ಮತ್ತೆ ಬಿಗ್ ಮನೆಗೆ ಹೋಗ್ತಾರಾ ಗೋಲ್ಡ್ ಸುರೇಶ್? ಏನಿದು ಹೊಸ ಟ್ವಿಸ್ಟ್?

ಡಿಸೆಂಬರ್ 19, 2024 - 22:55
 0  12
ಮತ್ತೆ ಬಿಗ್ ಮನೆಗೆ ಹೋಗ್ತಾರಾ ಗೋಲ್ಡ್ ಸುರೇಶ್? ಏನಿದು ಹೊಸ ಟ್ವಿಸ್ಟ್?

ಬಿಗ್‌ ಬಾಸ್ ಸೀಸನ್ 11, 12ನೇ ವಾರದಲ್ಲಿ ಗೋಲ್ಡ್ ಸುರೇಶ್ ಅವರು ದಿಢೀರ್ ಆಚೆ ಬಂದಿದ್ದು ಶಾಕಿಂಗ್ ನ್ಯೂಸ್ ಆಗಿತ್ತು. ಕ್ಯಾಪ್ಟನ್ ಆಗಿದ್ದ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಆಟವನ್ನ ಕ್ವಿಟ್ ಮಾಡಿದ್ದು ಏಕೆ ಅನ್ನೋದು ನಿಗೂಢವಾಗಿತ್ತು. ಬಿಗ್ ಬಾಸ್ ಮನೆಗೆ ಹೇಗೆ ಹೋದರೋ ಗೋಲ್ಡ್ ಸುರೇಶ್ ಅವರು ಹಾಗೇ ಹೊರಗೆ ಬಂದಿದ್ದರು.

ದೊಡ್ಮನೆಯಲ್ಲಿ ಏಳು – ಬೀಳು ಪಯಣ ಕಂಡ ಸುರೇಶ್ ಅವರು ಕ್ಯಾಪ್ಟನ್ ಆದ ವಾರವೇ ಮನೆಯಿಂದ ಆಚೆ ಬಂದಿದ್ದರು. ವೈಯ ಕಾರಣದಿಂದ ಅವರು ಶೋ‌ ಕ್ವಿಟ್ ಮಾಡಿದ್ದಾರೆ ಎನ್ನಲಾಗಿದೆ.

ಅವರನ್ನು ಮನೆಯಿಂದ ಆಚೆ ಕಳುಹಿಸಲಾಗಿದೆ.ಆದರೆ ಅವರು ಆಚೆ ಬಂದಿರುವ ಹಿಂದಿನ ಕಾರಣ ಏನು ಎನ್ನುವುದರ ಬಗ್ಗೆ ವೀಕ್ಷಕರಿಗೆ ಇದುವರೆಗೆ ಸ್ಪಷ್ಟನೆ ಸಿಕ್ಕಿಲ್ಲ.
ಅವರ ತಂದೆ ನಿಧನರಾಗಿದ್ದಾರೆ ಎನ್ನುವ ಮಾತು ಹರಿದಾಡಿದ್ದು, ಅದು ಸುಳ್ಳು ಎನ್ನುವುದು ಈಗಾಗಲೇ ಬಹಿರಂಗವಾಗಿದೆ. ಇನ್ನು ಕೆಲವರು ಬ್ಯುಸಿನೆಸ್ ನಲ್ಲಿ ಏನೋ ತೊಂದರೆ ಆಗಿದೆ ಅದಕ್ಕಾಗಿ ಅವರು ಆಚೆ ಬಂದಿರಬಹುದು ಎನ್ನುವ ಮಾತುಗಳನ್ನು ಆಡುತ್ತಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಕೆಲ ದಿನಗಳ ಕಾಲ ಗೋಲ್ಡ್ ಸುರೇಶ್ ಅವರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇದೀಗ ಗೋಲ್ಡ್ ಸುರೇಶ್ ಖಾಸಗಿ ವಾಹಿನಿ ಜೊತೆ ಮಾತನಾಡಿದ್ದಾರೆ. ಇದರ ಜೊತೆಗೆ ಬಿಗ್ ಬಾಸ್ ಮನೆಗೆ ಮತ್ತೆ ಹೋಗ್ತಿರಾ ಅನ್ನೋ ಪ್ರಶ್ನೆಗೆ ಹೌದು ಅನ್ನೋ ಉತ್ತರ ನೀಡಿದ್ದಾರೆ.

ಬಿಗ್ ಬಾಸ್ ಅವರು ಏನಂದ್ರೂ ಕರೆದು ನೀವು ಬರಲೇಬೇಕು. ಜನ ನಿಮ್ಮನ್ನ ಇಷ್ಟ ಪಡುತ್ತಾರೆ ಅಂತ ಹೇಳಿದ್ರೆ ನಾನು ಖಂಡಿತ ಹೋಗ್ತೀನಿ ಎಂದರು. 

ಬಿಗ್ ಬಾಸ್ ಮನೆಯಲ್ಲಿ ಡ್ರಮ್ ಟಾಸ್ಕ್ ನಡೆದಾಗ ಮಂಜು, ತ್ರಿವಿಕ್ರಮ್ ನನ್ನ ಕಾಲಿನ ಮೇಲೆ ಬಿದ್ದರು. ಮಂಜು, ತ್ರಿವಿಕ್ರಮ್‌ ಬಿದ್ದಾಗ ನನ್ನ ಕಾಲು ಫ್ರಾಕ್ಚರ್ ಆಗುತ್ತೆ. ಕಾಲಿನ ಮುಖ್ಯವಾದ ಮೂಳೆ ಡಿಸ್‌ ಲೊಕೇಟ್ ಆಗಿದೆ. ಅದರ ಮೇಲಿನ ಮೂಳೆ ವೀಕ್ ಆಗಿದೆ ಎಂದು ಡಾಕ್ಟರ್ ಹೇಳಿದ್ದರು. ನನಗೆ 3 ವಾರ ವಿಶ್ರಾಂತಿ ಪಡೆಯಲೇಬೇಕು ಎಂದು ಡಾಕ್ಟರ್ ಹೇಳಿದ್ದರು

ಕಾಲಿನ ನೋವಿನ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಯಲ್ಲಿ ನನ್ನ ಪರ್ಫಾಮೆನ್ಸ್ ಸ್ವಲ್ಪ ಕಮ್ಮಿ ಆಗಿದ್ದು ನಿಜ. ಆಮೇಲೆ ನನಗೆ ಅನ್ನಿಸಿತು. ಈ ಕಾಲು ನೋವು ಇಟ್ಟುಕೊಂಡು ಹೇಗೆ ಆಡೋದು ಅಂತ ಯೋಚ್ನೆ ಮಾಡುತ್ತಿದ್ದೆ. ಆದರೆ ಬಿಗ್ ಬಾಸ್ ತಂಡದವರು ನನಗೆ ಬೆಂಬಲ ಕೊಟ್ಟರು. ಬಿಗ್ ಬಾಸ್‌ ಮನೆಯಲ್ಲಿದ್ದ ನನ್ನ ಸ್ನೇಹಿತರು ಸಾಥ್ ಕೊಡುತ್ತಿದ್ದರು. ನನಗೆ ಹುಷಾರಿಲ್ಲ ಅಂದಾಗ ಮನೆಯಲ್ಲಿದ್ದ ಎಲ್ಲಾ ನನ್ನ ಸ್ನೇಹಿತರು ತುಂಬಾ ಚೆನ್ನಾಗಿ ನೋಡಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಬಹಳ ಒಳ್ಳೆ ಜರ್ನಿ ಎಂದು ಗೋಲ್ಡ್ ಸುರೇಶ್ ತಮ್ಮ ಖುಷಿ ಹಂಚಿಕೊಂಡಿದ್ದಾರೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow