ಭಾರತದ ಮೇಲೆ ಟ್ರಂಪ್ʼ​ನಿಂದ ಮತ್ತೊಂದು ತೆರಿಗೆ ದಾಳಿ: ಔಷಧಗಳ ಆಮದಿನ ಮೇಲೆ 100% ಸುಂಕ ಘೋಷಿಣೆ

ಸೆಪ್ಟೆಂಬರ್ 26, 2025 - 11:11
 0  12
ಭಾರತದ ಮೇಲೆ ಟ್ರಂಪ್ʼ​ನಿಂದ ಮತ್ತೊಂದು ತೆರಿಗೆ ದಾಳಿ: ಔಷಧಗಳ ಆಮದಿನ ಮೇಲೆ 100% ಸುಂಕ ಘೋಷಿಣೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಅಕ್ಟೋಬರ್ 1 ರಿಂದ ಬ್ರ್ಯಾಂಡೆಡ್ ಅಥವಾ ಪೇಟೆಂಟ್ ಪಡೆದ ಔಷಧ ಉತ್ಪನ್ನಗಳ ಆಮದಿನ ಮೇಲೆ ಶೇ 100 ರಷ್ಟು ಸುಂಕವನ್ನು ಘೋಷಿಸಿದ್ದಾರೆ.  ಅಲ್ಲದೇ ಅಡುಗೆ ಮನೆಗೆ ಬಳಸುವ ಪಿಠೋಪಕರಣಗಳ ಮೇಲೆ 50% ಹಾಗೂ ಸ್ನಾನಗೃಹ ಪಿಠೋಪಕರಣ ಆಮದುಗಳ ಮೇಲೆ 30% ಸುಂಕ ಹಾಗೂ ಭಾರೀ ಟ್ರಕ್‌ಗಳ ಮೇಲೆ 25% ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಇದು ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಜೊತೆಗೆ ಹಣದುಬ್ಬರಕ್ಕೂ ಕಾರಣವಾಗಬಹುದು ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಅಕ್ಟೋಬರ್‌ 1ರಿಂದ ಬ್ರ್ಯಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಆಮದಿನ ಮೇಲೆ ಶೇ. 100ರಷ್ಟು ಸುಂಕ ವಿಧಿಸುತ್ತೇವೆ. ಕಂಪನಿಗಳು ಅಮೆರಿಕದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಿದ್ರೆ ಮಾತ್ರ ಈ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ನಿರ್ಮಾಣ ಹಂತದಲ್ಲಿರುವ ಕಂಪನಿಗಳಿಗೂ ಇದರಿಂದ ವಿನಾಯ್ತಿ ಸಿಗಲಿದೆ ಎಂದು ತಮ್ಮ ಸೋಷಿಯಲ್‌ ಮೀಡಿಯಾ ವೇದಿಕೆ ಟ್ರುತ್‌ ಸೋಷಿಯಲ್‌ನಲ್ಲಿ ಬರೆದುಕೊಂಡಿದ್ದಾರೆ. 

ಔಷಧಗಳ ಆಮದಿನ ಮೇಲೆ 100%, ಅಡುಗೆಮನೆ ಪಿಠೋಪಕರಣಗಳ ಮೇಲೆ 50%, ಸ್ನಾನಗೃಹ ಪಿಠೋಪಕರಣಗಳ ಮೇಲೆ 30% ಸುಂಕ ಹಾಗೂ ಭಾರೀ ಟ್ರಕ್‌ಗಳ (ಹೆವಿ ಟ್ರಕ್‌) ಮೇಲೆ 25% ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ವಿದೇಶಿ ಉತ್ಪನ್ನಗಳು ಅಮೆರಿಕಕ್ಕೆ ಪ್ರವಾಹ ರೀತಿಯಲ್ಲಿ ಹರಿದುಬರುತ್ತಿದೆ, ಇದು ತುಂಬಾ ಅನ್ಯಾಯ. ಅಲ್ಲದೇ ರಾಷ್ಟ್ರೀಯ ಭದ್ರತೆಯ ಕಾರಣದಿಂದಲೂ ಸುಂಕ ವಿಧಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow