ಮಕಾಡೆ ಮಲಗಿದ 'ಸಿಕಂದರ್': ಆದ್ರೂ ಕರುನಾಡಿನ ಚೆಲುವೆಗೆ ಹೆಚ್ಚಿದ ಬೇಡಿಕೆ!

ಎಪ್ರಿಲ್ 11, 2025 - 20:07
 0  11
ಮಕಾಡೆ ಮಲಗಿದ 'ಸಿಕಂದರ್': ಆದ್ರೂ ಕರುನಾಡಿನ ಚೆಲುವೆಗೆ ಹೆಚ್ಚಿದ ಬೇಡಿಕೆ!

‘ಸಿಕಂದರ್’ ಸಿನಿಮಾ ಮಕಾಡೆ ಮಲಗಿದ್ರೂ ಕೂಡ ಕರುನಾಡಿನ ಚಲುವೆ ರಶ್ಮಿಕಾ ಮಂದಣ್ಣಾಗೆ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್‌ನ ಮತ್ತೊಂದು ಸಿನಿಮಾಗೆ ರಶ್ಮಿಕಾ ಅವರು ನಾಯಕಿಯಾಗಿದ್ದಾರೆ. 

ಸಿಕಂದರ್ ಸಿನಿಮಾ ಫ್ಲಾಪ್ ಆದ್ರೂ ರಶ್ಮಿಕಾಗೆ ಇರುವ ಬೇಡಿಕೆ ಕಮ್ಮಿಯಾಗಿಲ್ಲ. ಟ್ರಯಾಂಗಲ್ ಲವ್ ಸ್ಟೋರಿ ‘ಕಾಕ್‌ಟೈಲ್ 2’ಗೆ ತಯಾರಿ ನಡೆಯುತ್ತಿದೆ. ಇದರಲ್ಲಿ ಶಾಹಿದ್‌ಗೆ ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್  ಇಬ್ಬರು ನಾಯಕಿಯರು ಜೊತೆಯಾಗಲಿದ್ದಾರೆ. ಇದರಲ್ಲಿ ರಶ್ಮಿಕಾ ಮಂದಣ್ಣಗೆ ಪವರ್‌ಫುಲ್ ರೋಲ್ ಸಿಕ್ಕಿದೆ. 

ದಿನೇಶ್ ವಿಜ್ಞಾನ್ ನಿರ್ಮಾಣದ ‘ಕಾಕ್‌ಟೈಲ್ 2’ಗೆ  ಲವ್ ರಂಜನ್ ಕಥೆ ಬರೆದಿದ್ದಾರೆ. ಹೋಮಿ ಅಡಜಾನಿಯಾ ನಿರ್ದೇಶನ ಮಾಡಲಿದ್ದಾರೆ. ಇದೇ ಆಗಸ್ಟ್‌ನಿಂದ ಸಿನಿಮಾ ಶೂಟಿಂಗ್ ಶುರುವಾಗಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow