ಅನ್ನ ಕೊಟ್ಟ ಬೆಂಗಳೂರು ಬೇಡವಾಯ್ತಾ? ರಸ್ತೆ ಗುಂಡಿ ಕಾಟಕ್ಕೆ Bengaluru ಬಿಡ್ತಿವಿ ಎಂದ ಬ್ಲಕ್​ ಬಕ್ ಕಂಪನಿ CEO!

ಸೆಪ್ಟೆಂಬರ್ 17, 2025 - 18:00
ಸೆಪ್ಟೆಂಬರ್ 17, 2025 - 16:17
 0  11
ಅನ್ನ ಕೊಟ್ಟ ಬೆಂಗಳೂರು ಬೇಡವಾಯ್ತಾ? ರಸ್ತೆ ಗುಂಡಿ ಕಾಟಕ್ಕೆ Bengaluru ಬಿಡ್ತಿವಿ ಎಂದ ಬ್ಲಕ್​ ಬಕ್ ಕಂಪನಿ CEO!

ಬೆಂಗಳೂರು: ಡಿಜಿಟಲ್ ಟ್ರಕ್ಕಿಂಗ್ ಪ್ಲಾಟ್‌ಫಾರ್ಮ್ ಬ್ಲ್ಯಾಕ್‌ಬಕ್ (Blackbuck) ತನ್ನ ಕಚೇರಿಯನ್ನು ಬೆಂಗಳೂರಿನಿಂದ ಸ್ಥಳಾಂತರಿಸಲು ನಿರ್ಧರಿಸಿದೆ. ಕಂಪನಿಯ ಸಿಇಒ ಮತ್ತು ಸಹ-ಸಂಸ್ಥಾಪಕ ರಾಜೇಶ್ ಕುಮಾರ್ ಯಬಾಜಿ (Rajesh Yabaji) ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಬ್ಲ್ಯಾಕ್‌ಬಕ್ ಬೆಂಗಳೂರನ್ನು ತೊರೆಯಲು ನಿರ್ಧರಿಸಿರುವುದು ತೆರಿಗೆ ನೀತಿ ಅಥವಾ ವ್ಯವಹಾರ ಸಂಬಂಧಿತ ಕಾರಣಗಳಿಂದಲ್ಲ. ಯಬಾಜಿ ಅವರ ಪ್ರಕಾರ, ನಗರದ ರಸ್ತೆ ಗುಂಡಿಗಳು, ಧೂಳು ಹಾಗೂ ಭಾರೀ ಟ್ರಾಫಿಕ್ ಪ್ರಮುಖ ಕಾರಣಗಳಾಗಿವೆ. ಕಚೇರಿಗೆ ಹೋಗಿ ಬರುವುದಕ್ಕೆ ಸಹೋದ್ಯೋಗಿಗಳು ಸರಾಸರಿ 1.5 ಗಂಟೆಗಿಂತ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದರು. "ಇಲ್ಲಿನ ಪರಿಸ್ಥಿತಿ ಇನ್ನೂ ಐದು ವರ್ಷ ಕಳೆದರೂ ಸುಧಾರಿಸುವ ಲಕ್ಷಣವಿಲ್ಲ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ 9 ವರ್ಷಗಳಿಂದ ಬೆಂಗಳೂರಿನ ಬೆಳ್ಳಂದೂರಿನಲ್ಲಿ ಮನೆ ಮತ್ತು ಕಚೇರಿಯನ್ನು ಹೊಂದಿದ್ದ ಬ್ಲ್ಯಾಕ್‌ಬಕ್, ಈಗ ಈ ಸಮಸ್ಯೆಗಳ ಕಾರಣದಿಂದ ಕಾರ್ಯಾಚರಣೆ ಸ್ಥಳಾಂತರಿಸಲು ಮುಂದಾಗಿದೆ.

ಆದರೆ, ಯಬಾಜಿ ಅವರ ಈ ಆರೋಪಗಳು ಬೆಂಗಳೂರಿಗರ ಆಕ್ರೋಶಕ್ಕೂ ಕಾರಣವಾಗಿವೆ. “ಇಷ್ಟು ವರ್ಷಗಳ ಕಾಲ ಬೆಂಗಳೂರಿನಿಂದ ವ್ಯವಹಾರ ಬೆಳೆಸಿಕೊಂಡು ಈಗ ಮೂಲಸೌಕರ್ಯವನ್ನು ನೆಪವನ್ನಾಗಿ ಮಾಡಿ ನಗರ ತೊರೆಯುವುದು ಸರಿಯಲ್ಲ” ಎಂಬ ಟೀಕೆಗಳು ಕೇಳಿಬಂದಿವೆ.

ಬ್ಲ್ಯಾಕ್‌ಬಕ್ ಕಚೇರಿ ಇರುವ ಔಟರ್ ರಿಂಗ್ ರೋಡ್ (ORR) ನಗರದ ಪ್ರಮುಖ ಐಟಿ ಕಾರಿಡಾರ್‌ಗಳಲ್ಲಿ ಒಂದಾಗಿದ್ದು, ಆಗಾಗ ಸಂಚಾರ ದಟ್ಟಣೆ ಎದುರಿಸುತ್ತದೆ. ಬಿಸಿನೆಸ್ ಟುಡೇ ಪ್ರಕಾರ, 2025ರ ಸೆಪ್ಟೆಂಬರ್ ವೇಳೆಗೆ ಬ್ಲ್ಯಾಕ್‌ಬಕ್‌ನ ಒಟ್ಟು ಮೌಲ್ಯ ₹10,900 ಕೋಟಿಗಿಂತ ಹೆಚ್ಚು. 2015ರಿಂದ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಂಪನಿಯ ಅಧಿಕೃತ ಹೆಸರು ಜಿಂಕಾ ಲಾಜಿಸ್ಟಿಕ್ಸ್ ಸೊಲ್ಯೂಷನ್ಸ್.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow