ಭಿಕ್ಷುಕನ ಕೈಯಲ್ಲಿ ಐಫೋನ್ 16 ಪ್ರೋ ಮ್ಯಾಕ್ಸ್! ಬೆಚ್ಚಿ ಬಿದ್ದ ನೆಟ್ಟಿಗರು

ಫೆಬ್ರವರಿ 20, 2025 - 21:19
ಫೆಬ್ರವರಿ 20, 2025 - 09:48
 0  11
ಭಿಕ್ಷುಕನ ಕೈಯಲ್ಲಿ ಐಫೋನ್ 16 ಪ್ರೋ ಮ್ಯಾಕ್ಸ್! ಬೆಚ್ಚಿ ಬಿದ್ದ ನೆಟ್ಟಿಗರು

ಫೋನ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಟೆಕ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹೊಂದಿರುವ ಸ್ಮಾರ್ಟ್ಫೋನ್ ಕಂಪನಿಗಳಲ್ಲಿ ಆ್ಯಪಲ್ ಕಂಪನಿಯೂ ಒಂದು. ಹೆಚ್ಚಿನವರಿಗೆ ಈ ಕಂಪನಿಯ ಸಾಧನಗಳನ್ನು ಖರೀದಿಸ್ಬೇಕು ಅನ್ನೋ ಆಸೆ ಇರುತ್ತೆ. ಆದ್ರೆ ಬೆಲೆ ಏರಿಕೆಯಿಂದಾಗಿ ಹೆಚ್ಚಿನವರಿಗೆ ಆಸೆ ಈಡೇರಿಸೋದೆ ಕಷ್ಟಸಾಧ್ಯವಾಗಿದೆ.

 ಆದ್ರೆ ಇಲ್ಲೊಬ್ಬ ಭಿಕ್ಷುಕ ಭಿಕ್ಷೆ ಬೇಡಿಯೇ ಇಎಂಐ ಬದಲು ಫುಲ್ ಕ್ಯಾಶ್ ಕೊಟ್ಟು ದುಬಾರಿ ಬೆಲೆಯ ಐಫೋನ್ 16 ಪ್ರೋ ಮ್ಯಾಕ್ಸ್ ಮೊಬೈಲ್ ಖರೀದಿ ಮಾಡಿದ್ದು, ಭಿಕ್ಷೆ ಬೇಡಲು ಬಂದ ಸಂದರ್ಭದಲ್ಲಿ ಈತನ ಕೈಯಲ್ಲಿದ್ದ ದುಬಾರಿ ಬೆಲೆಯ ಫೋನ್ ಕಂಡು ಜನ ಫುಲ್ ಶಾಕ್ ಆಗಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.  ರಾಜಸ್ಥಾನದ ಅಜ್ಮೀರ್ನ ವಿಕಲಾಂಗ ಚೇತನ ಭಿಕ್ಷುಕ ತಾನು ಭಿಕ್ಷೆ ಬೇಡಿದ ಹಣದಿಂದ ಸುಮಾರು 1.44 ಲಕ್ಷ ಮೌಲ್ಯದ ಐಫೋನ್ 16 ಪ್ರೋ ಮ್ಯಾಕ್ಸ್ ಮೊಬೈಲ್ ಖರೀದಿ ಮಾಡಿದ್ದಾನೆ.

ಈತ ಭಿಕ್ಷೆ ಬೇಡುತ್ತಾ ಬರುತ್ತಿದ್ದಾಗ ಈತನ ಕೈಯಲ್ಲಿ ಐಫೋನ್ ನೋಡಿದ ಜನ ಶಾಕ್ ಆಗಿ ನಿಮಗೆ ಈ ದುಬಾರಿ ಫೋನ್ ಖರೀದಿಸಲು ಹಣ ಎಲ್ಲಿಂದ ಬಂತು ಎಂದು ಕೇಳಿದಾಗ, ಆ ಭಿಕ್ಷುಕ ತಾನು ಭಿಕ್ಷಾಟನೆಯ ಮೂಲಕ ಸಂಗ್ರಹಿಸಿದ ಹಣದಿಂದ ಇಎಂಐ ಇಲ್ದೇ ಫುಲ್ ಕ್ಯಾಶ್ ಕೊಟ್ಟೇ ಮೊಬೈಲ್ ಖರೀದಿಸಿರುವುದಾಗಿ ಹೇಳಿದ್ದಾನೆ. ಈ ಕುರಿತ ವಿಡಿಯೋವನ್ನು rohit_informs ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow