ಭಾವಿ ಸೊಸೆಗೆ ಗಾಳ ಹಾಕಿದ ಮಾವ: ಪ್ರೀತಿ ಕಳ್ಕೊಂಡ ಮಗ ಆದ ಸನ್ಯಾಸಿ!

ಜನವರಿ 15, 2025 - 10:01
 0  7
ಭಾವಿ ಸೊಸೆಗೆ ಗಾಳ ಹಾಕಿದ ಮಾವ: ಪ್ರೀತಿ ಕಳ್ಕೊಂಡ ಮಗ ಆದ ಸನ್ಯಾಸಿ!

ವ್ಯಕ್ತಿಯೊಬ್ಬ ತನ್ನ ಭಾವಿ ಸೊಸೆ ಯನ್ನೇ ಮದುವೆ ಆಗಿರುವ ಘಟನೆ ಇದೀಗ ಬೆಳಕಿಗೆ ಬಂದಿರುವ ಘಟನೆ ಮಹಾರಾಷ್ಟ್ರದ ನಾಸಿಕದಲ್ಲಿ ಘಟನೆ ನಡೆದಿದೆ. ಈ ವಿಚಾರ ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. 

ವಿಷ್ಯ ತಿಳಿದ ಮಗ, ಸನ್ಯಾಸಿಯಾಗುವ ನಿರ್ಧಾರ ತೆಗೆದುಕೊಂಡಿದ್ದಾನೆ. ಘಟನೆ ಬೆಳಕಿಗೆ ಬರ್ತಿದ್ದಂತೆ ಜನರು ದಂಗಾಗಿದ್ದಾರೆ. ಅಷ್ಟಕ್ಕೂ ತಂದೆ ಸ್ಥಾನದಲ್ಲಿರುವ ಭಾವಿ ಮಾವ ಹೇಗೆ ತನ್ನ ಭಾವಿ ಸೊಸೆಯನ್ನು ಮದುವೆಯಾಗಲು ಸಾಧ್ಯ ಎಂಬ ಪ್ರಶ್ನೆ ಎಲ್ಲರನ್ನು ಕಾಡ್ತಿದೆ. 

ಮಗನ ಮದುವೆಗೆ ತಂದೆ ಎಲ್ಲ ತಯಾರಿ ನಡೆಸಿದ್ದ. ಮಗನಿಗಾಗಿ ಹುಡುಗಿಯನ್ನು ಹುಡುಕಿದ್ದ. ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ನೀಡಿದ್ದವು. ಮದುವೆಗೆ ದಿನಾಂಕ ಕೂಡ ಫಿಕ್ಸ್ ಆಗಿತ್ತು. ಕುಟುಂಬದಲ್ಲಿ ಮದುವೆ ತಯಾರಿ ಜೋರಾಗಿಯೇ ನಡೆದಿತ್ತು. ಮಗ ತನ್ನ ಹೊಸ ಜೀವನದ ಬಗ್ಗೆ ಕನಸು ಕಾಣ್ತಿದ್ದ. ಆದ್ರೆ ಆಗಿದ್ದೇ ಬೇರೆ. ನಂಬಿದ್ದ ಅಪ್ಪನೇ ಕೈಕೊಟ್ಟಿದ್ದಾನೆ. ಅದ್ಯಾವಾಗ ಭಾವಿ ಸೊಸೆ ಮೇಲೆ ಆತನಿಗೆ ಪ್ರೀತಿಯಾಯ್ತೋ ತಿಳಿಯದು. ಇಬ್ಬರು ಮುಹೂರ್ತ ನೋಡದೆ, ಮನೆಯವರಿಗೆ ವಿಷ್ಯ ತಿಳಿಸದೆ ಮದುವೆ ಆಗಿದ್ದಾರೆ. ಇದನ್ನು ಕೇಳಿದ ಮಗ ದಿಗ್ಭ್ರಮೆಗೊಂಡಿದ್ದಾನೆ

ನಿಶ್ಚಿತಾರ್ಥವಾಗಿದ್ದ ಹುಡುಗಿ ಕೈಕೊಟ್ಟ ಮೇಲೆ ಮಗ ಸಂಸಾರದ ಮೇಲೆ ಜಿಗುಪ್ಸೆ ಹೊಂದಿದ್ದಾನೆ. ಅಪ್ಪನ ಮೋಸದಿಂದ ಬೇಸತ್ತಿರುವ ಮಗ, ಜೀವನದಲ್ಲಿ ಮದುವೆಯಾಗದೆ, ಒಂಟಿಯಾಗಿರುವ ನಿರ್ಧಾರಕ್ಕೆ ಬಂದಿದ್ದಾನೆ. ತಂದೆ, ಮಗನಿಗೆ ಇನ್ನೊಂದು ಹುಡುಕಿ ಹುಡುಕುವುದಾಗಿ ಭರವಸೆ ನೀಡಿದ್ದ. ಮನೆಯವರೆಲ್ಲ ಆತನ ಮನವೊಲಿಸುವ ಪ್ರಯತ್ನ ನಡೆಸಿದ್ದರು. ತಂದೆಯಿಂದ ಬೇರೆಯಾಗಿ ವಾಸವಾಗುವಂತೆ ಸಲಹೆ ನೀಡಿದ್ದರು. ಮದುವೆ ಆಗಲು ಬೇರೆ ಹುಡುಗಿ ಹುಡುಕುವುದಾಗಿ ಅವರೆಲ್ಲ ಭರವಸೆ ನೀಡಿದ್ದರು. ಆದ್ರೆ ಮಗ ಮಾತ್ರ ಮನಸ್ಸು ಬದಲಿಸಲಿಲ್ಲ. ತನ್ನನ್ನು ಮದುವೆ ಆಗ್ಬೇಕಿದ್ದ ಹುಡುಗಿ ತನ್ನ ಅಪ್ಪನ ಕೈ ಹಿಡಿದು ಸಂಸಾರ ನಡೆಸಲು ಮುಂದಾಗಿದ್ದು ಆತನಿಗೆ ಆಘಾತವನ್ನುಂಟು ಮಾಡಿದೆ. ಪ್ರೀತಿ, ಮದುವೆ ಮೇಲಿನ ನಂಬಿಕೆಯನ್ನು ಆತ ಕಳೆದುಕೊಂಡಿದ್ದಾನೆ ಎಂದು ಸಂಬಂಧಿಕರು ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow