲಿ ಪತ್ನಿಗೆ ಬೇರೊಬ್ಬರ ಜತೆ ಅಕ್ರಮ ಸಂಬಂಧವಿದೆ ಎಂಬ ಶಂಕೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ ನಾಲ್ವರು ಮಕ್ಕಳ ಜತೆ ರೈಲಿನ ಎದುರು ಹಾರಿ ಪ್ರಾಣಬಿಟ್ಟಿರುವ ಘಟನೆ ಜರುಗಿದೆ. 

ಸ್ಥಳದಿಂದ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಮೃತರನ್ನು ಬಿಹಾರದ ನಿವಾಸಿ ಮನೋಜ್ ಮಹಾತೋ ​​ಎಂದು ಗುರುತಿಸಲಾಗಿದೆ. ಅವರ ಪತ್ನಿಯ ಫೋನ್ ನಂಬರ್​ ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ, ನಂತರ ಅವರ ಕುಟುಂಬಕ್ಕೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಬಂದು ಶವಗಳನ್ನು ಗುರುತಿಸಿದ್ದಾರೆ. ಶವಗಳನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. 

ಮೃತನ ಪತ್ನಿ ಮಾತನಾಡಿ, ತನ್ನ ಸೋದರಸಂಬಂಧಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ಕೇಳಿ ತನಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow