ಬ್ರೇಕಪ್ ಆದ್ಮೇಲೆ ಬಿಕನಿ ಹಾಕೊಂಡೆ: ತಮ್ಮ ಲವ್ ಬಗ್ಗೆ ನಮ್ರತಾ ಮಾತು!

ಫೆಬ್ರವರಿ 16, 2025 - 20:36
 0  48
ಬ್ರೇಕಪ್ ಆದ್ಮೇಲೆ ಬಿಕನಿ ಹಾಕೊಂಡೆ: ತಮ್ಮ ಲವ್ ಬಗ್ಗೆ ನಮ್ರತಾ ಮಾತು!

ನಟಿ ನಮ್ರತಾ ಗೌಡ ಒಮ್ಮೆ ಬಿಕಿನಿ ಫೋಟೋದಿಂದ ಸಾಕಷ್ಟು ಮಾತುಗಳನ್ನು ಕೇಳುವ ಹಾಗಾಯ್ತು. ಬಾಲಿ ಪ್ರವಾಸ ಹೋದಾಗ ನಮ್ರತಾ ಗೌಡ ಅವರು ಬಿಕಿನಿ ಧರಿಸಿದ್ದರು. ಈ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆಗೆಲ್ಲ ಪಾಸಿಟಿವ್‌, ನೆಗೆಟಿವ್‌ ಪ್ರತಿಕ್ರಿಯೆ ಸಿಕ್ಕಿತ್ತು. ಈ ಬಗ್ಗೆ ಅವರು ಆರ್‌ಜೆ ರಾಜೇಶ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. ಇಂದು ಸೋಶಿಯಲ್‌ ಮೀಡಿಯಾದಲ್ಲಿ ಪಾಸಿಟಿವ್‌ ಪ್ರತಿಕ್ರಿಯೆಗಿಂತ ಜಾಸ್ತಿ ನೆಗೆಟಿವ್‌ ಮಾತುಗಳೇ ಕೇಳಿ ಬರುತ್ತವೆ. ಅದರಲ್ಲಿಯೂ ನಟಿಯರ ಸೋಶಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲೇ ನೆಗೆಟಿವ್‌ ಕಾಮೆಂಟ್‌ಗಳು ರಾರಾಜಿಸೋದು ಜಾಸ್ತಿ ಅಂತವರಲ್ಲಿ  ನಮ್ರತಾ ಅವರು ಒಬ್ಬರು. 

ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಮ್ರತಾ ಗೌಡ, ಅನೇಕ ಸೀರಿಯಲ್ಗಳಲ್ಲಿ ನಟಿಸಿ ಮನೆ ಮಾತಾಗಿದ್ರು. ಇದೀಗ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾದ ಬಳಿಕ ಬಿಗ್ ಬಾಸ್ ನಮ್ಮು ಎಂದೇ ಫೇಮಸ್ ಆಗಿದ್ದಾರೆ. ನಮ್ರತಾಗೆ ಅಭಿಮಾನಿಗಳ ಬಳಗ ಹೆಚ್ಚಾಗಿದೆ.

ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ನಟಿ ನಮ್ರತಾಗೆ ಡಿಮ್ಯಾಂಡ್ ಹೆಚ್ಚಿದೆ. ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ರು. ಇದೀಗ ನಟ ದುಬಾರಿ ಕಾರು ಖರೀದಿಸಿದ್ದಾರೆ. MG ಮೋಟರ್ ಇಂಡಿಯಾ ಕಂಪನಿಯ ಎಲೆಕ್ಟ್ರಿಕಲ್ ಕಾರನ್ನು ಖರೀದಿಸಿ ಸುದ್ದಿಯಾಗಿದ್ದರು.

ಹೆಚ್ಚಾಗಿ ನಮ್ರತಾ ಅವರು ಬಿಕ್ಕಿ ಧರಿಸಿದ ಬಳಿಕ ಆ ವಿಚಾರವಾಗಿ ಟ್ರೋಲ್‌ ಆಗಿದ್ದರು. ಆದರೀಗ ಸಂದರ್ಶನವೊಂದರಲ್ಲಿ ಬಿಕಿನಿ ಏಕೆ ಧರಿಸಿದೆ? ಹಾಗೇ ಬ್ರೇಕಪ್ ಆದ ವಿಚಾರಗಳನ್ನು ಸಂದರ್ಶನವೊಂದರಲ್ಲಿ ಶೇರ್‌ ಮಾಡಿಕೊಂಡಿದ್ದಾರೆ

ನಾನು ಯಾವತ್ತೂ ಯಾರನ್ನು ಅಪ್ರೋಚ್‌ ಮಾಡಿಲ್ಲ. ನಾನು ಆಮೇಲೆ ಒಬ್ಬರನ್ನ ಪ್ರೀತಿಸಿದೆ. ಕಾಲೇಜಿನಲ್ಲಿ ನನ್ನ ಲವ್‌ ಸ್ಟೋರಿ ತುಂಬಾ ಫೇಮಸ್‌ ಆಗಿತ್ತು. ಅದೇ ನನ್ನ ಫಸ್ಟ್‌ ಹಾಗೇ ಲಾಸ್ಟ್‌ ರಿಲೀಶನ್‌ಶಿಪ್‌. ನನಗೆ ಕಮಿಟ್‌ಮೆಂಟ್‌ ಅದೆಲ್ಲ ಆಗ ಗೊತ್ತಿರಲಿಲ್ಲ.

15 ವರ್ಷ ಇಬ್ಬರಿಗೂ ಏನು ಗೊತ್ತಿರತ್ತೆ. ಮಾತನಾಡುತ್ತಿದ್ವಿ. ಹೋಗ್ತಾ ಹೋಗ್ತಾ ಈ ಸಿನಿಮಾ ಇಂಡಸ್ಟ್ರಿಗೆ ಗಮನಿಸಿದೆ. ಆದರೆ ಆ ಮನುಷ್ಯ ತುಂಬಾ ಡೈವರ್ಟ್‌ ಆದ. ಆಮೇಲೇ ನಾನು ಅಳೋಕೆ ಶುರು ಮಾಡುತ್ತಿದ್ದೆ. ಇಬ್ಬರೂ ಕೂಡ ಫೇಸ್‌ ಮಾಡಿದ್ವಿ.

ಬಳಿಕ ನಾನು ಅದರಿಂದ ಹೊರಗೆ ಬಂದೆ. ಫೋರ್ಸ್‌ ಮಾಡಿ ನಾನೇ ಪ್ರೀತಿಯನ್ನು ಉಳಿಸಿಕೊಳ್ಳಲು ನೋಡಿದೆ. ನಾನು ತುಂಬಾ ಪ್ರೈವೇಟ್‌ ಪರ್ಸನ್‌. ನನಗೆ ಅನೌನ್ಸ್‌ ಮಾಡಬೇಕು, ಅದೆಲ್ಲ ಇಷ್ಟ ಆಗಲ್ಲ. ಇದೇ ಫಸ್ಟ್‌ ಟೈಮ್‌ ನಾನು ಹೇಳಿದ್ದು. ಅಪ್ಪ ಅಮ್ಮನಿಗೆ ಮಾತ್ರ ಈ ವಿಷಯ ಗೊತ್ತು.

ಬ್ರೇಕಪ್‌ ಆದ ಮೇಲೆ, ನಾನು ಕೂಡ ನಿರ್ಧಾರ ಮಾಡಿದೆ. ಆಗ ನಾಗಿಣಿ ಕೂಡ ನಡೆಯುತ್ತಿತ್ತು. ಜೀವನದಲ್ಲಿ ಏನಾದರೂ ಮಾಡಬೇಕು ಅಂತ, ವರ್ಕೌಟ್‌ ಮಾಡಿದೆ. ಭಾವನಾತ್ಮಕವಾಗಿ ನಾನು ತುಂಬ ಒದ್ದಾಡ್ತಿದ್ದೆ. ನನಗೊಂದು ಬ್ರೇಕ್‌ ಬೇಕಿತ್ತು. ನಾನು ಸಿಕ್ಕಾಪಟ್ಟೆ ಡಯೆಟ್‌ ಮಾಡಿದೆ, ವರ್ಕೌಟ್‌ ಮಾಡಿದೆ. ಬಿಕಿನಿ ಬಾಡಿ ತೋರಿಸೋಕೆ ಹಾಗೆ ನಾವು ವರ್ಕೌಟ್‌ ಮಾಡಬೇಕಾಗುತ್ತದೆ.

ಬಾಲಿಯಿಂದ ಬೆಂಗಳೂರಿಗೆ ಬರುತ್ತಿದ್ದಂತೆ ಫುಲ್‌ ಟ್ರೋಲ್‌ ಆಗಿದೆ. ನಾನು ವರ್ಕೌಟ್‌ ಮಾಡಿರೋ ಬಾಡಿ ಅದು, ನನ್ನ ಬಟ್ಟೆ ಅದು, ನಾನು ದುಡಿದ ದುಡ್ಡಿನಲ್ಲಿ ತಗೊಂಡ ಬಿಕಿನಿ ಅದು. ಆಗ ನಾನು ತಪ್ಪು ಮಾಡಿದ್ನಾ ಅಂತ ಅನಿಸಿತು. ನನ್ನ ತಾಯಿ ಬಳಿ ಕೇಳಿದಾಗ ಅವರು ಏನೂ ತಪ್ಪಿಲ್ಲ ಅಂದ್ರು. ಆಗ ಸಮಾಧಾನ ಆಯ್ತು

ಬಿಕಿನಿ ಹಾಕಿದಮೇಲೆ, ಬಿಗ್‌ ಬಾಸ್‌ ಶೋ ಆದನಂತರ ಸಿಕ್ಕಾಪಟ್ಟೆ ನೆಗೆಟಿವ್‌ ಮಾತು ಬಂತು. ಆ ನೆಗೆಟಿವಿಟಿ ನೋಡಿದಾಗ ನಾನು ಇನ್‌ಸ್ಟಾಗ್ರಾಮ್‌ ಅಕೌಂಟ್‌ ಡಿಲಿಟ್‌ ಮಾಡಲಾ? ಸೋಶಿಯಲ್‌ ಮೀಡಿಯಾದಿಂದ ಹೊರಗಡೆ ಬರಲಾ ಅಂತ ಕೂಡ ಆಲೋಚನೆ ಮಾಡಿದ್ದೆ. ಆಮೇಲೆ ಆ ರೀತಿ ಕಾಮೆಂಟ್‌ಗಳಿಗೆ ತಲೆ ಕೆಡಿಸಿಕೊಳ್ಳಲಿಲ್ಲ ಎಂದರು.

ನಟನೆಯ ಜೊತೆ ನಮ್ರತಾ ಗೌಡ ಮಾಡೆಲಿಂಗ್ ಕ್ಷೇತ್ರದಲ್ಲಿ ಬಹಳ ಒಳ್ಳೆ ಮಾಡಿದ್ದಾರೆ. ಅನೇಕ ಜಾಹೀರಾತುಗಳಿಗೆ ಮಾಡೆಲ್ ಆಗಿ ಕೆಲಸ ಮಾಡುತ್ತಾ ಒಳ್ಳೆ ಸಂಭಾವನೆ ಕೂಡ ಪಡೆಯುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗಿ ಬಂದ ಬಳಿಕ ನಮ್ರತಾಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow